ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ! ಪಡೆಯಲು ಹೀಗೆ ಅರ್ಜಿ ಸಲ್ಲಿಸಿ

ಮಹಿಳೆಯರು ಸ್ವಾವಲಂಬಿ ಜೀವನ (independent life), ಆರ್ಥಿಕ ಸಬಲೀಕರಣ, ಸ್ವತಂತ್ರ ಜೀವನ ಕಂಡುಕೊಳ್ಳಲು ಸರ್ಕಾರದ ಹಲವು ಯೋಜನೆಗಳು ಪೂರಕವಾಗಿವೆ. ಅದರಲ್ಲೂ ಮನೆಯಲ್ಲಿ ಕೇವಲ ಅಡುಗೆ ಕೆಲಸ ಮಾಡ್ತಾ ಮಕ್ಕಳು, ಸಂಸಾರವನ್ನು ಸುಧಾರಿಸುತ್ತಾ, ತನ್ನಲಿರುವ ಟ್ಯಾಲೆಂಟ್ ಅಡಗಿಸಿಟ್ಟು ಕೊಂಡಿರುವ ಮಹಿಳೆಯರು ಕೂಡ ಇಂದು ಸ್ವಂತ ಉದ್ಯಮ (Own Business) ಆರಂಭಿಸಿ ಕೈ ತುಂಬಾ ಹಣ ಸಂಪಾದಿಸಬಹುದು. ಅಂತದೊಂದು ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ಸರ್ಕಾರದ ಈ ಯೋಜನೆಯಲ್ಲಿ ನಿಮ್ಮ ಕೈ ಸೇರುತ್ತೆ ವಾರ್ಷಿಕ 36,000! ಅರ್ಜಿ ಸಲ್ಲಿಸಿ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ
2022 ರಲ್ಲಿ ಜಾರಿಗೆ ಬಂದ ಈ ಯೋಜನೆ ಬಡವರಿಗೆ ಮಧ್ಯಮ ವರ್ಗದವರಿಗೆ ಅದರಲ್ಲೂ ಸ್ವಂತ ಉದ್ಯಮ ಮಾಡಲು ಬಯಸುವವರಿಗೆ ಹೆಚ್ಚು ಅನುಕೂಲಕರವಾಗಿದೆ ಎನ್ನಬಹುದು.
ಇದೀಗ ಈ ಯೋಜನೆ ಅಡಿಯಲ್ಲಿ ಮಹಿಳೆಯರು ಉಚಿತ ಹೊಲಿಗೆ ಯಂತ್ರ (free sewing machine) ಪಡೆದುಕೊಳ್ಳಲು ಸರ್ಕಾರ ಅರ್ಜಿ ಆಹ್ವಾನಿಸಿದೆ.
ಉಚಿತ ಹೊಲಿಗೆ ಯಂತ್ರ ವಿತರಣೆಗೆ ವಿಶೇಷ ಸೂಚನೆ!
* ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು 15000 ರೂಪಾಯಿಗಳ ಇ – ವೋಚರ್ (e voucher) ಅಥವಾ ರೂಪೇ ಮೂಲಕ ಬ್ಯಾಂಕ್ ಖಾತೆಗೆ (Bank Account) ಜಮಾ ಮಾಡಲಾಗುವುದು.
* ಇದರ ಜೊತೆಗೆ ಐದರಿಂದ ಏಳು ದಿನಗಳ ಟ್ರೈನಿಂಗ್ ಕೂಡ ನೀಡಲಾಗುವುದು.
* Loan : ಬಡ್ಡಿ ರಹಿತ ಅಥವಾ ಅತಿ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು.
ಇಂತಹ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್, ನೇರ ಬ್ಯಾಂಕ್ ಖಾತೆಗೆ ಜಮಾ! ಅರ್ಜಿ ಸಲ್ಲಿಸಿ
ಅರ್ಹತೆಗಳು!
* ಭಾರತ ದೇಶದ ನಿವಾಸಿ ಆಗಿರಬೇಕು
* ಅರ್ಜಿ ಸಲ್ಲಿಸುವ ಮಹಿಳೆಗೆ 18 ವರ್ಷ ಕಳೆದಿರಬೇಕು
* ಕಳೆದ 5 ವರ್ಷಗಳಿಂದ ಸರ್ಕಾರದ ಯಾವುದೇ ಯೋಜನೆಯಿಂದ ಹೋಲಿಕೆ ಯಂತ್ರ ಪಡೆದುಕೊಂಡಿರಬಾರದು
* ಮನೆಯಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಅವಕಾಶ
* ಸರ್ಕಾರಿ ನೌಕರರಿಗೆ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
ಸ್ವಂತ ಬಿಸಿನೆಸ್ ಮಾಡೋ ಆಲೋಚನೆ ಇದ್ರೆ, ಸರ್ಕಾರದಿಂದಲೇ ಸಿಗಲಿದೆ ಬಡ್ಡಿಯಿಲ್ಲದೆ ಸಾಲ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಹೊಲಿಗೆ ಟ್ರೈನಿಂಗ್ ಆಗಿರುವ ಬಗ್ಗೆ ಸರ್ಟಿಫಿಕೇಟ್
ಬ್ಯಾಂಕ್ ಖಾತೆಯ ವಿವರ (Bank Account)
ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನಮಂತ್ರಿಯ ವಿಶ್ವಕರ್ಮ ಯೋಜನೆಯಡಿಯಲ್ಲಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳುವುದಕ್ಕಾಗಿ, ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕವೂ ಕೂಡ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಿದ್ದರೆ, https://pmvishwakarma.gov.in/Login ಈ ವೆಬ್ ಸೈಟ್ ಗೆ ಲಾಗಿನ್ ಆಗಿ. ಮಹಿಳಾ ವಿಭಾಗದಲ್ಲಿ ವಿಶ್ವಕರ್ಮ ಯೋಜನೆ ಆಯ್ಕೆ ಮಾಡಿಕೊಳ್ಳಿ. ನಂತರ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಫಾರಂ ಕಾಣಿಸುತ್ತದೆ. ಅದನ್ನು ಭರ್ತಿ ಮಾಡಿ. ಸರಿಯಾದ ದಾಖಲೆಗಳನ್ನು ನೀಡಿದರೆ ನಿಮ್ಮ ಅರ್ಜಿ ಸಂಪೂರ್ಣಗೊಳ್ಳುತ್ತದೆ.
ಸ್ವಂತ ಮನೆ, ಜಮೀನು, ಆಸ್ತಿ ಹೊಂದಿರುವವರಿಗೆ ಇನ್ಮುಂದೆ ಹೊಸ ತೆರಿಗೆ ನಿಯಮ
ಇನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ, ಹತ್ತಿರದ ಗ್ರಾಮ ಪಂಚಾಯತ್ ಅಥವಾ ಸಿ ಎಸ್ ಸಿ ಕೇಂದ್ರಕ್ಕೆ ಹೋಗಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಫಾರ್ಮ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ಫೋಟೋ ಕಾಪಿ ನೀಡಿ, ಅರ್ಜಿ ಸಲ್ಲಿಸಬಹುದು.
Such People will get a free sewing machine, Apply today
ಅರ್ಹತೆಗಳು!



