ನಿಮ್ಮದು ಎಸ್‌ಬಿಐ ಅಕೌಂಟ್ ಇದ್ಯಾ? ಹಾಗಾದ್ರೆ ಈ ಹೊಸ ರೂಲ್ಸ್ ಬಗ್ಗೆ ಗೊತ್ತಾಯ್ತಾ - SBI IMPS Charges

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ IMPS ವಹಿವಾಟಿಗೆ ಆಗಸ್ಟ್ 15ರಿಂದ ಶುಲ್ಕ ವಿಧಿಸಲು ನಿರ್ಧರಿಸಿದೆ. ₹25 ಸಾವಿರ ಮೇಲ್ಪಟ್ಟ ವರ್ಗಾವಣೆಗೆ ಮಾತ್ರ ಇದು ಅನ್ವಯಿಸಲಿದೆ, ಕೆಲವು ಖಾತೆಗಳಿಗೆ ವಿನಾಯಿತಿ.

  • ಎಸ್‌ಬಿಐ ಆನ್‌ಲೈನ್ IMPS ಶುಲ್ಕ ಜಾರಿ
  • ₹25,001 ಮೇಲ್ಪಟ್ಟ ಹಣ ವರ್ಗಾವಣೆಗೆ ಚಾರ್ಜ್
  • ರಕ್ಷಣಾ, ಸರ್ಕಾರಿ ಉದ್ಯೋಗಿಗಳಿಗೆ ವಿನಾಯಿತಿ

SBI IMPS Charges : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಪ್ರಮುಖ ಪ್ರಕಟಣೆ ನೀಡಿದೆ. ಆಗಸ್ಟ್ 15, 2025ರಿಂದ ಆನ್‌ಲೈನ್ IMPS (Instant Money Payment Service) ಮೂಲಕ ₹25 ಸಾವಿರಕ್ಕಿಂತ ಹೆಚ್ಚು ಹಣ ವರ್ಗಾವಣೆ ಮಾಡಿದರೆ ನಿಗದಿತ ಶುಲ್ಕವನ್ನು ವಿಧಿಸಲಾಗುವುದು.

ಇದುವರೆಗೆ ಎಲ್ಲಾ ಆನ್‌ಲೈನ್ IMPS ಸೇವೆಗಳು ಉಚಿತವಾಗಿದ್ದರೂ, ಇದೀಗ ಬ್ಯಾಂಕ್ ಶುಲ್ಕ ಮಾದರಿಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ.

ಇದನ್ನೂ ಓದಿ: ನಿಮ್ಮ ಕಾರು ಮೈಲೇಜ್ ಕೊಡ್ತಾಯಿಲ್ವಾ? ಇಲ್ಲಿದೆ ಮೈಲೇಜ್ ಹೆಚ್ಚಿಸಲು ಸರಳ ಟ್ರಿಕ್ಸ್!

IMPS ಮೂಲಕ ಒಮ್ಮೆಗೆ ಗರಿಷ್ಠ ₹5 ಲಕ್ಷವರೆಗೆ ವರ್ಗಾಯಿಸಬಹುದಾಗಿದೆ. ಹೊಸ ನಿಯಮ ಪ್ರಕಾರ:

  • ₹25,001 ರಿಂದ ₹1,00,000 ವರೆಗೆ – ₹2 + GST
  • ₹1,00,001 ರಿಂದ ₹2,00,000 ವರೆಗೆ – ₹6 + GST
  • ₹2,00,001 ರಿಂದ ₹5,00,000 ವರೆಗೆ – ₹10 + GST

ಬ್ಯಾಂಕ್ ಸ್ಪಷ್ಟಪಡಿಸಿದಂತೆ, ಈ ಬದಲಾವಣೆ ಕೇವಲ ಆನ್‌ಲೈನ್ IMPS ವಹಿವಾಟಿಗೆ ಮಾತ್ರ ಅನ್ವಯಿಸುತ್ತದೆ. ಬ್ಯಾಂಕ್ ಶಾಖೆಗಳಲ್ಲಿನ IMPS ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ – ಮೊತ್ತದ ಮೇಲೆ ಅವಲಂಬಿಸಿ ₹2 + GST ರಿಂದ ₹20 + GST ವರೆಗೆ ಶುಲ್ಕ ಇದೆ.

ಕೆಲವು ಖಾತೆದಾರರಿಗೆ ವಿನಾಯಿತಿಯೂ ಇದೆ. ರಕ್ಷಣಾ ಪಡೆ, ಪ್ಯಾರಾ-ಮಿಲಿಟರಿ, ಇಂಡಿಯನ್ ಕೋಸ್ಟ್ ಗಾರ್ಡ್, ಕೇಂದ್ರ ಸರ್ಕಾರ, ಪೊಲೀಸ್ ಹಾಗೂ ರೈಲ್ವೆ ಉದ್ಯೋಗಿಗಳಿಗೆ ಆನ್‌ಲೈನ್ IMPS ಶುಲ್ಕ ವಿಧಿಸಲಾಗುವುದಿಲ್ಲ.

ಇದನ್ನೂ ಓದಿ: ಚಿನ್ನದ ಬೆಲೆ ಭಾರೀ ಕುಸಿತ! ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮುನ್ನವೇ ಚಿನ್ನದ ದರ ಇಳಿಕೆ

SBI ಪ್ರಕಾರ, ಈ ಕ್ರಮವು ಉದ್ಯಮದ ನಿಯಮಗಳಿಗೆ ಹೊಂದುವಂತೆ ಮತ್ತು ಹೆಚ್ಚು ಮೊತ್ತದ ಆನ್‌ಲೈನ್ ಬದ್ಲಾವಣೆಗಳಿಗೆ ಮಾತ್ರ ಶುಲ್ಕ ವಸೂಲಿಯಾಗುವಂತೆ ಮಾಡಲಾಗಿದೆ. ಕಡಿಮೆ ಮೊತ್ತದ ದೈನಂದಿನ ವರ್ಗಾವಣೆಗೆ ಹೆಚ್ಚಿನ ಗ್ರಾಹಕರು ಇನ್ನೂ ಉಚಿತ ಸೇವೆ ಪಡೆಯಲಿದ್ದಾರೆ.

SBI to Charge for Online IMPS Transfers from August 15

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories