2ನೇ ಹೆಂಡತಿ, ಮಕ್ಕಳಿಗೆ ಗಂಡನ ಆಸ್ತಿ ಮೇಲೆ ಹಕ್ಕಿದೆಯೇ? ಕಾನೂನು ಏನು ಹೇಳುತ್ತೆ
ಗಂಡನ ಆಸ್ತಿಯಲ್ಲಿ ಎರಡನೇ ಹೆಂಡತಿ ಮತ್ತು ಮಕ್ಕಳಿಗೆ ಇರುವ ಹಕ್ಕುಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
- ಎರಡನೇ ಮದುವೆ ಲೀಗಲ್ ಆದರೆ ಆಸ್ತಿಯಲ್ಲಿ ಸಮಾನ ಹಕ್ಕು
- ಮಕ್ಕಳಿಗೂ ಪೂರಕ ಆಸ್ತಿ ಹಕ್ಕುಗಳ ಮಾಹಿತಿ ನೀಡಲಾಗಿದೆ
- ಮದುವೆ ಮಾನ್ಯತೆ ಕುರಿತಂತೆ ಪ್ರಮುಖ ಕಾನೂನು ವಿವರಗಳು
Property Rights of Second Wife : ಭಾರತದಲ್ಲಿ ಹಿಂದು ವಿವಾಹ ಕಾಯ್ದೆಯ ಪ್ರಕಾರ ಮೊದಲ ಹೆಂಡತಿ ಬದುಕಿದ್ದರೆ ಎರಡನೇ ಮದುವೆ (second marriage) ಕಾನೂನಾಗಿ ಮಾನ್ಯವಲ್ಲ. ಆದರೆ, ಮೊದಲ ಹೆಂಡತಿ ನಿಧನರಾದರೆ ಅಥವಾ ಲೀಗಲ್ ಡಿವೋರ್ಸ್ ಆದ ನಂತರ ಎರಡನೇ ಮದುವೆ ನೆರವೇರಿಸಿದರೆ ಆಸ್ತಿಯಲ್ಲಿ ಎರಡನೇ ಹೆಂಡತಿ ಮತ್ತು ಮಕ್ಕಳಿಗೂ ಸಮಾನ ಹಕ್ಕು (property rights) ದೊರೆಯುತ್ತದೆ.
ಇನ್ನು, ಆಸ್ತಿಯ ಹಕ್ಕುಗಳು ಪತಿಯ ಆಸ್ತಿ ಸಂಪಾದನೆ ಪ್ರಕಾರ ಬದಲಾಗುತ್ತವೆ. ಪತಿಯ ಪಿತೃಪಾರಂಪರಿಕ ಆಸ್ತಿ ಹಾಗೂ ತನ್ನ ಸಂಪಾದಿತ ಆಸ್ತಿಯಲ್ಲಿ ಎರಡನೇ ಹೆಂಡತಿಗೆ ಹಕ್ಕುಗಳಿರುತ್ತವೆ ಆದರೆ ಒಂದು ಷರತ್ತು ಇದೆ, ಮದುವೆ ಕಾನೂನುಬದ್ಧವಾಗಿರಬೇಕು.
ಇದನ್ನೂ ಓದಿ: ಕಡಿಮೆ ಬಂಡವಾಳ ಹೈ ಪ್ರಾಫಿಟ್! ಎಳನೀರು ವ್ಯಾಪಾರದ ಲೆಕ್ಕಾಚಾರ ಗೊತ್ತಾ?
ಹೌದು, ಮದುವೆ ಎಂಬುದು ಮುಖ್ಯ. ಹಿಂದೂ ವಿವಾಹ ಕಾಯ್ದೆ, 1955 ಪ್ರಕಾರ ಪತ್ನಿ ಜೀವಂತವಾಗಿದ್ದ ಸಂದರ್ಭದಲ್ಲಿ ಎರಡನೇ ಮದುವೆ ಕಾನೂನುಬದ್ಧವಲ್ಲ. ಇತ್ತೀಚೆಗೆ ದೆಹಲಿ ಹೈಕೋರ್ಟ್ ಕೂಡ ಇದೇ ನಿರ್ಧಾರ ನೀಡಿದ್ದು, ಜೀವಂತ ಪತ್ನಿ ಇರುವ ವೇಳೆ ಎರಡನೇ ಮದುವೆ ಕಾನೂನುಬದ್ಧವಾಗುವುದಿಲ್ಲ ಎಂದಿದೆ.
ಆದರೆ, ಮೊದಲ ಹೆಂಡತಿಯು ನಿಧನರಾದರೆ ಅಥವಾ ಕಾನೂನುಬದ್ಧವಾಗಿ ವಿಚ್ಛೇದನವಾದರೆ ಮಾತ್ರ ಎರಡನೇ ಮದುವೆ ಮಾನ್ಯವಾಗುತ್ತದೆ. ಇಂತಹ ಸಂದರ್ಭದಲ್ಲಷ್ಟೆ ಎರಡನೇ ಹೆಂಡತಿ ಹಾಗೂ ಆಕೆಯ ಮಕ್ಕಳಿಗೆ ಪತಿಯ ಆಸ್ತಿಯಲ್ಲಿ ಹಕ್ಕು (Property laws) ದೊರೆಯುತ್ತದೆ.
ಜೊತೆಗೆ, ಪತಿಯು ಮೊದಲ ಹೆಂಡತಿಯೊಂದಿಗೆ ಹೊಂದಿದ್ದ ಜಂಟಿ ಆಸ್ತಿಯಲ್ಲಿ ಎರಡನೇ ಹೆಂಡತಿಗೆ ಯಾವುದೇ ಹಕ್ಕಿಲ್ಲ, ಆದರೆ ಮೊದಲ ಪತ್ನಿ ನಿಧನರಾದ ಬಳಿಕ ಆ ಆಸ್ತಿಯ ಹಕ್ಕು ಪಡೆಯಬಹುದು.
ಅಷ್ಟೇ ಅಲ್ಲದೆ, ಪತಿಯು ನಿಧನವಾದಾಗ ಆಸ್ತಿಯ ಬಗ್ಗೆ ವಿಲ್ ರಚಿಸಿದರೆ, ಎರಡನೇ ಹೆಂಡತಿಗೂ ಆ ಹಕ್ಕು ನೀಡಬಹುದು. ಆದರೆ, ವೀಲ್ ಮಾಡದೆ ಮೃತನಾದರೆ ಆಸ್ತಿಯನ್ನು ಪರಂಪರೆಯ ನಿಯಮಗಳ ಪ್ರಕಾರ ಹಂಚಲಾಗುತ್ತದೆ.
ಇದನ್ನೂ ಓದಿ: ಬ್ಯಾಂಕಿನಲ್ಲಿ ಮನೆ ಕಟ್ಟೋಕೆ ಪಡೆದ ಹೋಮ್ ಲೋನ್ ಬಡ್ಡಿ ಕಡಿಮೆ ಮಾಡೋ ಟ್ರಿಕ್
ಇಲ್ಲಿ ಮಕ್ಕಳ ಹಕ್ಕುಗಳು ಇನ್ನಷ್ಟು ಆಸಕ್ತಿದಾಯಕವಾಗಿವೆ. ಮದುವೆ ಮಾನ್ಯವಾದರೂ ಅಥವಾ ಆಗದಿದ್ದರೂ ಸಹ, ಎರಡನೇ ಹೆಂಡತಿಯ ಮಕ್ಕಳಿಗೆ ಪಿತೃ ಆಸ್ತಿಯಲ್ಲಿ ಸಂಪೂರ್ಣ ಹಕ್ಕು ಇದೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16 ಪ್ರಕಾರ, ಮದುವೆ ಮಾನ್ಯವಾಗದಿದ್ದರೂ ಮಕ್ಕಳಿಗೆ ಹಕ್ಕು ಉಳಿಯುತ್ತದೆ.
ಮತ್ತೊಂದು ಪ್ರಮುಖ ಅಂಶವೆಂದರೆ ಮುಸ್ಲಿಂ ಪರ್ಸನಲ್ ಲಾ. ಮುಸ್ಲಿಂ ಪುರುಷರು ನಾಲ್ಕು ಹೆಂಡತಿಗಳನ್ನು ವಿವಾಹವಾಗಿ ಕಾನೂನುಬದ್ಧವಾಗಿ ಹೊಂದಬಹುದು, ಆದರೆ ಎಲ್ಲ ಹೆಂಡತಿಗಳಿಗೂ ಸಮಾನ ಹಕ್ಕುಗಳು ನೀಡಬೇಕಾಗುತ್ತದೆ.
ಒಟ್ಟಾರೆ ನೋಡಿದರೆ, ಪತಿಯ ಆಸ್ತಿಯ ಹಕ್ಕುಗಳನ್ನು ನಿರ್ಧರಿಸುವುದು ಮದುವೆಯ ಕಾನೂನುಬದ್ಧತೆ ಮತ್ತು ಆಸ್ತಿಯ (Property) ಸ್ವರೂಪದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಇಂತಹ ವಿಚಾರಗಳಲ್ಲಿ ಸೂಕ್ತ ಕಾನೂನು ಸಲಹೆ ಪಡೆಯುವುದು ಅತ್ಯಗತ್ಯ, ಜೊತೆಗೆ ಉತ್ತಮ ವಕೀಲರನ್ನು (Best Lawyer) ಸಂಪರ್ಕಿಸಿ.
Property Rights of Second Wife
Our Whatsapp Channel is Live Now 👇