ಇಂತಹ ಕಾರ್ಮಿಕರಿಗೆ ಸಿಗುತ್ತೆ 2 ಲಕ್ಷ ರೂಪಾಯಿ ಜೀವ ವಿಮೆ! ಕೂಡಲೇ ಅರ್ಜಿ ಸಲ್ಲಿಸಿ
Life Insurance : ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಜೀವ ವಿಮೆ (Life Insurance), ಆರೋಗ್ಯ ವಿಮೆ (health Insurance) ಅಥವಾ ಅಪಘಾತ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆ ಎನ್ನಬಹುದು.
ಆದರೆ ಇದು ದುಡಿಯುವ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಗತ್ಯವಾಗಿರುವ ಅಂಶವಾಗಿದ್ದು, ಈ ಬಗ್ಗೆ ಸರ್ಕಾರವು ಕೂಡ ಜನರಲ್ಲಿ ಜಾಗೃತಿ ಮೂಡಿಸಿದೆ.

ಸಾಮಾನ್ಯವಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ರೀತಿಯ ಜೀವವಿಮೆ ಸೌಲಭ್ಯ ಇರುವುದಿಲ್ಲ. ಅದಕ್ಕಾಗಿ, ಕಾರ್ಮಿಕರ ಸಾಮಾಜಿಕ ಭದ್ರತೆ ಯೋಜನೆಯ ಅಡಿಯಲ್ಲಿ, ಕಾರ್ಮಿಕರಿಗೆ ಜೀವ ವಿಮೆ, ಅಪಘಾತ ವಿಮೆ ಸೇರಿದಂತೆ ಎರಡು ಲಕ್ಷ ರೂಪಾಯಿಗಳ ವರೆಗೆ ಸರ್ಕಾರ ವಿಮಾ ಸೌಲಭ್ಯವನ್ನು ನೀಡುತ್ತಿದೆ.
ನಂದಿನಿ ಹಾಲಿನ ಡೈರಿ ಆರಂಭಿಸಿ, ಲಕ್ಷಗಟ್ಟಲೆ ಹಣ ಗಳಿಸಿ! ಈ ರೀತಿ ಅರ್ಜಿ ಸಲ್ಲಿಸಿ
ವಿಮೆ ಪಡೆಯಲು ಯಾರು ಅರ್ಹರು? (Who can get insurance)
ಕಾರ್ಮಿಕ ಇಲಾಖೆ (labour department) ನೀಡುತ್ತಿರುವ ವಿಮಾ ಸೌಲಭ್ಯವನ್ನು ಸ್ವೀಗಿ (swiggy) ಝೋಮ್ಯಾಟೋ (Zomato) ದಂತಹ ಫುಡ್ ಡೆಲಿವರಿ (food delivery boys) ಮಾಡುವ ಹುಡುಗರು, ಪ್ರಸಿದ್ಧ ಈ ಪ್ಲಾಟ್ ಫಾರ್ಮ್ ವೇದಿಕೆಗಳಾಗಿರುವ ಫ್ಲಿಪ್ ಕಾರ್ಟ್, ಅಮೆಜಾನ್, ಬಿಗ್ ಬಾಸ್ಕೆಟ್, ಬ್ಲಿಂಕ್ ಇಟ್, ಡಾಮಿನೊಸ್ ಮೊದಲದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ ಅಥವಾ ಡೆಲಿವರಿ ಕೆಲಸ ಮಾಡುವ ಕಾರ್ಮಿಕರಿಗೆ ವಿಮಾ ಸೌಲಭ್ಯ ನೀಡಲಾಗುವುದು.
ಅಸಂಘಟಿತ ಗಿಗ್ ವಿಮಾ ಸೌಲಭ್ಯ ಪಡೆದುಕೊಳ್ಳಲು, 18 ರಿಂದ 60 ವರ್ಷ ವಯಸ್ಸಿನವರು ಅರ್ಹರು. ಆದಾಯ ತೆರಿಗೆ ಪಾವತಿ ಮಾಡುವವರು, ಭವಿಷ್ಯ ನಿಧಿ ಮೊದಲಾದ ಉಳಿತಾಯ ಯೋಜನೆಯನ್ನು ಆರಂಭಿಸಿರುವವರು ಅರ್ಜಿ ಸಲ್ಲಿಸುವಂತಿಲ್ಲ.
ಚಿನ್ನದ ಬೆಲೆ ಭಾರೀ ಇಳಿಕೆ! ಚಿನ್ನ ಬೆಳ್ಳಿ ಖರೀದಿ ಮಾಡೋಕೆ ಇದುವೇ ಬೆಸ್ಟ್ ಟೈಮ್
ಎಷ್ಟು ವಿಮಾ ಸೌಲಭ್ಯ ಪಡೆಯಬಹುದು? (Insurance amount)
ಅಪಘಾತದಿಂದ ಮರಣ ಹೊಂದಿದರೆ ವಿಮಾ ಪರಿಹಾರ ಹಾಗೂ ಅಪಘಾತ ವಿಮೆ ತಲಾ ಎರಡು ಲಕ್ಷ ರೂಪಾಯಿಗಳಂತೆ ನಾಲ್ಕು ಲಕ್ಷ ರೂಪಾಯಿಗಳನ್ನು ಮೃತರ ಕುಟುಂಬಕ್ಕೆ ನೀಡಲಾಗುವುದು.
ಇನ್ನು ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯ ಹೊಂದಿದರೆ ಎರಡು ಲಕ್ಷ ಚಿಕಿತ್ಸಾ ಪರಿಹಾರ ಹಾಗೂ ಆಸ್ಪತ್ರೆಯ ಬಿಲ್ ಮರುಪಾವತಿಗಾಗಿ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುವುದು.
ಇನ್ಮುಂದೆ ಮನೆಯಲ್ಲಿ ಕ್ಯಾಶ್ ಇಟ್ಟುಕೊಳ್ಳೋದಕ್ಕೂ ಇದೇ ಲಿಮಿಟ್; ಮಿತಿಮೀರಿದರೆ ದಂಡ
ವಿಮೆಗಾಗಿ ಅರ್ಜಿ ಸಲ್ಲಿಸಲು ಕಾರ್ಮಿಕರು ಸೇವಾ ಸಿಂಧು ಅಧಿಕೃತ ವೆಬ್ಸೈಟ್ https://sevasindhuservices.karnataka.gov.in/directApply.do?serviceId=2076 ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆ, ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತೀವಿ ಎನ್ನುವುದರ ಐಡಿ ಕಾರ್ಡ್ ಹಾಗೂ ಇ ಶ್ರಮ ನೋಂದಣಿ ಸಂಖ್ಯೆ ಹೊಂದಿರಬೇಕು.
Such workers get Rs 2 lakh life insurance