ನಿಮ್ಮ ಮಗಳ ಹೆಸರಲ್ಲಿ ಬರಿ ₹1,000 ಹೂಡಿಕೆಗೆ 21 ವರ್ಷಕ್ಕೆ ಲಕ್ಷಗಳ ಲಾಭ!
ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ (SSY) ಮೂಲಕ ಮಕ್ಕಳ ಭವಿಷ್ಯ ಭದ್ರತೆ ಸಾಧ್ಯ. ಕಡಿಮೆ ಮೊತ್ತದಿಂದ ಪ್ರಾರಂಭಿಸಿ, ಹೆಚ್ಚು ಬಡ್ಡಿ, ಟ್ಯಾಕ್ಸ್ ಮುಕ್ತ ಮಚ್ಯೂರಿಟಿ ಲಾಭ ಪಡೆಯಬಹುದು.

- SSY ಯೋಜನೆ ಮೂಲಕ ಮಗಳ ಭವಿಷ್ಯ ಭದ್ರತೆ
- ತಿಂಗಳಿಗೆ ₹1000 ಹೂಡಿಕೆ ಮಾಡಿದರೆ 21ನೇ ವರ್ಷಕ್ಕೆ ₹5.5 ಲಕ್ಷ
- ಈ ಯೋಜನೆಗೆ 8.2% ಬಡ್ಡಿ, ಟ್ಯಾಕ್ಸ್-ಫ್ರೀ ಲಾಭ, ಕಡಿಮೆ ಡಿಪಾಸಿಟ್
ಇಂದಿನ ಕಾಲದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಹಣ ಸೇವ್ ಮಾಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ (SSY – Sukanya Samriddhi Yojana) ಎಲ್ಲ ತಾಯಂದಿರಿಗೂ ಆಶಾಕಿರಣವಾಗಿದೆ. ಹತ್ತಿರದ ಪೋಸ್ಟ್ ಆಫೀಸ್ ಗಳಲ್ಲಿ ಈ ಖಾತೆ ಪ್ರಾರಂಭಿಸಬಹುದು.
ಈ ಯೋಜನೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಭಾಗವಾಗಿ ಜಾರಿಗೆ ಬಂದು ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಖರ್ಚಿಗೆ ನೆರವಾಗುವಂತೆ ರೂಪಿಸಲಾಗಿದೆ.
SSY ಯೋಜನೆ (scheme) ಅಡಿಯಲ್ಲಿ ಒಂದು ಮಗಳ ಹೆಸರಲ್ಲಿ ಮಾತ್ರ ಖಾತೆ ತೆರೆಯಬಹುದಾಗಿದೆ. ತಿಂಗಳಿಗೆ ₹1000 ಹೂಡಿಕೆ ಮಾಡಿದರೆ 21ನೇ ವರ್ಷದ ವೇಳೆಗೆ ₹5.5 ಲಕ್ಷದಷ್ಟು ಹಣವೂ ಸಿಗಬಹುದು.
ಇದನ್ನೂ ಓದಿ: ಬರಿ ₹13000ಕ್ಕೆ LG ಸ್ಮಾರ್ಟ್ ಟಿವಿಗಳು, ಅಮೇಜಾನ್‌ನಲ್ಲಿ ಭಾರೀ ಆಫರ್ ಘೋಷಣೆ!
ಹೆಚ್ಚಿನ ಬಡ್ಡಿದರವೇ ಈ ಯೋಜನೆಯ ವಿಶೇಷತೆ. ಪ್ರಸ್ತುತ SSY ಬಡ್ಡಿದರ ವರ್ಷಕ್ಕೆ 8.2% (interest rate) ಆಗಿದೆ. ಇವು ಮಾರುಕಟ್ಟೆಯಲ್ಲಿ ಇರುವ ಸಾಮಾನ್ಯ ಬ್ಯಾಂಕುಗಳ ಫಿಕ್ಸೆಡ್ ಡಿಪಾಸಿಟ್ ಗಿಂತ (Fixed Deposit) ಹೆಚ್ಚು ಲಾಭದಾಯಕವಾಗಿದೆ. ಮತ್ತು ಈ ಯೋಜನೆ EEE (Exempt-Exempt-Exempt) ಆಗಿದ್ದು, ಹೂಡಿಕೆ, ಬಡ್ಡಿ, ಮಚ್ಯೂರಿಟಿ ಲಾಭ – ಎಲ್ಲವೂ ತೆರಿಗೆ ಮುಕ್ತ.
ನಿಮ್ಮ ಮಗಳಿಗಾಗಿ ನೀವು ವರ್ಷಕ್ಕೆ ₹12,000 ಹೂಡಿದರೆ, 15 ವರ್ಷಗಳವರೆಗೆ ₹1,80,000 ಮೊತ್ತ ಹೂಡಿಕೆಯಾಗುತ್ತದೆ. ಈ ಮೊತ್ತದ ಮೇಲೆ ಬಡ್ಡಿಯಾಗಿ ₹3,74,206 ಸಿಗಲಿದೆ. ಒಟ್ಟು ಮಚ್ಯೂರಿಟಿ ಮೊತ್ತ ₹5,54,206 ಆಗುತ್ತದೆ.
ಇದನ್ನೂ ಓದಿ: 1 ಕೋಟಿಗೂ ಹೆಚ್ಚು ಜನರ ಆಧಾರ್ ಕಾರ್ಡ್ ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಥಿತಿ ನೋಡಿಕೊಳ್ಳಿ
ಖಾತೆ ಆರಂಭಿಸಲು ಬೇಕಾದ ದಾಖಲೆಗಳಲ್ಲಿ ಮಗಳ ಜನನ ಪ್ರಮಾಣಪತ್ರ, ಪೋಷಕರ ಗುರುತಿನ ಪುರಾವೆ (Aadhaar, PAN), ವಿಳಾಸದ ದಾಖಲೆಗಳು ಹಾಗೂ ಫೋಟೋ ಸೇರಿವೆ. ಖಾತೆ ಆರಂಭಕ್ಕೆ ಕನಿಷ್ಠ ₹250 ಬೇಕಾಗುತ್ತದೆ. ವರ್ಷಕ್ಕೊಮ್ಮೆ ಕನಿಷ್ಠ ₹250 ಹಾಕಬೇಕಾಗಿದ್ದು, ಗರಿಷ್ಠ ₹1.5 ಲಕ್ಷವರೆಗೆ ಹೂಡಿಕೆ ಮಾಡಬಹುದು.
ಇದನ್ನೂ ಓದಿ: ₹4,999ಕ್ಕೆ ಸಿಗುವ ಈ ಫೋನ್‌ಗೆ ಹೆಚ್ಚಿದ ಕ್ರೇಜ್! ನಿಮಿಷಗಳಲ್ಲೇ ಸೋಲ್ಡ್ ಔಟ್
15 ವರ್ಷಗಳವರೆಗೆ ಮಾತ್ರ ಹಣ ಹಾಕಬೇಕಾಗಿದ್ದು, 21ನೇ ವರ್ಷದಲ್ಲಿ ಮಚ್ಯೂರಿಟಿ ಲಭಿಸುತ್ತದೆ. ಮಧ್ಯಂತರದಲ್ಲಿ ಬಡ್ಡಿ ನಿರಂತರವಾಗಿ ಲಭ್ಯವಾಗುತ್ತದೆ. ಮಗಳು 18 ವರ್ಷ ದಾಟಿದ ಮೇಲೆ ವಿದ್ಯಾಭ್ಯಾಸ ಅಥವಾ ಮದುವೆಗೆ 50% ಮೊತ್ತವರೆಗೆ ಹಣವನ್ನು ಹಿಂದಕ್ಕೆ ಪಡೆಯಬಹುದು.
ಮಧ್ಯಮ ವರ್ಗದ ಪಾಲಕರಿಗೆ ಈ ಯೋಜನೆ ಬಹುಮೌಲ್ಯದ ಹೂಡಿಕೆಯಾಗಬಹುದು. ನಿಮ್ಮ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸಲು ಈಗಲೇ ಈ ಯೋಜನೆಯಲ್ಲಿ ಪಾಲ್ಗೊಳ್ಳಿ.
Secure Daughter’s Future with SSY




