ನಿಮ್ಮ ಆಸ್ತಿ ಅಥವಾ ಮನೆ ಮೇಲೆ ಬೇರೆ ಯಾರಾದ್ರೂ ಸಾಲ ಮಾಡಿದ್ದಾರಾ? ಮೊಬೈಲ್‍ನಲ್ಲೆ ಚೆಕ್ ಮಾಡಿಕೊಳ್ಳಿ

ತಮ್ಮ ಆಸ್ತಿ, ಅಥವಾ ಮನೆಯ ಮೇಲೆ ಸಾಲ (Home Loan) ತೆಗೆದುಕೊಂಡಿದ್ದು, ಅದನ್ನು ತೀರಿಸದೇ ಬೇರೆಯವರಿಗೆ ಮಾರಾಟ ಮಾಡುವುದು ಇಂತಹ ವಂಚನೆಗಳೂ ನಡೆಯುತ್ತಿವೆ.

ಸ್ವಂತ ಸೂರು (Own House) ನಿರ್ಮಿಸಿಕೊಳ್ಳುವುದು, ಸ್ವಂತ ಜಮೀನು (Own Property), ಸೈಟ್ (site) ನಂತಹ ಸ್ತಿರಾಸ್ಥಿ ಖರೀದಿ (immovable property) ಮಾಡಬೇಕು ಎನ್ನುವುದು ಹಲವರ ಆಸೆ. ಇದಕ್ಕಾಗಿ ಸ್ವಲ್ಪ ಸ್ವಲ್ಪ ಹಣ ಕೂಡಿಸಿಟ್ಟು, ಸ್ವಂತ ಆಸ್ತಿ ಖರೀದಿ ಮಾಡುತ್ತಾರೆ.

ಆಸ್ತಿ ಖರೀದಿ ಮಾಡುವಾಗ ಸಾಕಷ್ಟು ಮುತುವರ್ಜಿ ವಹಿಸಬೇಕು. ಇಲ್ಲವಾದರೆ ಪೈಸಾ ಪೈಸಾ ಕೂಡಿಸಿ ಖರೀದಿಸಿದ ಆಸ್ತಿ ನಿಮ್ಮ ಕೈತಪ್ಪಿ ಹೋಗಬಹುದು. ಹೌದು, ಈಗೆಲ್ಲಾ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ತಮ್ಮದಾಗಿಸಿಕೊಳ್ಳುವುದು, ಬ್ಯಾಂಕ್ ನಿಂದ ಲೋನ್ (Bank Loan) ಪಡೆಯುವುದು ಸೇರಿದಂತೆ ನಾನಾ ಬಗೆಯ ವಂಚನೆಗಳು ನಡೆಯುತ್ತಿವೆ.

ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಬಿಗ್ ಅಪ್ಡೇಟ್! ಇಎಂಐ ನಿಯಮ ಬದಲಾವಣೆ

ನಿಮ್ಮ ಆಸ್ತಿ ಅಥವಾ ಮನೆ ಮೇಲೆ ಬೇರೆ ಯಾರಾದ್ರೂ ಸಾಲ ಮಾಡಿದ್ದಾರಾ? ಮೊಬೈಲ್‍ನಲ್ಲೆ ಚೆಕ್ ಮಾಡಿಕೊಳ್ಳಿ - Kannada News

ಆಸ್ತಿ ಮಾರಾಟಮಾಡುವಾಗ ವಂಚನೆ:

ಹೌದು, ನೀವು ಸ್ವಲ್ಪ ಯಾಮಾರಿದ್ರೂ ನಿಮ್ಮ ಬಳಿ ಇರುವ ಆಸ್ತಿ ನಿಮಗೆ ಸಿಗದೇ ಹೋಗಬಹುದು. ಇತ್ತೀಚಿನ ದಿನಗಳಲ್ಲಿ ಆಸ್ತಿ ಖರೀದಿ ಹಾಗೂ ಮಾರಾಟದ ವಿಷಯದಲ್ಲಿ ವಂಚನೆ ಪ್ರಕರಣಗಳು (fraud cases) ಹೆಚ್ಚಾಗುತ್ತಿವೆ.

ಯಾರದ್ದೊ ಆಸ್ತಿಯನ್ನು ಇನ್ಯಾರೋ ಮಾರಾಟ ಮಾಡುವುದು, ಸುಳ್ಳು ದಾಖಲೆಗಳನ್ನು ತೋರಿಸಿ ಹೆಚ್ಚು ಮೊತ್ತಕ್ಕೆ ಆಸ್ತಿ ಮಾರಾಟ (Property Sale) ಮಾಡುವುದು. ತಮ್ಮ ಆಸ್ತಿ, ಅಥವಾ ಮನೆಯ ಮೇಲೆ ಸಾಲ (Home Loan) ತೆಗೆದುಕೊಂಡಿದ್ದು, ಅದನ್ನು ತೀರಿಸದೇ ಬೇರೆಯವರಿಗೆ ಮಾರಾಟ ಮಾಡುವುದು ಇಂತಹ ವಂಚನೆಗಳೂ ನಡೆಯುತ್ತಿವೆ.

ಆಸ್ತಿ ಅಥವಾ ಮನೆ (House) ಖರೀದಿ ಮಾಡಿದಾಗ ಅದರ ದಾಖಲೆಗಳನ್ನು ಸರಿಯಾಗಿ ನೋಡಿಕೊಳ್ಳದೇ ಪರಿಶೀಲನೆ ಮಾಡಿಕೊಳ್ಳದೇ ಖರೀದಿ ಮಾಡಿದರೆ ಅದರಿಂದ ನಷ್ಟ ಅನುಭವಿಸಬೇಕಾಗುತ್ತದೆ.

ಹೀಗೆ ಸಾಕಷ್ಟು ವಂಚನೆ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಹೊಸದೊಂದು ವೆಬ್ ಸೈಟ್ (Website) ಬಿಡುಗಡೆ ಮಾಡಿದೆ. ಇದರಿಂದ ಆಸ್ತಿ ಖರೀದಿಗೂ ಮೊದಲು ನೀವು ಖರೀದಿ ಮಾಡಬೇಕು ಎಂದುಕೊಂಡಿರುವ ಆಸ್ತಿ ಅಥವಾ ಮನೆ ಬಗ್ಗೆ ಈ ವೆಬ್ ಸೈಟ್ ನಲ್ಲಿ ಎಲ್ಲಾ ಮಾಹಿತಿ ತಿಳಿದುಕೊಳ್ಳಬಹುದು.

ಬೆಲೆ ದುಬಾರಿ ಅಂತ ಬೇಜಾರಾಗಬೇಡಿ! ಈಗ ರಾಯಲ್ ಎನ್‌ಫೀಲ್ಡ್ ಬುಲೆಟ್ ಬಾಡಿಗೆಗೂ ಕೂಡ ಸಿಗುತ್ತೆ

ವೆಬ್ ಸೈಟ್ ಮೂಲಕ ವಿವರ ತಿಳಿದುಕೊಳ್ಳುವುದು ಹೇಗೆ?

someone else taken a loan on your property or home, Check Using Mobileಅದಕ್ಕಾಗಿ ಮೊದಲು ಸರ್ಕಾರದ ಅಧಿಕೃತ ವೆಬ್ ಸೈಟ್ ಆದ https://www.cersai.org.in/CERSAI/asstsrch.prg ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ಖರೀದಿಸಬೇಕು ಎಂದುಕೊಂಡಿರುವ ಆಸ್ತಿ ಸರ್ವೇ ನಂಬರ್, ಮನೆ ಖರೀದಿಸುವುದಾದರೆ ಅದರ ಸಂಖ್ಯೆ, ಸ್ಥಳ, ಮೊದಲಾದ ಎಲ್ಲಾ ವಿವರಗಳನ್ನೂ ನೀಡಿ.

ಆಗ ಆ ಜಾಗ ಅಥವಾ ಮನೆಯ ಮೇಲೆ ಯಾರಾದ್ರೂ ಸಾಲ ಮಾಡಿದ್ದಾರಾ? ಸಾಲ ಮಾಡಿದ್ದರೆ, ಅವರ ಹೆಸರು, ಮೊತ್ತ, ಬಡ್ಡಿ ಎಷ್ಟು ಹೀಗೆ ಪ್ರತಿಯೊಂದು ಮಾಹಿತಿಯನ್ನೂ ಕೂಡ ತಿಳಿದುಕೊಳ್ಳಬಹುದು.

ಅಂದಹಾಗೆ ಈ ವೆಬ್ ಸೈಟ್ (CERSAI) ನಲ್ಲಿ ಯಾವುದೇ ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗೆ ಬೇಕಾಗಿರುವ ಮಾಹಿತಿಯ ಆಧಾರದ ಮೇಲೆ ಶುಲ್ಕವನ್ನು ಕೂಡ ಪಾವತಿಸಬೇಕು. ಇದು ಪೇಯ್ಡ್ ವೆಬ್ ಸೈಟ್ ಆಗಿದೆ.

ನಿನ್ನೆಯೇ ಖರೀದಿಸಬೇಕಿತ್ತು! ಚಿನ್ನದ ಬೆಲೆ ಕಡಿಮೆಯಾಯ್ತು ಅಂತ ಸಂತಸ ಪಡುವ ಮುನ್ನವೇ ದಿಢೀರ್ ಏರಿಕೆ

50 ರೂಪಾಯಿಗಳಿಂದ 500 ರೂಪಾಯಿಗಳವರೆಗೆ ನೀವು ಹಣ ಕೊಡಬೇಕಾಗುತ್ತದೆ. ಆದರೆ ನಿಮಗೆ ನೀವು ತಿಳಿದುಕೊಳ್ಳಬೇಕು ಎಂದಿರುವ ಆಸ್ತಿಯ ಸರಿಯಾದ, ನಿಖರವಾದ ಮಾಹಿತಿ ಲಭ್ಯವಾಗುತ್ತದೆ.

ಹಾಗಾಗಿ ಯಾವುದೇ ಆಸ್ತಿ ಖರೀದಿಸುವುದಕ್ಕೂ ಮೊದಲು ಆ ಆಸ್ತಿಯ ಬಗ್ಗೆ ಬೇರೆಯವರನ್ನೂ ಕೇಳಿ ತಿಳಿದುಕೊಳ್ಳಬೇಕು. ಜೊತೆಗೆ ಈ ವೆಬ್ ಸೈಟ್ ಕೂಡ ನಿಮಗೆ ಸಹಾಯಮಾಡುತ್ತದೆ. ವಂಚನೆಗೆ ಒಳಗಾಗದಂತೆ ನಿಮ್ಮ ಕನಸಿನ ಆಸ್ತಿ ಖರೀದಿಸಿ.

someone else taken a loan on your property or home, Check Using Mobile

Follow us On

FaceBook Google News

someone else taken a loan on your property or home, Check Using Mobile