ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿ EMI ಕಟ್ಟಲಾಗದವರಿಗೆ ಬಿಗ್ ರಿಲೀಫ್
ಆರ್ಬಿಐನ ಹೊಸ ಸಾಲ ಪುನರ್ರಚನೆ ನಿಯಮವು ಸಾಲದ ಇಎಂಐಗಳನ್ನು ಪಾವತಿಸಲು ತೊಂದರೆ ಅನುಭವಿಸುತ್ತಿರುವವರಿಗೆ ಅನುಕೂಲವಾಗುತ್ತದೆ.

- ಇಎಂಐ ಪಾವತಿ ಕಷ್ಟದಲ್ಲಿದ್ದವರಿಗೆ ಆರ್ಥಿಕ ನಿಲುವಿಗೆ ಸಹಾಯ
- CIBIL ಸ್ಕೋರ್ ರಕ್ಷಣೆಗಾಗಿ 30 ದಿನಗಳ ಗ್ರೇಸ್ ಪೀರಿಯಡ್
- ನವೀಕರಿಸಿದ EMI ನಿಯಮ ಜನವರಿ 1, 2025 ರಿಂದ ಜಾರಿಗೆ
ನಿಮ್ಮ ಎಎಂಐ ಪಾವತಿ (EMI payment) ತಡವಾಗಿದ್ದರೆ, ತಕ್ಷಣವೇ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಹಾನಿಯಾಗುವುದಿಲ್ಲ. ಹೊಸ ನಿಯಮದಡಿ, ಬ್ಯಾಂಕುಗಳು ಈಗ ಗ್ರಾಹಕರಿಗೆ ಒಂದು ವಾರ್ನಿಂಗ್ ನೀಡಬೇಕು. ನಂತರವೂ ಪಾವತಿಯಾಗದಿದ್ದರೆ ಮಾತ್ರ ಅದು ಸಿಬಿಲ್ ರಿಪೋರ್ಟ್ (CIBIL report) ಗೆ ಹೋಗಬಹುದು. ಈ ಮೂಲಕ ಗ್ರಾಹಕರಿಗೆ ತಮ್ಮ ತಪ್ಪನ್ನು ಸರಿಪಡಿಸಲು ಒಂದು ಅವಕಾಶ ಸಿಗುತ್ತದೆ.
ಈ ನಿಯಮ ಜನವರಿ 1, 2025 ರಿಂದ ಜಾರಿಗೆ ಬಂದಿದೆ. ಅದರನಂತರ, ಎಲ್ಲ ಬ್ಯಾಂಕುಗಳು 15 ದಿನಗಳಿಗೊಮ್ಮೆ ಗ್ರಾಹಕರ EMI ಪಾವತಿ ವಿವರಗಳನ್ನು ಕ್ರೆಡಿಟ್ ಬ್ಯೂರೋಗಳಿಗೆ ಅಪ್ಡೇಟ್ ಮಾಡಬೇಕು. ಇದು ಗ್ರಾಹಕರ ಸಕಾರಾತ್ಮಕ ಕ್ರೆಡಿಟ್ ಇತಿಹಾಸವನ್ನು ಶಕ್ತಿಶಾಲಿಯಾಗಿಸಲು ಸಹಾಯ ಮಾಡುತ್ತದೆ.
ಈ ಹೊಸ (RBI restructure rule) ನಿಯಮವು ಕಡಿಮೆ ಆದಾಯದವರಿಗೂ ಅನುಕೂಲವಾಗಿದೆ. ಮಾಸಿಕ ಇಎಂಐ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲು ಸಾಲದ ಅವಧಿಯನ್ನು ವಿಸ್ತರಿಸಲು ಅವಕಾಶ ನೀಡಲಾಗಿದೆ. ಉದಾಹರಣೆಗೆ, ತಿಂಗಳಿಗೆ ₹50,000 ಪಾವತಿಸುತ್ತಿದ್ದವರು ಅದನ್ನು ₹25,000ಕ್ಕೆ ಇಳಿಸಬಹುದು.
ಸಾಲ ಮರುಪಾವತಿಯ ಅವಧಿ ಹೆಚ್ಚಿದರೂ, ಮಾಸಿಕ ಹೊರೆಯನ್ನು ಕಡಿಮೆ ಮಾಡಬಹುದು. ಮುಖ್ಯವಾಗಿ, ನೀವು ಸಮಯಕ್ಕೆ ಪಾವತಿ ಮಾಡಿದರೆ, ಡೀಫಾಲ್ಟ್ ಟ್ಯಾಗ್ ತಪ್ಪಿಸುತ್ತದೆ. ಇದು ನಿಮ್ಮ ಭವಿಷ್ಯದ ಸಾಲ ಅರ್ಜಿಗಳಿಗೆ ತುಂಬಾ ಸಹಾಯಕವಾಗುತ್ತದೆ.
ಹೆಚ್ಚಾಗಿ ಜನರು ತಮ್ಮ EMI ಪಾವತಿ ವಿಳಂಬದಿಂದಾಗಿ ಬಡ್ಡಿದರ ಹೆಚ್ಚಾಗಿ ಭರಿಸುತ್ತಾರೆ ಅಥವಾ ಬ್ಯಾಂಕುಗಳಿಂದ ಸಾಲ ನಿರಾಕರಣೆ ಎದುರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ, ಈ ನವೀಕರಣವು ಅವರಿಗೆ ಹೊಸ ದಾರಿ ನೀಡುತ್ತದೆ.
ಇನ್ನು ನಿಮ್ಮ CIBIL ಸ್ಕೋರ್ ಬಗ್ಗೆ ಮಾತನಾಡಿದರೆ, ಅದು 300 ರಿಂದ 900 ನಡುವೆ ಇರುತ್ತದೆ. 750 ಕ್ಕಿಂತ ಹೆಚ್ಚು ಅಂಕ ಹೊಂದಿರುವವರು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವಂತಾಗುತ್ತಾರೆ. ಇಎಂಐ ತಪ್ಪಿದಾಗ ಆ ಅಂಕ ಹೀನಗೊಳ್ಳುತ್ತದೆ. ಹೊಸ ನಿಯಮದ ಮೂಲಕ ಇದನ್ನು ನಿಯಂತ್ರಿಸಬಹುದು.
ಆರ್ಥಿಕ ತೊಂದರೆಯ ಸಂದರ್ಭಗಳಲ್ಲಿ, ಈ ನಿಯಮ ಖಂಡಿತವಾಗಿಯೂ ಪ್ರಯೋಜನವಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಂದಿರುವ ನಿಯಮವು ಇಎಂಐ ಪಾವತಿಸಲು ಸಾಧ್ಯವಾಗದವರಿಗೆ ಸ್ವಲ್ಪ ಪರಿಹಾರವನ್ನು ನೀಡುತ್ತದೆ.
ಸಾಲ ಪುನರ್ರಚನೆ ಆಯ್ಕೆಯ ಲಾಭವನ್ನು ಪಡೆಯುವ ಮೂಲಕ ಗ್ರಾಹಕರು ತಮ್ಮ ಇಎಂಐಗಳನ್ನು ಸುಲಭವಾಗಿ ನಿಭಾಯಿಸಬಹುದು. ಡೀಫಾಲ್ಟರ್ ಟ್ಯಾಗ್ ಅನ್ನು ತಪ್ಪಿಸಿಕೊಳ್ಳಬಹುದು.
ಆರ್ಬಿಐನ ಹೊಸ ಸಾಲ ಪುನರ್ರಚನೆ ನಿಯಮವು ಸಾಲದ ಇಎಂಐಗಳನ್ನು ಪಾವತಿಸಲು ತೊಂದರೆ ಅನುಭವಿಸುತ್ತಿರುವವರಿಗೆ ಅನುಕೂಲವಾಗುತ್ತದೆ. ಈ ನಿಯಮದ ಪ್ರಕಾರ, ಗ್ರಾಹಕರು ಮಾಸಿಕ EMI ಮೊತ್ತವನ್ನು ಕಡಿಮೆ ಮಾಡಲು ತಮ್ಮ ಸಾಲದ ನಿಯಮಗಳನ್ನು ಮಾರ್ಪಡಿಸಬಹುದು.
ಸಾಲದ ಅವಧಿಯನ್ನು ವಿಸ್ತರಿಸುವ ಮೂಲಕ ನೀವು EMI ಅನ್ನು ಕಡಿಮೆ ಮಾಡಬಹುದು. ಗೃಹ ಸಾಲ (Home Loan) ಅಥವಾ ಇತರ ವೈಯಕ್ತಿಕ ಸಾಲಗಳನ್ನು (Personal Loan) ಹೊಂದಿರುವ ಮತ್ತು ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸಲು ಕಷ್ಟಪಡುವ ಜನರಿಗೆ ಇದು ವಿಶೇಷವಾಗಿ ಸಹಾಯಕವಾಗಿದೆ.
RBI Rule to Help With EMI Burden




