ನಿಮ್ಮ ಮಗಳಿಗೆ 18 ವರ್ಷ ತುಂಬಿದಾಗ 22 ಲಕ್ಷ ಸಿಗುವ ಬಂಪರ್ ಯೋಜನೆ ಇದು!
ಹೆಣ್ಣು ಮಗಳ ಭವಿಷ್ಯ ಸುರಕ್ಷಿತಗೊಳಿಸಲು ಕೇಂದ್ರ ಸರ್ಕಾರ ಸುಕನ್ಯ ಸಮೃದ್ಧಿ ಯೋಜನೆ ಪರಿಚಯಿಸಿದೆ. ಈಗ ಬಡ್ಡಿದರ ಹೆಚ್ಚಳದಿಂದ ಹೆಚ್ಚಿನ ಲಾಭ, ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಬೆನೆಫಿಟ್ ಪಡೆಯುವ ಅವಕಾಶ.
- 10 ವರ್ಷದೊಳಗಿನ ಬಾಲಕಿಯರ ಹೆಸರಿನಲ್ಲಿ ಖಾತೆ ತೆರೆಯಬಹುದಾದ ಯೋಜನೆ
- 8.2% ವಡ್ಡಿದರ ಹೊಂದಿದ್ದು, ದೀರ್ಘಕಾಲದ ಹೂಡಿಕೆಗೆ ಸೂಕ್ತವಾದ ಯೋಜನೆ
- 21 ವರ್ಷ ಮೇಚ್ಯುರಿಟಿ ಅವಧಿ, 18ರ ನಂತರ ಶೈಕ್ಷಣಿಕ, ವಿವಾಹ ಖರ್ಚುಗಳಿಗಾಗಿ ತಗೊಳ್ಳಬಹುದು
Sukanya Samriddhi Yojana : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಪರಿಚಯಿಸಿದ ಸುಕನ್ಯ ಸಮೃದ್ಧಿ ಯೋಜನೆ (SSY) ಇತ್ತೀಚೆಗೆ ಇನ್ನಷ್ಟು ಲಾಭಕಾರಿ ಆಯ್ಕೆಯಾಗುತ್ತಿದೆ. ಬಡ್ಡಿದರ ಹೆಚ್ಚಳದಿಂದ ಹೂಡಿಕೆದಾರರಿಗೆ ಉತ್ತಮ ಮೌಲ್ಯ ದೊರಕುತ್ತಿದೆ. 8% ನಿಂದ 8.2% ಗೆ ಬಡ್ಡಿದರವನ್ನು ಹೆಚ್ಚಿಸಿದ್ದು, ದೀರ್ಘಕಾಲದ ಹೂಡಿಕೆಗೆ ಇದು ಉತ್ಕೃಷ್ಟ ಆಯ್ಕೆ.
ಸರ್ಕಾರದ ಈ ಯೋಜನೆಯು ವಿಶೇಷವಾಗಿ 10 ವರ್ಷದೊಳಗಿನ ಬಾಲಕಿಯರ ಹೆಸರಿನಲ್ಲಿ ಖಾತೆ (Bank Account) ತೆರೆಯಲು ಅವಕಾಶ ನೀಡುತ್ತದೆ. ಹೆತ್ತವರು ಅಥವಾ ಕಾನೂನು ಪಾಲಕರು ಈ ಖಾತೆಯನ್ನು ತೆರೆಯಬಹುದು.
ಪ್ರತಿಯೊಂದು ಕುಟುಂಬಕ್ಕೂ ಗರಿಷ್ಠ ಎರಡು ಖಾತೆಗಳ ಅವಕಾಶವಿದ್ದು, ಹೆಣ್ಣು ಮಕ್ಕಳಿಗೆ ಮಾತ್ರ ಮೀಸಲಾಗಿರುತ್ತದೆ. ಅಂದಹಾಗೆ, ಒಂದೇ ಪ್ರಸವದಲ್ಲಿ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರೆ ಮೂರನೇ ಖಾತೆಗೆ ಅವಕಾಶ ಇದೆ.
ಬ್ಯಾಂಕ್ ಲೋನ್ ತಗೊಂಡು ಕಟ್ಟೋಕೆ ಆಗಲಿಲ್ಲ ಅಂದ್ರೆ ಬ್ಯಾಂಕ್ ಏನ್ ಮಾಡುತ್ತೆ?
ನಿಯಮ ಮತ್ತು ಹೂಡಿಕೆ ವಿವರಗಳು:
ಸುಕನ್ಯ ಸಮೃದ್ಧಿ ಯೋಜನೆಯ ಮೆಚ್ಯೂರಿಟಿ ಅವಧಿ 21 ವರ್ಷ. ಆದರೆ, 18 ವರ್ಷ ಪೂರೈಸಿದ ನಂತರ ಶಿಕ್ಷಣ (Education) ಅಥವಾ ವಿವಾಹ ವೆಚ್ಚಗಳಿಗಾಗಿ (Marriage) ಹಣ ಹಿಂಪಡೆಯುವ ಅವಕಾಶವಿದೆ. ಈ ಯೋಜನೆಯಲ್ಲಿ ಕನಿಷ್ಠ ₹250 ನಿಂದ ₹1.5 ಲಕ್ಷ ವರ್ಷಕ್ಕೆ ಹೂಡಿಕೆ ಮಾಡಬಹುದು.
ಉದಾಹರಣೆಗೆ, ತಿಂಗಳಿಗೆ ₹4,000 ಹೂಡಿಕೆ ಮಾಡಿದರೆ, ವರ್ಷಕ್ಕೆ ₹48,000 ಹೂಡಿಕೆ ಆಗುತ್ತದೆ. 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ₹7.2 ಲಕ್ಷ ಮೊತ್ತ ಕೊನೆಗೆ ₹15.14 ಲಕ್ಷವಾಗಬಹುದು. ಪೂರ್ಣ ಮೆಚ್ಯುರಿಟಿ ಆದಾಗ ₹22.34 ಲಕ್ಷ ವಾಪಸು ಪಡೆಯಬಹುದು.
ಗಗನ್ನಕ್ಕೇರಿದ್ದ ಚಿನ್ನದ ಬೆಲೆ ಒಂದೇ ದಿನದಲ್ಲಿ ಪಾತಾಳಕ್ಕೆ ಕುಸಿತ! ಗ್ರಾಹಕರಿಗೆ ಸಿಹಿ ಸುದ್ದಿ
ಅರ್ಹತೆ ಮತ್ತು ಅಗತ್ಯ ದಾಖಲೆಗಳು:
ಈ ಯೋಜನೆಯಲ್ಲಿ ಖಾತೆ ತೆರೆಯಲು ಮಗುವಿನ ಜನ್ಮ ಪ್ರಮಾಣ ಪತ್ರ, ಹೆತ್ತವರ ಅಥವಾ ಪಾಲಕರ ವಿಳಾಸ ಮತ್ತು ಗುರುತಿನ ಪ್ರಮಾಣಪತ್ರ ಅಗತ್ಯ. ಖಾತೆಯನ್ನು ರಾಷ್ಟ್ರೀಕೃತ ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಯ (Post Office) ಮೂಲಕ ತೆರೆಯಬಹುದು.
ಯೋಜನೆಯ ಮುಖ್ಯ ಪ್ರಯೋಜನಗಳು:
ಹೆಚ್ಚಿದ ಬಡ್ಡಿದರ, ತೆರಿಗೆ ಸಡಿಲಿಕೆ ಮತ್ತು ಹೂಡಿಕೆ ಭದ್ರತೆ, ಇದು ಸರ್ಕಾರದ ಪೂರ್ತಿ ಭರವಸೆಯುಳ್ಳ ಯೋಜನೆ. ನಿಮ್ಮ ಮಗಳ ಉಜ್ವಲ ಭವಿಷ್ಯವನ್ನು ಕಟ್ಟಲು, ಈ ಯೋಜನೆ ಶ್ರೇಷ್ಠ ಆಯ್ಕೆ.
Sukanya Samriddhi Yojana, Secure Your Daughter Future
Our Whatsapp Channel is Live Now 👇