ಬ್ಯಾಂಕ್ ಗಳಲ್ಲಿ ಬಹುತೇಕ ಎಲ್ಲರೂ ಖಾತೆ ಹೊಂದಿರುತ್ತಾರೆ. ಈಗ ಹಳ್ಳಿಗಳಲ್ಲಿ ಕೂಡ ಬ್ಯಾಂಕ್ ಸೇವೆ (Banking Service) ಲಭ್ಯವಿದೆ. ಹಾಗಾಗಿ ಹಳ್ಳಿಯ ಜನರು ಕೂಡ ಬ್ಯಾಂಕ್ ವಹಿವಾಟು ನಡೆಸುತ್ತಾರೆ. ಈ ವೇಳೆ ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಇದೀಗ ತಮ್ಮ ಗ್ರಾಹಕರಿಗೆ ಒಂದು ಮುಖ್ಯವಾದ ಸುದ್ದಿಯನ್ನು ನೀಡಿದ್ದು, ಈ ಬ್ಯಾಂಕ್ ನ ಸಾವಿರಾರು ಖಾತೆಗಳು ಇನ್ನೊಂದು ತಿಂಗಳಲ್ಲಿ ಕ್ಲೋಸ್ ಆಗಲಿದೆ. ಅಷ್ಟಕ್ಕೂ ಏನಾಗಿದೆ ಗೊತ್ತಾ?

ನಿಮ್ಮ ಆಧಾರ್ ಕಾರ್ಡ್ ಫೋಟೋ ಚನ್ನಾಗಿಲ್ವಾ? ಮೊಬೈಲಿನಲ್ಲೇ ಈ ರೀತಿ ಚೇಂಜ್ ಮಾಡಿಕೊಳ್ಳಿ

Bank Account

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊಸ ರೂಲ್ಸ್!

ಇದೀಗ ಪಂಜಾಬ್ ನ್ಯಾಶನಲ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ಶಾಕಿಂಗ್ ಸುದ್ದಿಯನ್ನೇ ಕೊಟ್ಟಿದ್ದು, ಇನ್ನು ಕೇವಲ 1 ತಿಂಗಳ ಅವಧಿಯಲ್ಲಿ ಈ ಬ್ಯಾಂಕ್ ಗೆ ಸೇರಿದ ಸಾವಿರಾರು ಖಾತೆಗಳನ್ನು (Bank Account) ಮುಚ್ಚಲಾಗುತ್ತದೆ.

ಇದ್ದಕ್ಕಿದ್ದ ಹಾಗೆ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದ್ದು, ಈ ಬಗ್ಗೆ ಮೊದಲು ಗ್ರಾಹಕರಿಗೆ ನೋಟಿಸ್ ಕಳಿಸಲಾಗುತ್ತದೆ, ಒಂದು ತಿಂಗಳ ಅವಧಿಯ ಒಳಗೆ ಗ್ರಾಹಕರ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ ಎಂದರೆ ಆ ಖಾತೆಗಳನ್ನು ಕ್ಲೋಸ್ ಮಾಡಲಾಗುತ್ತದೆ ಎಂದು ತಿಳಿಸಿದೆ.

ಯಾವ ಗ್ರಾಹಕರ ಬ್ಯಾಂಕ್ ಅಕೌಂಟ್ ಮೂರು ವರ್ಷಗಳಿಂದ ಸಕ್ರಿಯವಾಗಿಲ್ಲವೋ, ಯಾರ ಬ್ಯಾಂಕ್ ಅಕೌಂಟ್ ನಲ್ಲಿ ಬಹಳ ಸಮಯದಿಂದ ಜೀರೋ ಬ್ಯಾಂಕ್ ಬ್ಯಾಲೆನ್ಸ್ (Bank Balance) ಇದೆಯೋ ಅವರೆಲ್ಲರ ಬ್ಯಾಂಕ್ ಅಕೌಂಟ್ ಅನ್ನು ಕೂಡ ಕ್ಲೋಸ್ ಮಾಡುವ ನಿರ್ಧಾರ ತೆಗೆದುಕೊಂಡಿದೆ ಪಿ.ಎನ್.ಬಿ.

ಆದರೆ ಅಕೌಂಟ್ ಕ್ಲೋಸ್ ಮಾಡುವ ಮೊದಲು ಗ್ರಾಹಕರಿಗೆ ನೋಟಿಸ್ ಕಳಿಸಲಾಗುತ್ತದೆ. ಅಕೌಂಟ್ ಉಳಿಸಿಕೊಳ್ಳಬೇಕು ಎಂದು ಬಯಸುವ ಗ್ರಾಹಕರು ಬ್ಯಾಂಕ್ ಅನ್ನು ಸಂಪರ್ಕಿಸಬಹುದು.

ಎಟಿಎಂನಿಂದ ಹಣ ಡ್ರಾ ಮಾಡುವವರಿಗೆ ಬ್ಯಾಡ್ ನ್ಯೂಸ್! ಎಲ್ಲಾ ಬ್ಯಾಂಕುಗಳಿಂದ ಬಿಗ್ ಅಪ್ಡೇಟ್

Bank Accountಅಕೌಂಟ್ ಉಳಿಸಿಕೊಳ್ಳಲು ಈ ರೀತಿ ಮಾಡಿ

ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಸಕ್ರಿಯವಾಗಿಲ್ಲ ಎಂದು ನಿಮಗೆ ಮೇಲ್ ಬಂದರೆ, ಆಗ ನೀವು ಬ್ಯಾಂಕ್ ಗೆ ಭೇಟಿ ನೀಡಿ KYC ಅಪ್ಡೇಟ್ ಮಾಡಿಸಿ, ನಿಮ್ಮ ಬ್ಯಾಂಕ್ ಅಕೌಂಟ್ ಸಕ್ರಿಯ ಆಗುವ ಹಾಗೆ ಮಾಡಿಕೊಳ್ಳಬಹುದು. ಹಾಗೆಯೇ ಡಿಮ್ಯಾಟ್ ಖಾತೆಗಳನ್ನು ಬ್ಯಾಂಕ್ ಕಡೆಯಿಂದ ನಿಷ್ರ್ಕಿಯಗೊಳಿಸುವುದಿಲ್ಲ ಎಂದು ತಿಳಿಸಲಾಗಿದೆ.

ಸ್ವಂತ ಬ್ಯುಸಿನೆಸ್ ಶುರು ಮಾಡೋಕೆ ಸಿಗುತ್ತೆ 50,000 ಸಬ್ಸಿಡಿ ಸಾಲ! ಸುಮಾರು ಜನಕ್ಕೆ ಈ ಬಗ್ಗೆ ಗೊತ್ತಿಲ್ಲ

ಪಂಜಾಬ್ ನ್ಯಾಶನಲ್ ಬ್ಯಾಂಕ್ ಕಡೆಯಿಂದ ತಿಳಿದು ಬಂದಿರುವ ಮತ್ತೊಂದು ಪ್ರಮುಖವಾದ ವಿಚಾರ ಏನು ಎಂದರೆ, ಸುಕನ್ಯಾ ಸಮೃದ್ಧಿ ಯೋಜನೆ, ಪಿಎಮ್ ಆವಾಸ್ ಯೋಜನೆ, ವಿಶ್ವಕರ್ಮ ಯೋಜನೆ, ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹೀಗೆ ಸರ್ಕಾರದ ಯೋಜನೆಗಳಿಗಾಗಿ ಅಕೌಂಟ್ ತೆರೆದಿದ್ದು, ಅವುಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲ ಅಥವಾ ಅಕೌಂಟ್ ಸಕ್ರಿಯವಾಗಿಲ್ಲ ಎಂದರೆ ಅಂಥವರ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ.

The bank account of thousands of customers of this bank will be closed

English Summary : Punjab National Bank has given a shocking news to its customers, thousands of accounts belonging to this bank will be closed, The bank has suddenly taken this decision and said that first a notice will be sent to the customers and if there is no response from the customer within a period of one month then those accounts will be closed.