ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿ ಸ್ಕಾಲರ್ಶಿಪ್; ಇಂದೇ ಅರ್ಜಿ ಸಲ್ಲಿಸಿ

ವೃತ್ತಿಪರ ಕೋರ್ಸ್ (professional courses) ಮಾಡುವವರಿಗೆ ವಿದ್ಯಾಭ್ಯಾಸ ಮುಂದುವರಿಸಲು ಒಂದು ಲಕ್ಷ ರೂಪಾಯಿಗಳ ವರೆಗೆ ವಿದ್ಯಾರ್ಥಿ ವೇತನ (scholarship) ಪಡೆದುಕೊಳ್ಳಲು ಸಾಧ್ಯವಿದೆ

ಉನ್ನತ ವಿದ್ಯಾಭ್ಯಾಸ (higher education) ಮಾಡುವವರಿಗೆ ಗುಡ್ ನ್ಯೂಸ್, ಎಂಬಿಬಿಎಸ್ (MBBS) ಹಾಗೂ ಇತರ ವೃತ್ತಿಪರ ತರಬೇತಿ ಪಡೆದುಕೊಳ್ಳುವವರಿಗೆ ವೃತ್ತಿಪರ ಕೋರ್ಸ್ (professional courses) ಮಾಡುವವರಿಗೆ ವಿದ್ಯಾಭ್ಯಾಸ ಮುಂದುವರಿಸಲು ಒಂದು ಲಕ್ಷ ರೂಪಾಯಿಗಳ ವರೆಗೆ ವಿದ್ಯಾರ್ಥಿ ವೇತನ (scholarship) ಪಡೆದುಕೊಳ್ಳಲು ಸಾಧ್ಯವಿದೆ

ಅರ್ಹರು ತಕ್ಷಣವೇ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಿ. ಈ ವಿದ್ಯಾರ್ಥಿ ವೇತನದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಫೋನ್‌ಪೇನಲ್ಲಿ ಅಮೌಂಟ್ ಇಲ್ವಾ? ಪರವಾಗಿಲ್ಲ, ಫೋನ್‌ಪೇ ಮೂಲಕವೇ ಪಡೆಯಿರಿ ಲೋನ್

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿ ಸ್ಕಾಲರ್ಶಿಪ್; ಇಂದೇ ಅರ್ಜಿ ಸಲ್ಲಿಸಿ - Kannada News

PW ಫೌಂಡೇಶನ್ (PW foundation) ವಿದ್ಯಾರ್ಥಿ ವೇತನ

2020ರಲ್ಲಿ ಆರಂಭವಾದ ಪಿಡಬ್ಲ್ಯೂ ಫೌಂಡೇಶನ್ 2023-24ನೇ ಸಾಲಿನ ವಾರ್ಷಿಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಜೆಇಇ ಹಾಗೂ ನೀಟ್ ಪರೀಕ್ಷೆಗಳಲ್ಲಿ ಉತ್ತಮ ರಾಂಕ್ ಪಡೆದು, ಈಗ ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು, ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿಗಳ ವರೆಗೆ ವಿದ್ಯಾರ್ಥಿ ವೇತನ (Education scholarship) ಲಭ್ಯವಾಗಲಿದೆ.

ವಿದ್ಯಾರ್ಥಿ ವೇತನಕ್ಕೆ ಬೇಕಾಗಿರುವ ಅರ್ಹತೆಗಳು (Qualification)

*ದೇಶದ ಯಾವುದೇ ಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

*ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವೇತನ 3 ಲಕ್ಷ ಮೀರಿರಬಾರದು.

*ಜೆಇಇ ಹಾಗೂ ನೀಟ್ ಪರೀಕ್ಷೆಗಳಲ್ಲಿ ಉತ್ತಮ ರಾಂಕ್ ಪಡೆದಿರಬೇಕು.

* ಐಐಟಿಗಳು, ಏಮ್ಸ್‌, ಎನ್‌ಐಟಿಗಳು, ಜಿಎಂಸಿ.ಎಸ್‌ ಗಳಲ್ಲಿ ಬಿ.ಟೆಕ್ ಅಥವಾ ಎಂಬಿಬಿಎಸ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರಬೇಕು.

*Buddy4Study ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.

*ಪಿಡಬ್ಲ್ಯೂ ಫೌಂಡೇಶನ್ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿಗಳ ವರೆಗೆ ವಿದ್ಯಾರ್ಥಿ ವೇತನ ಒದಗಿಸುತ್ತದೆ.

ಪಿಡಬ್ಲ್ಯೂ ಫೌಂಡೇಶನ್ ನೀಡುವ ವಿದ್ಯಾರ್ಥಿ ವೇತನವನ್ನು, ಕಾಲೇಜ್ ಶುಲ್ಕ, ಪರೀಕ್ಷಾ ಶುಲ್ಕ, ಆಹಾರ, ಪ್ರಯಾಣ, ಇಂಟರ್ನೆಟ್, ಹಾಸ್ಟೆಲ್ ಮೊದಲಾದ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಆದರೆ ಯಾವುದಕ್ಕೆ ಬಳಸಿಕೊಳ್ಳುತ್ತೀರೋ ಪ್ರತಿಯೊಂದರ ರಶೀದಿ ಸಲ್ಲಿಸಬೇಕಾಗುತ್ತದೆ.

ಈ 5 ಆದಾಯ ಮೂಲಗಳಿಗೆ ಇನ್ಮುಂದೆ ಟ್ಯಾಕ್ಸ್ ಪಾವತಿ ಮಾಡೋದೇ ಬೇಡ! ಹೊಸ ರೂಲ್ಸ್

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Documents)

Education scholarshipಜೆಇಇ ಅಥವಾ ನೀಟ್ ಪರೀಕ್ಷೆಯ ಫಲಿತಾಂಶದ ದಾಖಲೆ

ಕಾಲೇಜ್ ಸೇರಿದ್ದರೆ ಪ್ರವೇಶ ಶುಲ್ಕದ ದಾಖಲಾತಿ

ಆದಾಯ ಪ್ರಮಾಣ ಪತ್ರ

ಆಧಾರ್ ಕಾರ್ಡ್

ಬ್ಯಾಂಕ್ ಪಾಸ್ ಬುಕ್ ಪ್ರತಿ

ವಿದ್ಯಾರ್ಥಿಯ ಭಾವಚಿತ್ರ

ಹಾಗೂ ಇತರ ವೈಯಕ್ತಿಕ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಯಾವುದೇ ಗ್ಯಾರಂಟಿ ಇಲ್ಲದೆ ಸಿಗುತ್ತೆ ₹50,000 ಸಾಲ, ಇದು ಮೋದಿ ಸರ್ಕಾರದ ಅದ್ಭುತ ಯೋಜನೆ

ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ (How to apply)

ಬಿ ಡಬ್ಲ್ಯೂ ಫೌಂಡೇಶನ್ ವತಿಯಿಂದ ಸಿಗುತ್ತಿರುವ ಸ್ಕಾಲರ್ಶಿಪ್ ಪಡೆದುಕೊಳ್ಳಲು https://www.buddy4study.com/page/pw-foundation-scholarship-program ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಪ್ಲೈ ನೌ ಎನ್ನುವ ಆಯ್ಕೆ ಕಾಣಿಸುತ್ತದೆ.

ನಂತರ ಅಗತ್ಯ ಇರುವ ದಾಖಲೆಗಳನ್ನು ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 2023.

ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಕವಾಗಲಿ ಎನ್ನುವ ಕಾರಣಕ್ಕೆ Physics Wallah ಕಂಪನಿ ತನ್ನ ಸಿಎಸ್ಆರ್ ಚಟುವಟಿಕೆಯ (CSR activities) ರೂಪದಲ್ಲಿ ಬಿ ಡಬ್ಲ್ಯೂ ಫೌಂಡೇಶನ್ ಆರಂಭಿಸಿದ್ದು ಆ ಮೂಲಕ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹಣ ಒದಗಿಸಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಿ.

ಮನೆ ಕಟ್ಟೋಕೆ ಬ್ಯಾಂಕ್ ಸಾಲ ಮಾಡಿದ ವ್ಯಕ್ತಿ ಮೃತಪಟ್ಟರೆ ಸಾಲ ತೀರಿಸೋ ಹೊಣೆ ಯಾರದ್ದು?

Such students will get a scholarship of Rs 1 lakh, Apply today

Follow us On

FaceBook Google News

Such students will get a scholarship of Rs 1 lakh, Apply today