6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್; ಇಂದೇ ಅರ್ಜಿ ಸಲ್ಲಿಸಿ

Story Highlights

ಎಸ್ ಬಿ ಐ ಫೌಂಡೇಶನ್ (SBI foundation) ವತಿಯಿಂದ ಆಶಾ ಸ್ಕಾಲರ್ಶಿಪ್ (SBI asha scholarship 2023) ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಪ್ರಯೋಜನ ಪಡೆದುಕೊಳ್ಳಿ.

ಕಲಿಯುವ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳ ಶುಲ್ಕವನ್ನು (School and College Fees) ಬರಿಸಲು ಹಾಗೂ ಇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಒಂದಷ್ಟು ವಿದ್ಯಾರ್ಥಿ ವೇತನ (scholarship for students) ಸಿಕ್ಕರೆ ಸಹಾಯಕವಾಗುತ್ತದೆ

ಅದರಲ್ಲೂ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ (Education) ಅನುಕೂಲವಾಗಲು ಸಾಕಷ್ಟು ಸಂಸ್ಥೆಗಳು ವಿದ್ಯಾರ್ಥಿ ವೇತನವನ್ನು (scholarship) ನೀಡುತ್ತವೆ.

ಅದೇ ರೀತಿ ಎಸ್ ಬಿ ಐ ಫೌಂಡೇಶನ್ (SBI foundation) ವತಿಯಿಂದ ಆಶಾ ಸ್ಕಾಲರ್ಶಿಪ್ (SBI asha scholarship 2023) ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಪ್ರಯೋಜನ ಪಡೆದುಕೊಳ್ಳಿ.

ಇದರ ಮೊಟ್ಟೆಗೆ ಚಿನ್ನದ ಬೆಲೆ; ಈ ಕಾಡು ಕೋಳಿ ಸಾಕಾಣಿಕೆ ಮಾಡಿದ್ರೆ ಗಳಿಸಬಹುದು ಲಕ್ಷ ಲಕ್ಷ ಆದಾಯ

ಎಸ್ ಬಿ ಐ ನ ಆಶಾ ಸ್ಕಾಲರ್ಶಿಪ್!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ತನ್ನ ಫೌಂಡೇಶನ್ ವತಿಯಿಂದ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಹತ್ತು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. 2023ರ ಆಶಾ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.

ಎಸ್ ಬಿ ಐ ಆಶಾ ಸ್ಕಾಲರ್ಶಿಪ್ ಗೆ ಯಾರು ಅರ್ಜಿ ಹಾಕಬಹುದು

*ಈ ಸ್ಕಾಲರ್ಶಿಪ್ ಆರರಿಂದ ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುವವರಿಗೆ ನೀಡಲಾಗುತ್ತದೆ.

*ಆಶಾ ಸ್ಕಾಲರ್ಶಿಪ್ ಅಡಿಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು 10 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದು.

*ಹಿಂದಿನ ವರ್ಷದಲ್ಲಿ ಶೇಕಡ 75% ಅಂಕ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಹರು.

*ಅರ್ಜಿ ಹಾಕುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 3,00,000 ಮೀರಬಾರದು.

ದೇಶದಲ್ಲೇ ಮೊದಲ ಬಜಾಜ್ ಸಿಎನ್‌ಜಿ ಬೈಕ್ ಬರಲಿದೆ, ಪವರ್ ಫುಲ್ 110ಸಿಸಿ ಎಂಜಿನ್‌ ಕೂಡ!

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

SBI Asha scholarship 2023*ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ (marks card)

*ವಿದ್ಯಾರ್ಥಿಯ ಆಧಾರ್ ಕಾರ್ಡ್ (Aadhaar card)

*ಈ ವರ್ಷ ಶಾಲೆಗೆ ಶುಲ್ಕ ಪಾವತಿಸಿದ್ದಕ್ಕೆ ಪುರಾವೆ (ಶುಲ್ಕ ಪಾವತಿ ರಶೀದಿ ಮತ್ತಿತರ ವಿವರಗಳು)

*ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆಯ ವಿವರಗಳು (bank details)

*ಆದಾಯ ಪ್ರಮಾಣ ಪತ್ರ (income certificate)

*ವಿದ್ಯಾರ್ಥಿಯ ಫೋಟೋ

ಓಲಾದಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಂದಿದೆ, ಒಮ್ಮೆ ಚಾರ್ಜ್ ಮಾಡಿದ್ರೆ 151 ಕಿ.ಮೀ ಪಕ್ಕಾ ಮೈಲೇಜ್

ಇಷ್ಟು ದಾಖಲೆಗಳನ್ನು ನೀಡಿ ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು, ಆನ್ಲೈನ್ ಅಪ್ಲಿಕೇಶನ್ ಪೂರ್ತಿ ಮಾಡಿದ ನಂತರ ಈ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; (last date) ಎಸ್ ಬಿ ಐ ನ ಆಶಾ ಸ್ಕಾಲರ್ಶಿಪ್ 2023ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 2023. ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಎಸ್ ಬಿ ಐ ನ ವೆಬ್ಸೈಟ್ ಲಿಂಕ್; https://www.buddy4study.com/page/sbi-asha-scholarship-program

SBI Asha scholarship 2023, scholarship for students of 6th to PUC

Related Stories