ಸ್ಟೇಟ್ ಬ್ಯಾಂಕ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 10 ಲಕ್ಷ ಪಡೆಯಿರಿ, ಉಳಿದಿರೋದು 10 ದಿನಗಳು ಮಾತ್ರ
SBI Fixed Deposit : ನಮ್ಮ ಜನರು ಈಗ ಉಳಿತಾಯದ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಇಂದಿನಿಂದಲೇ ಹಣ ಉಳಿತಾಯ (Money Savings) ಮಾಡುತ್ತ ಬಂದರೆ ಮುಂದೆ ತಮ್ಮ ಭವಿಷ್ಯ ಚೆನ್ನಾಗಿರುತ್ತದೆ, ಯಾವುದೇ ಯೋಚನೆ ಮಾಡದೆ ಜೀವನ ಕಳೆಯಬಹುದು ಎಂದು ಜನರು ಹೂಡಿಕೆಗೆ (Money Investment) ಗಮನ ಕೊಡುತ್ತಿದ್ದಾರೆ.
ಹೂಡಿಕೆ ಮಾಡುವುದಕ್ಕೆ ಬ್ಯಾಂಕ್ ಒಳ್ಳೆಯ ಆಯ್ಕೆ. ಅದರಲ್ಲೂ ನಮ್ಮ ದೇಶದಲ್ಲಿ ಎಲ್ಲಾ ಜನರ ಭರವಸೆ ಗಳಿಸುರುವುದು, ನಂಬಿಕೆ ಪಡಿದುಕೊಂಡಿರುವುದು State Bank Of India ಆಗಿದೆ.
SBI ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಆಗಿದೆ. ಹಾಗೆಯೇ ಸರ್ಕಾರದ ಮಾನ್ಯತೆಯನ್ನು ಪಡೆದಿದೆ, ಹಾಗಾಗಿ ಜನರಿಗು ಈ ಬ್ಯಾಂಕ್ ಮೇಲೆ ನಂಬಿಕೆ. SBI ತಮ್ಮ ಗ್ರಾಹಕರಿಗಾಗಿ ಹಲವು ಉಚಿತ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ಆಸ್ತಿ ಮಾರಾಟ ಮಾಡೋದಕ್ಕೂ ಇನ್ಮೇಲೆ ಹೊಸ ನಿಯಮ! ಕೇಂದ್ರ ಸರ್ಕಾರದಿಂದ ರಾತ್ರೋರಾತ್ರಿ ರೂಲ್ಸ್ ಜಾರಿ
ಅವುಗಳ ಮೂಲಕ ಉತ್ತಮವಾದ ಬಡ್ಡಿದರವನ್ನು ಕೂಡ ನೀಡುತ್ತದೆ. ಅದರಲ್ಲಿ ಸೀನಿಯರ್ ಸಿಟಿಜನ್ ಗಳಿಗೆ ಅನುಕೂಲ ಅಗುವಂಥ ಸಾಕಷ್ಟು ಯೋಜನೆಗಳಲ್ಲಿ ಅವರಿಗೆ ಉತ್ತಮವಾದ ರಿಟರ್ನ್ಸ್ ಹಾಗೂ ಒಳ್ಳೆಯ ಬಡ್ಡಿದರವನ್ನು ಕೊಡುತ್ತಿದೆ.
ಗ್ರಾಹಕರಿಗೆ ಉಪಯೋಗ ಆಗುವ ಹಾಗೆ ಹಲವು ಉತ್ತಮ ಯೋಜನೆಗಳನ್ನು SBI ಜಾರಿಗೆ ತರುತ್ತಲೇ ಇರುತ್ತದೆ. ಇದರಿಂದ ಗ್ರಾಹಕರು ಕೂಡ ಲಾಭ ಪಡೆದುಕೊಳ್ಳುತ್ತಾರೆ. ಇದೀಗ SBI ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಒಂದು ವೇಳೆ ನೀವು ಕೂಡ SBI ನಲ್ಲಿ ಅಕೌಂಟ್ ಹೊಂದಿದ್ದರೆ, ಈ ಯೋಜನೆಯ ಬಗ್ಗೆ ತಿಳಿದು ಹೂಡಿಕೆ ಮಾಡಿ, ಉತ್ತಮ ಪ್ರಯೋಜನ ಪಡೆದುಕೊಳ್ಳಬಹುದು.
ಇದು ಹಿರಿಯ ನಾಗರೀಕರಿಗಾಗಿ ಶುರುವಾಗಿರುವ ಉತ್ತಮವಾದ ಯೋಜನೆ ಆಗಿದೆ. ಇದರ ಹೆಸರು SBI We Care FD ಯೋಜನೆ ಆಗಿದೆ. ಈ ಯೋಜನೆಯಲ್ಲಿ ಬಡ್ಡಿ ದರವನ್ನು ಉತ್ತಮ ಪ್ರತಿಶತದಲ್ಲಿ ಕೊಡಲಾಗುತ್ತಿದ್ದು, ಸುಮಾರು 7.50% ಬಡ್ಡಿದರ ಇರುತ್ತದೆ.
ಹೆಣ್ಣು ಮಕ್ಕಳು ಕಾರ್ ಡ್ರೈವ್ ಮಾಡುವಾಗಲೇ ಅಪಘಾತ ಆಗುವುದು ಜಾಸ್ತಿ! ಯಾಕೆ ಗೊತ್ತಾ?
7 ದಿನದಿಂದ 10 ವರ್ಷಗಳ ವರೆಗು ಇದರಲ್ಲಿ ಹೂಡಿಕೆ ಮಾಡಬಹುದು. We Care Fixed Deposit ಯೋಜನೆಯಲ್ಲಿ ಹಿರಿಯ ಗ್ರಾಹಕರಿಗೆ 0.50% ಹೆಚ್ಚು ಬಡ್ಡಿ ಕೊಡಲಾಗುತ್ತದೆ. ಈ ಯೋಜನೆಯಲ್ಲಿ 10 ವರ್ಷಕ್ಕೆ ಹೂಡಿಕೆ ಮಾಡಿದರೆ ಎರಡರಷ್ಟು ಲಾಭ ನಿಮ್ಮದಾಗುತ್ತದೆ.
ಉದಾಹರಣೆಗೆ ನೀವು 10 ವರ್ಷ ಸಮಯಕ್ಕೆ 5 ಲಕ್ಷ ಹೂಡಿಕೆ ಮಾಡಿದರೆ, 7.50% ಬಡ್ಡಿದರದಲ್ಲಿ, 5,51,175 ರೂಪಾಯಿ ಬಡ್ಡಿ ಹಣವೇ ಬರುತ್ತದೆ. ಹೀಗೆ ಹೂಡಿಕೆ ಮಾಡಿದರೆ 10 ವರ್ಷಗಳ ಬಳಿಕ ಯೋಜನೆ ಮೆಚ್ಯುರ್ ಆದ ನಂತರ ನಿಮ್ಮ ಕೈಗೆ ₹10,51,175 ರೂಪಾಯಿ ಬರುತ್ತದೆ. ಈ ಯೋಜನೆಗೆ ಹೂಡಿಕೆ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ಆಗಿದ್ದು, ಅಷ್ಟರ ಒಳಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
State Bank of India We Care Fixed Deposit Scheme Update