ನಂದಿನಿ ಹಾಲಿನ ಡೈರಿ ಆರಂಭಿಸಿ, ಲಕ್ಷಗಟ್ಟಲೆ ಹಣ ಗಳಿಸಿ! ಈ ರೀತಿ ಅರ್ಜಿ ಸಲ್ಲಿಸಿ

Story Highlights

ಸ್ವ ಉದ್ಯಮ ಮಾಡಲು ಬಯಸುವವರಿಗೆ ಸದಾವಕಾಶ; ನಂದಿನಿ ಹಾಲಿನ ಡೈರಿ ಆರಂಭಿಸಿ ಲಕ್ಷಗಟ್ಟಲೆ ಹಣ ಸಂಪಾದಿಸಬಹುದು

ನೀವು ನಿಮ್ಮದೇ ಆಗಿರುವ ಸ್ವಂತ ಉದ್ಯಮ (Own Business) ಮಾಡಬೇಕು, ಲಕ್ಷಾಂತರ ಹಣ ಗಳಿಸಬೇಕು ಎಂದು ಕನಸು ಹೊಂದಿದ್ದರೆ ನಂದಿನಿ ಹಾಲಿನ ಡೈರಿ ಆರಂಭಿಸಿ. ಇದರಿಂದ ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸಬಹುದು.

ಕರ್ನಾಟಕ ಹಾಲು ಉತ್ಪಾದಕರ ಫೆಡರೇಶನ್ (KMF) ಅಡಿಯಲ್ಲಿ ನಂದಿನಿ ಬ್ರಾಂಡ್ (Nandini brand) ನ ಹಾಲಿನ ಡೈರಿ (milk diary) ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆಸಕ್ತಿ ಇರುವವರು ನಿಮ್ಮ ಗ್ರಾಮದಲ್ಲಿ ಅಥವಾ ನಗರ ಪ್ರದೇಶದಲ್ಲಿ ನಂದಿನಿ ಡೈರಿ ತೆರೆಯುವುದರ ಮೂಲಕ ಪ್ರತಿ ತಿಂಗಳು ಲಕ್ಷಾಂತರ ಹಣ ಗಳಿಸಬಹುದಾಗಿದೆ.

ಚಿನ್ನದ ಬೆಲೆ ಭಾರೀ ಇಳಿಕೆ! ಚಿನ್ನ ಬೆಳ್ಳಿ ಖರೀದಿ ಮಾಡೋಕೆ ಇದುವೇ ಬೆಸ್ಟ್ ಟೈಮ್

ಕರ್ನಾಟಕದಲ್ಲಿ ಎಲ್ಲಾ ಸಾಮಾನ್ಯ ಡೈರಿ ಗಳಲ್ಲಿ ಸಂಗ್ರಹವಾಗುವ ಹಾಲನ್ನು ರಾಜ್ಯದ ಹಾಲು ಉತ್ಪಾದಕರ ಫೆಡರೇಶನ್ (KMF) ಗೆ ಕಳುಹಿಸಲಾಗುತ್ತದೆ. ಇಲ್ಲಿಂದ ತಯಾರಾಗುವ ಯಾವುದೇ ಹಾಲಿನ ಉತ್ಪನ್ನದ ಬ್ರಾಂಡ್ ನಂದಿನಿ! ನಂದಿನಿ ಬ್ರಾಂಡ್ ನಿಂದ ತಯಾರಾದ ಯಾವುದೇ ಉತ್ಪನ್ನಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಂದಿನಿ ಪಾರ್ಲರ್ (Nandini parlour) ಮೂಲಕ ಮಾಡಲಾಗುತ್ತದೆ.

ನಂದಿನಿ ಫ್ರಾಂಚೈಸಿ ತೆಗೆದುಕೊಳ್ಳಿ (Nandini franchise)

Nandini milk dairyನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ನಂದಿನಿ ಫ್ರಾಂಚೈಸಿ ಯನ್ನು ನೀಡಲಾಗುತ್ತಿದೆ. ಈ ಫ್ರಾಂಚೈಸಿಯನ್ನು ನೀವು ಆರಂಭಿಸಿದರೆ ನಂದಿನಿ ಉತ್ಪನ್ನಗಳಾದ ಹಾಲು. ಮೊಸರು, ಬೆಣ್ಣೆ, ತುಪ್ಪ, ಬೇಡ ಮೈಸೂರು ಪಾಕ್ ಹೀಗೆ ತರಾವರಿ ನಂದಿನಿ ಸಿಹಿ ತಿನಿಸುಗಳನ್ನು ಪಾರ್ಲರ್ ಮೂಲಕ ಮಾರಾಟ ಮಾಡಬಹುದು.

ದೇಶದ ಮೂಲೆ ಮೂಲೆಗೂ ಕೂಡ ಕೆಎಂಎಫ್ ನಂದಿನಿ ಬ್ರಾಂಡ್ ನ ಮೂಲಕ ಹಾಲಿನ ಉತ್ಪನ್ನ (milk products) ಗಳನ್ನು ತಲುಪಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ನಂದಿನಿ ಬ್ರಾಂಡ್ ನ ಬೇಡಿಕೆ ಕೂಡ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕೆಎಂಎಫ್ ನಂದಿನಿ ಪಾರ್ಲರ್ ಆರಂಭಿಸುವುದಕ್ಕೆ ಫ್ರಾಂಚೈಸಿ ನೀಡಲು ಅರ್ಜಿ ಆಹ್ವಾನಿಸಿದೆ.

ಇನ್ಮುಂದೆ ಮನೆಯಲ್ಲಿ ಕ್ಯಾಶ್ ಇಟ್ಟುಕೊಳ್ಳೋದಕ್ಕೂ ಇದೇ ಲಿಮಿಟ್; ಮಿತಿಮೀರಿದರೆ ದಂಡ

ನಂದಿನಿ ಡೈರಿ ತೆರೆಯಲು ಬೇಕಾಗಿರುವ ಅರ್ಹತೆಗಳು! (Eligibility to start Nandini parlour)

ನಂದಿನಿ ಪಾರ್ಲರ್ ಆರಂಭಿಸಲು ಸುಮಾರು ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿಗಳ ಬಂಡವಾಳ ಬೇಕು.

21 ವರ್ಷ ಮೀರಿದ ಯಾವುದೇ ಯುವಕ ಯುವತಿಯರು ನಂದಿನಿ ಪಾರ್ಲರ್ ಆರಂಭಿಸಬಹುದು.

150 ರಿಂದ 200 ಚದರ್ ಅಡಿ ಜಾಗವಿದ್ದರೆ ಅಲ್ಲಿ ನಂದಿನಿ ಪಾರ್ಲರ್ ಆರಂಭಿಸಬಹುದು, ನಿಮಗೆ ಸಹಾಯಕ್ಕಾಗಿ ಉದ್ಯೋಗಿಗಳನ್ನು ಕೂಡ ನೇಮಿಸಿಕೊಳ್ಳಬಹುದು.

ರೆಫ್ರಿಜರೇಟರ್, ಎಸಿ ಮೊದಲಾದ ಸೌಲಭ್ಯಗಳು ಇರಬೇಕು. ಸಿಸಿ ಕ್ಯಾಮೆರಾ ವನ್ನು ಕೂಡ ಅಳವಡಿಸಲಾಗುತ್ತದೆ.

ನಂದಿನಿ ಪಾರ್ಲರ್ ಎಲ್ಲಿ ಆರಂಭಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನೀವು ಕಂಪ್ಯೂಟರ್ ಅನ್ನು ಕೂಡ ಬಿಲ್ಲಿಂಗ್ಗಾಗಿ ಇಟ್ಟುಕೊಳ್ಳಬಹುದು. ಜನಸಾಂದ್ರತೆ ಇರುವ ಪ್ರದೇಶದಲ್ಲಿ ಕಂಪ್ಯೂಟರ್ ಅಗತ್ಯ ಇರುತ್ತದೆ.

ಸಿಹಿ ಸುದ್ದಿ! ಇನ್ಮುಂದೆ ಈ ಆದಾಯದ ಮೂಲಗಳಿಗೆ ತೆರಿಗೆ ಪಾವತಿಸುವ ಅಗತ್ಯವಿಲ್ಲ

ನಂದಿನಿ ಪಾರ್ಲರ್ ಫ್ರಾಂಚೈಸಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ? (How to apply)

http://www.kmfnandini.coop/ ಕೆಎಂಎಫ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ನಮ್ಮನ್ನು ಸಂಪರ್ಕಿಸಿ ಎನ್ನುವ ಆಯ್ಕೆಯನ್ನು ಮುಖಪುಟದಲ್ಲಿ ಕಾಣುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ನೀವು ಫ್ರಾಂಚೈಸಿ ಪಡೆದುಕೊಳ್ಳಲು ಬೇಕಾಗಿರುವ ಮಾಹಿತಿಯನ್ನು ನೀಡಬೇಕು. ಬಳಿಕ ಈ ಫಾರ್ಮ್ ಭರ್ತಿ (application form) ಮಾಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಫ್ರಾಂಚೈಸಿ ಆರಂಭಿಸಲು ಅರ್ಜಿ ಸಲ್ಲಿಸಬಹುದಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ; ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

ನಂದಿನಿ ಪಾರ್ಲರ್ ಡೀಲರ್ ಶಿಪ್ ಪಡೆಯಲು ವಿಳಾಸ (Contact for more details)

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿ.
#2915, ಕೆ ಎಂ ಎಫ್ ಸಂಕೀರ್ಣ,
ಡಿ ಆರ್ ಕಾಲೇಜು ರಸ್ತೆ,
ಡಾ. ಎಂ.ಎಚ್.ಮರಿಗೌಡ ರಸ್ತೆ,
ಬೆಂಗಳೂರು – 560029
ಇಲ್ಲಿಗೆ ಸಂಪರ್ಕಿಸಿ ನೀವು ಕೂಡ ನಂದಿನಿ ಪಾರ್ಲರ್ ಆರಂಭಿಸಿ ಪ್ರತಿ ತಿಂಗಳು ಅತ್ಯುತ್ತಮ ಆದಾಯ ಗಳಿಸಬಹುದು.

Start a Nandini milk dairy and earn

Related Stories