Star Rating: ಫ್ರಿಜ್, ಟಿವಿಗೆ ಸ್ಟಾರ್ ರೇಟಿಂಗ್ ಕಡ್ಡಾಯ, ಇಂದಿನಿಂದ ಹೊಸ ನಿಯಮ! ಬೆಲೆ ಹೆಚ್ಚಳ
ಇಂದಿನಿಂದ ಫ್ರಿಜ್, ಟಿವಿ ಸೇರಿದಂತೆ ಹಲವು ಗೃಹೋಪಯೋಗಿ ಉಪಕರಣಗಳಿಗೆ ಎನರ್ಜಿ ಎಫಿಷಿಯನ್ಸಿ ಸ್ಟಾರ್ ಲೇಬಲ್ ಕಡ್ಡಾಯವಾಗಿದೆ. ಈ ಹೊಸ ನಿಯಮದಿಂದ ಬೆಲೆಗಳು 5–10 ಶೇಕಡಾವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.

- ಫ್ರಿಜ್, ಟಿವಿ ಸೇರಿ ಸ್ಟಾರ್ ರೇಟಿಂಗ್ ಕಡ್ಡಾಯ
- ಹೊಸ ನಿಯಮ ಜಾರಿ: ಇಂದಿನಿಂದಲೇ ಅನ್ವಯ
- ಬೆಲೆ ಏರಿಕೆ ಸಾಧ್ಯತೆ: 5–10% ವರೆಗೆ ಹೆಚ್ಚಳ ಅಂದಾಜು
Star Rating Mandatory: ಗೃಹೋಪಯೋಗಿ ಉಪಕರಣಗಳ ಖರೀದಿಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಪ್ರಕಟಿಸಿದ ಗಜೆಟ್ ಅಧಿಸೂಚನೆ ಪ್ರಕಾರ, ಇಂದಿನಿಂದ ಹಲವು ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ ಉಪಕರಣಗಳಿಗೆ (refrigerators, televisions) ಎನರ್ಜಿ ಎಫಿಷಿಯನ್ಸಿ ಸ್ಟಾರ್ ಲೇಬಲಿಂಗ್ ಕಡ್ಡಾಯವಾಗಿದೆ.
ಯಾವ ಉಪಕರಣಗಳಿಗೆ ಅನ್ವಯ?
ಈ ಹೊಸ ನಿಯಮದಂತೆ, ರೆಫ್ರಿಜಿರೇಟರ್ಗಳು, ಟೆಲಿವಿಜನ್ಗಳು, ಎಲ್ಪಿಜಿ ಗ್ಯಾಸ್ ಸ್ಟೌವ್ಗಳು, ಕೂಲಿಂಗ್ ಟವರ್ಗಳು, ಚಿಲ್ಲರ್ಗಳು, ಡೀಪ್ ಫ್ರೀಜರ್ಗಳು, ಡಿಸ್ಟ್ರಿಬ್ಯೂಷನ್ ಟ್ರಾನ್ಸ್ಫಾರ್ಮರ್ಗಳು ಹಾಗೂ ಗ್ರಿಡ್ಗೆ ಸಂಪರ್ಕಿತ ಸೌರ ಇನ್ವರ್ಟರ್ಗಳಿಗೆ ಸ್ಟಾರ್ ರೇಟಿಂಗ್ ಲೇಬಲ್ ಇರಲೇಬೇಕು.
ಇದಕ್ಕೂ ಮೊದಲು ಫ್ರಾಸ್ಟ್-ಫ್ರೀ ಹಾಗೂ ಡೈರೆಕ್ಟ್ ಕೂಲ್ ಫ್ರಿಜ್ಗಳು, ಡೀಪ್ ಫ್ರೀಜರ್ಗಳು, ಫ್ಲೋರ್ ಸ್ಟ್ಯಾಂಡಿಂಗ್ ಎಸಿ, ಯುಎಚ್ಡಿ ಹಾಗೂ ಕಲರ್ ಟಿವಿಗಳಿಗೆ ಸ್ಟಾರ್ ಲೇಬಲಿಂಗ್ ಸ್ವೈಚ್ಛಿಕವಾಗಿತ್ತು. ಆದರೆ ಈಗ ಈ ವಿಭಾಗದ ಉಪಕರಣಗಳಿಗೂ ಕಡ್ಡಾಯ ನಿಯಮ ಜಾರಿಯಾಗಿದೆ.
ಬೆಲೆ ಏರಿಕೆಯ ಆತಂಕ
ಹೊಸ ಮಾನದಂಡಗಳನ್ನು ಪಾಲಿಸಲು ತಯಾರಕರು ಹೆಚ್ಚುವರಿ ವೆಚ್ಚ ಭರಿಸುವ ಅಗತ್ಯವಿರುವುದರಿಂದ, ಎಸಿ ಹಾಗೂ ಫ್ರಿಜ್ಗಳ ಬೆಲೆ 5ರಿಂದ 10 ಶೇಕಡಾವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರು ಖರೀದಿಗೆ ಮೊದಲು ಸ್ಟಾರ್ ರೇಟಿಂಗ್ ಮತ್ತು ವಿದ್ಯುತ್ ಬಳಕೆಯ ವಿವರಗಳನ್ನು ಗಮನಿಸುವುದು ಇನ್ನಷ್ಟು ಅಗತ್ಯವಾಗಿದೆ.
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



