Business News

ಕೋಳಿ ಸಾಕಾಣಿಕೆ ಮಾಡೋಕೆ ಎಸ್‌ಬಿಐನಿಂದ ಸಿಗುತ್ತಿದೆ 9 ಲಕ್ಷ ರೂಪಾಯಿ ಸಾಲ ಸೌಲಭ್ಯ

Business Loan : ತನ್ನದೇ ಆಗಿರುವ ಸ್ವಂತ ಉದ್ಯಮ (own business) ಮಾಡಬೇಕು ಎನ್ನುವುದು ಹಲವರ ಆಸೆ. ಆದ್ರೆ ಪ್ರತಿಯೊಬ್ಬರಿಗೂ ಈ ಆಸೆ ಈಡೇರುವುದಿಲ್ಲ. ಯಾಕೆಂದರೆ ಹಲವರು ಕನಸು (dream) ಕಾಣುತ್ತಾರೆಯೇ ಹೊರತು ಅದನ್ನು ನನಸು ಮಾಡಿಕೊಳ್ಳಲು ಬೇಕಾಗುವಷ್ಟು ಬಂಡವಾಳ (instrument) ಒದಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಈ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಉದ್ಯಮ ಆರಂಭಿಸುವ ಆಸೆಯನ್ನು ಕೈಬಿಡುತ್ತಾರೆ.

ಆದರೆ ಇನ್ನು ಮುಂದೆ ಆ ಚಿಂತೆ ಬೇಡ. ನೀವು ನಿಮ್ಮದೇ ಆಗಿರುವ ಒಂದು ಕೋಳಿ ಫಾರಂ (poultry farming) ಆರಂಭಿಸುವುದಾದರೂ ಸರಿ, ಎಸ್ ಬಿ ಐ 9 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Bank loan) ಒದಗಿಸಿ ಕೊಡುತ್ತದೆ

Poultry Farming Loan Details

ಈ ಮೂಲಕ ನೀವು ಸ್ವಂತ ಉದ್ಯಮ ಆರಂಭಿಸಬಹುದು. ಎಸ್ ಬಿ ಐ (State Bank of India Business Loan) ಸಾಲ ಸೌಲಭ್ಯ ಹೇಗೆ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ

ಕೋಳಿ ಸಾಕಾಣಿಕೆಗೆ ಎಸ್‌ಬಿಐನಿಂದ ಸಾಲ ಸೌಲಭ್ಯ! (Loan by SBI for poultry farming)

ರೈತರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ (state government) ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಉತ್ತಮವಾದ ಯೋಜನೆಗಳನ್ನು ಜಾರಿಗೆ ತಂದಿದೆ, ಈ ಯೋಜನೆಗಳ ಮೂಲಕ ತಮ್ಮ ಕೃಷಿ ಬೆಳೆಯ ಜೊತೆಗೆ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆಯಂತಹ ಉಪಕಸುಬನ್ನು ಕೂಡ ರೈತರು ಮಾಡಬಹುದು.

ಹಾಗೆ ಇದೀಗ ಎಸ್ ಬಿ ಐ ಮೂಲಕವೂ ಕೂಡ ಕೋಳಿ ಫಾರಂ ಆರಂಭಿಸುವುದಕ್ಕೆ ಸಾಲ ಸೌಲಭ್ಯ ಪಡೆಯಬಹುದಾಗಿದೆ.

ಆಧಾರ್ ಉಚಿತ ಸೇವೆ, ಗಡುವು ಮಾರ್ಚ್ 14ರ ತನಕ ಮತ್ತೊಮ್ಮೆ ವಿಸ್ತರಣೆ

Poultry Farmingಎಸ್ ಬಿ ಐ ಕೋಳಿ ಫಾರಂ ಆರಂಭಿಸಲು ಗರಿಷ್ಠ 9 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಒದಗಿಸುತ್ತದೆ, ಈ ಸಾಲಕ್ಕೆ 10.75% ನಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಮೂರರಿಂದ ಐದು ವರ್ಷಗಳ ಅವಧಿಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು, ಪ್ರತಿ ತಿಂಗಳು ಇಎಂಐ ಮೂಲಕ ಸಾಲ ಮರುಪರವತಿ ಮಾಡುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಈ ಸಲಹೆಗಳೊಂದಿಗೆ ಪಡೆಯಿರಿ ಇನ್ನಷ್ಟು ಬೆನಿಫಿಟ್

ಅರ್ಜಿ ಸಲ್ಲಿಸುವುದು ಹೇಗೆ? ( How to apply)

ಕೋಳಿ ಫಾರಂ ಆರಂಭಿಸಲು ಎಸ್ ಬಿ ಐ ನಿಂದ 9 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆಯಬಹುದು. ಈ ಸಾಲ ಪಡೆದುಕೊಳ್ಳಲು ಎಲ್ಲಾ ಸರಿಯಾದ ದಾಖಲೆಗಳ ಜೊತೆಗೆ ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ (Visit SBI branch) ಭೇಟಿ ನೀಡಿ.

ಕೋಳಿ ಫಾರಂ ಆರಂಭಿಸಲು ಬೇಕಾಗುವ ವೆಚ್ಚದ ಮೊತ್ತ ಹಾಗೂ ಮತ್ತಿತರ ಖರ್ಚು ಜೊತೆಗೆ ಕೋಳಿ ಫಾರಂ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡಬೇಕು. ಇನ್ನು ನಿಮ್ಮ ಸಾಲಕ್ಕೆ ಗ್ಯಾರಂಟಿ ಕೂಡ ಒದಗಿಸಬೇಕಾಗುತ್ತದೆ.

ಕೋಳಿ ಫಾರಂ ಘಟಕ ಸ್ಥಾಪಿಸಲು ಯಾರ ತಕರಾರು ಇಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಈ ಎಲ್ಲಾ ಸರಿಯಾದ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಎಸ್‌ಬಿಐ ನಲ್ಲಿ ಸಾಲ ಪಡೆಯಬಹುದು, ಅರ್ಹ ವ್ಯಕ್ತಿಗೆ ಎಸ್ ಬಿ ಐ ಬಹಳ ತುರ್ತಾಗಿ ಸಾಲ ಸೌಲಭ್ಯ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ.

ಟ್ರ್ಯಾಕ್ಟರ್ ಖರೀದಿಗೆ ಸರ್ಕಾರದಿಂದಲೇ ಸಿಗುತ್ತೆ 50% ನಷ್ಟು ಸಬ್ಸಿಡಿ ಹಣ; ಅರ್ಜಿ ಸಲ್ಲಿಸಿ

SBI Bank Poultry Farming Business Loan Details

Our Whatsapp Channel is Live Now 👇

Whatsapp Channel

Related Stories