ಸಿಹಿ ಸುದ್ದಿ! ಇನ್ಮುಂದೆ ಈ ಆದಾಯದ ಮೂಲಗಳಿಗೆ ತೆರಿಗೆ ಪಾವತಿಸುವ ಅಗತ್ಯವಿಲ್ಲ

ಆದಾಯ ತೆರಿಗೆ ವಿನಾಯಿತಿಗೆ (income tax deduction) ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ (central government) ದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುವವರು ಈ ಬಗ್ಗೆ ತಿಳಿದುಕೊಳ್ಳಲೇಬೇಕು.

ಕೆಲವು ಮೂಲಗಳ ಆದಾಯಕ್ಕೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡಲಾಗಿದ್ದು, ತೆರಿಗೆ ಪಾವತಿಸುವ ಸಾಕಷ್ಟು ಜನರಿಗೆ ಇದು ಅನುಕೂಲಕರವಾಗಲಿದೆ.

ರಾಷ್ಟ್ರದಲ್ಲಿ ಬೇರೆ ಬೇರೆ ಆದಾಯಗಳಿಗೆ ಸಂಬಂಧಪಟ್ಟಂತೆ ಬೇರೆ ಬೇರೆ ತೆರಿಗೆ ವಿಧಿಸಲಾಗುತ್ತದೆ. ನಮ್ಮಲ್ಲಿ ಹೊಸ ಮತ್ತು ಹಳೆಯ ಆದಾಯ ತೆರಿಗೆ ಪದ್ಧತಿ ಲಭ್ಯವಿದ್ದು, ಗ್ರಾಹಕರು ತಮಗೆ ಬೇಕಾಗಿರುವ ಆದಾಯ ಪದ್ಧತಿಯನ್ನು ಆಯ್ಕೆ ಮಾಡಿಕೊಂಡು ಅದರ ನಿಯಮಾನುಸಾರ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ; ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

2022 – 23ರ ಐಟಿಆರ್ ಸಲ್ಲಿಕೆ (ITR filing) ಗಡುವು ಮುಗಿದಿದೆ. 2023- 24ರ ಐಟಿಆರ್ ಸಲ್ಲಿಕೆ ಗಿಂತಲೂ ಮೊದಲು ಈ ಆದಾಯ ತೆರಿಗೆಯ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಆದಾಯ ತೆರಿಗೆ ಈಗಾಗಲೇ ತಿಳಿಸಿರುವಂತೆ ಈ ಕೆಲವು ಮೂಲಗಳಿಂದ ಬರುವ ಆದಾಯಕ್ಕೆ ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ ಅಥವಾ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಹಾಗಾದರೆ ಅಂತಹ ಯಾವ ಆದಾಯಕ್ಕೆ ವಿನಾಯಿತಿ ಸಿಗುತ್ತದೆ ಎಂಬುದನ್ನು ನೋಡೋಣ.

ಕೃಷಿಯಿಂದ ಬಂದ ಆದಾಯ! (Agriculture income)

ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಕೃಷಿ ಚಟುವಟಿಕೆಯಿಂದ ಆದಾಯ ಗಳಿಸಿದರೆ ಅದನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (2) ರಲ್ಲಿ ಈ ಬಗ್ಗೆ ಪ್ರಸ್ತಾವನೆ ಮಾಡಲಾಗಿದ್ದು ಹಿಂದೂ ಅವಿಭಜಿತ ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿಯಿಂದ ಬಂದ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.

ಹೆಂಡತಿಗೆ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲು ಇರೋದಿಲ್ಲ! ಇಲ್ಲಿದೆ ನಿಯಮ

Income Taxಉಡುಗೊರೆಯ ಮೇಲೆ ತೆರಿಗೆ ವಿನಾಯಿತಿ! (Income by gift)

ಯಾವುದೇ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯದವರು ನೀಡಿರುವ ಉಡುಗೊರೆಗಳ ಆದಾಯದ ಮೇಲೆ ತೆರಿಗೆ ವಿನಾಯಿತಿ ನೀಡಲಾಗುವುದು. ಆದರೆ ಮನೆಯವರನ್ನು ಹೊರತುಪಡಿಸಿ ಬೇರೆಯವರಿಂದ 50,000ಗಳ ವರೆಗಿನ ಆದಾಯಕ್ಕೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ, 50,000 ರೂ.ಮೀರಿದರೆ ತೆರಿಗೆ ಪಾವತಿಸಬೇಕು.

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ; ಬೇಕಾಗುವ ದಾಖಲೆಗಳು ಇಂತಿವೆ

ವಿದ್ಯಾರ್ಥಿ ವೇತನದ ಆದಾಯ ತೆರಿಗೆ ವಿನಾಯಿತಿ! (Education Scholarship income)

ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಪಡೆದುಕೊಂಡರೆ ಅದಕ್ಕೆ ಯಾವುದೇ ರೀತಿಯ ತೆರಿಗೆ ವಿಧಿಸಲಾಗುವುದಿಲ್ಲ. ಪರಮ ವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ ಮೊದಲಾದ ಪ್ರಶಸ್ತಿ (award) ಗಳನ್ನು ಗಳಿಸಿ ಅದರಿಂದ ಹೊಡೆಯುವ ಪಿಂಚಣಿದಾರರಿಗೆ ಯಾವುದೇ ರೀತಿಯ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ.

ಗ್ರಾಚುಟಿಯ ಮೇಲಿನ ಆದಾಯ ತೆರಿಗೆ! (Gratuity income)

ಸರ್ಕಾರಿ ಕೆಲಸದಲ್ಲಿ ಇರುವ ಕೆಲಸಗಾರರು ಐದು ವರ್ಷಗಳವರೆಗೆ ಬಂದೇ ಹುದ್ದೆಯಲ್ಲಿ ಇದ್ದರೆ ಅವರಿಗೆ ಗ್ರಾಚುಟಿ ನೀಡಲಾಗುತ್ತದೆ. ಇನ್ನು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಮರಣ ಹೊಂದಿದ ನಂತರ ಪಡೆಯುವ ಗ್ರಾಚುಟಿ ತೆರಿಗೆ ಮುಕ್ತವಾಗಿದೆ. ಅದೇ ರೀತಿ ಐದು ಲಕ್ಷಕ್ಕಿಂತ ಹೆಚ್ಚಿನ ವಿ ಆರ್ ಎಸ್ (VRS) ನಿಂದ ಪಡೆದ ಮೊತ್ತಕ್ಕೂ ತೆರಿಗೆ ವಿನಾಯಿತಿ ನೀಡಲಾಗಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ಉಳಿತಾಯ ಖಾತೆಯಿಂದ ಬಂದಿರುವ ಬಡ್ಡಿಗೆ ತೆರಿಗೆ ವಿನಾಯಿತಿ! ( Income by Savings account interest)

ನೀವು ಉಳಿತಾಯ ಖಾತೆಯಲ್ಲಿ ಹಣ ಇಟ್ಟು ಅದರಿಂದ ಬಡ್ಡಿ ಪಡೆದುಕೊಂಡರೆ ಆ ಬಡ್ಡಿಗೆ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಇರುವುದಿಲ್ಲ.

ಈ ಎಲ್ಲಾ ಆದಾಯ ಮೂಲಗಳಿಗೆ ತೆರಿಗೆ ವಿನಾಯಿತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ 2023 – 24ರ ಐಟಿಆರ್ ಸಲ್ಲಿಕೆ ಮೊದಲು ನಿಮ್ಮ ಆದಾಯದ ಮೂಲವನ್ನು ಪರಿಶೀಲಿಸಿಕೊಳ್ಳಿ.

Henceforth there is no need to pay tax on these sources of income

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories