ನಿಮ್ಮ ಆಧಾರ್ ಕಾರ್ಡ್ ಫೋಟೋ ಚನ್ನಾಗಿಲ್ವಾ? ಮೊಬೈಲಿನಲ್ಲೇ ಈ ರೀತಿ ಚೇಂಜ್ ಮಾಡಿಕೊಳ್ಳಿ

Story Highlights

Change Aadhaar card Photo : ಮನೆಯಲ್ಲೇ ಸುಲಭವಾಗಿ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಅಪ್ಡೇಟ್ (Photo Update) ಮಾಡಬಹುದು. ಅದು ಹೇಗೆ ಎಂದು ತಿಳಿಯೋಣ

Change Aadhaar card Photo : ಭಾರತೀಯರ ಬಳಿ ಇರಬೇಕಾದ ಪ್ರಮುಖವಾದ ದಾಖಲೆ ಆಧಾರ್ ಕಾರ್ಡ್. ಈಗ ಬೇರೆ ಎಲ್ಲಾ ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Link) ಮಾಡಬೇಕು ಎಂದು ಸರ್ಕಾರ ಕಡ್ಡಾಯಗೊಳಿಸಿದೆ.

ಹಾಗೆಯೇ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕು ಎಂದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು. ಹಾಗಾಗಿ ಹುಟ್ಟುವ ಮಗುವಿನಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕೂಡ ಆಧಾರ್ ಕಾರ್ಡ್ ಮಾಡಿಸಿಕೊಂಡಿರಬೇಕು. ಆಧಾರ್ ಕಾರ್ಡ್ ನಲ್ಲಿ ನಮ್ಮ ಐಡೆಂಟಿಟಿ ಆಗಿ ನಮ್ಮ ಫೋಟೋ (Photo) ಇರುತ್ತದೆ.

ಆಧಾರ್ ಕಾರ್ಡ್ ನಲ್ಲಿರುವ ನಮ್ಮ ಫೋಟೋ ನಮಗೆ ಇಷ್ಟವಿಲ್ಲದೇ ಇರಬಹುದು. ಅಥವಾ ಅದರಲ್ಲಿ ಇರುವ ಫೋಟೋ ಬ್ಲರ್ ಆಗಿರಬಹುದು. ಅಥವಾ ಬಹಳ ವರ್ಷಗಳ ಹಿಂದೆ ತೆಗೆಸಿರುವ ಫೋಟೋ ಆಗಿರುವ ಕಾರಣ ಹಳೆಯದು ಆಗಿರಬಹುದು.

ಆಗ ನೀವು ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಬದಲಾವಣೆ ಮಾಡಿಕೊಳ್ಳಬೇಕು ಎಂದುಕೊಳ್ಳುವುದು ಸಹಜ ಆಗಿದೆ. ಇದಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಬದಲಾಯಿಸುವ ಅಗತ್ಯವಿಲ್ಲ. ಮನೆಯಲ್ಲೇ ಸುಲಭವಾಗಿ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಅಪ್ಡೇಟ್ (Photo Update) ಮಾಡಬಹುದು. ಅದು ಹೇಗೆ ಎಂದು ತಿಳಿಯೋಣ…

ಎಟಿಎಂನಿಂದ ಹಣ ಡ್ರಾ ಮಾಡುವವರಿಗೆ ಬ್ಯಾಡ್ ನ್ಯೂಸ್! ಎಲ್ಲಾ ಬ್ಯಾಂಕುಗಳಿಂದ ಬಿಗ್ ಅಪ್ಡೇಟ್

ಆಧಾರ್ ಕಾರ್ಡ್ ಫೋಟೋ ಬದಲಾವಣೆ ಪ್ರಕ್ರಿಯೆ

*ಮೊದಲಿಗೆ https://uidai.gov.in/en/ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇದು ಯುಐಡಿಎಐ ನ ಅಧಿಕೃತ ವೆಬ್ಸೈಟ್ ಆಗಿದೆ..

*ಈ ವೆಬ್ಸೈಟ್ ನ ಹೋಮ್ ಪೇಜ್ ನಲ್ಲಿರುವ ಆಧಾರ್ ಎನ್ರೋಲ್ಮೆಂಟ್ ಫಾರ್ಮ್ ಡೌನ್ಲೋಡ್ ಮಾಡಿ, ಪ್ರಿಂಟೌಟ್ ತೆಗೆದುಕೊಳ್ಳಿ.

*ಅದರಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿ.

*ಬಳಿಕ ನಿಮ್ಮ ಮನೆಗೆ ಹತ್ತಿರ ಇರುವ ಆಧಾರ್ ಎನ್ರೋಲ್ಮೆಂಟ್ ಸೆಂಟರ್ ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಿ.

*ಬಳಿಕ ಬಯೋಮೆಟ್ರಿಕ್ ಮಾಡಿಸಿ.

*ಬಳಿಕ ಅಲ್ಲಿರುವ ಅಧಿಕಾರಿ ಆಗ ನೀವು ಹೇಗಿದ್ದೀರೋ ಹಾಗೆ ಫೋಟೋ ತೆಗೆಯುತ್ತಾರೆ.

*ಬಳಿಕ ನಿಮಗೆ ಆಧಾರ್ ಅಪ್ಡೇಟ್ ರಿಕ್ವೆಸ್ಟ್ ನಂಬರ್ ಮತ್ತು ಒಂದು ಸ್ಲಿಪ್ ಅನ್ನು ಕೂಡ ಕೊಡಲಾಗುತ್ತದೆ.

ಸ್ವಂತ ಬ್ಯುಸಿನೆಸ್ ಶುರು ಮಾಡೋಕೆ ಸಿಗುತ್ತೆ 50,000 ಸಬ್ಸಿಡಿ ಸಾಲ! ಸುಮಾರು ಜನಕ್ಕೆ ಈ ಬಗ್ಗೆ ಗೊತ್ತಿಲ್ಲ

Aadhaar Cardನೀವು ಗಮನಿಸಬೇಕಾದ ಅಂಶಗಳು

*ಆಧಾರ್ ಕಾರ್ಡ್ ನಲ್ಲಿ ಫೋಟೋ ಅಪ್ಡೇಟ್ ಮಾಡಿಸುವುದಕ್ಕೆ ಯಾವುದೇ ದಾಖಲೆಗಳ ಅಗತ್ಯವಿಲ್ಲ ಹಾಗಾಗಿ ಏನನ್ನು ತೆಗೆದುಕೊಂಡು ಹೋಗಬೇಡಿ.

*ಆಧಾರ್ ಸೆಂಟರ್ ನಲ್ಲೇ ನಿಮ್ಮ ಫೋಟೋ ಕ್ಲಿಕ್ ಮಾಡುತ್ತಾರೆ, ಅದಕ್ಕಾಗಿ ನಿಮ್ಮ ಬೇರೆ ಫೋಟೋ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ.

*ಆಧಾರ್ ನಲ್ಲಿ ನಿಮ್ಮ ಬಗೆಗಿನ ಮಾಹಿತಿ ಅಪ್ಡೇಟ್ ಆಗುವುದಕ್ಕೆ 90 ದಿನಗಳ ಸಮಯ ತೆಗೆದುಕೊಳ್ಳುತ್ತದೆ.

*ನಿಮಗೆ ಕೊಡುವ URN ನಂಬರ್ ಬಳಸಿ, ಆಧಾರ್ ಅಪ್ಡೇಟ್ ಸ್ಟೇಟಸ್ ಚೆಕ್ ಮಾಡಬಹುದು.

*ಸೆಲ್ಫ್ ಸರ್ವಿಸ್ ಪೋರ್ಟಲ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಿಲ್ಲ.

*ನಿಮ್ಮ ಫೋಟೋ ಅಪ್ಡೇಟ್ ಆದ ಬಳಿಕ ಮತ್ತೆ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು.

ರೈತರಿಗಾಗಿ ಹೊಸ ಯೋಜನೆ, ಸಿಗಲಿದೆ 2 ಲಕ್ಷ ಸಾಲ! ಬ್ಯಾಂಕಿನಲ್ಲೇ ಅಪ್ಲಿಕೇಶನ್ ಫಾರ್ಮ್ ಸಿಗುತ್ತದೆ

ಆಧಾರ್ ಕಾರ್ಡ್ ಡೌನ್ಲೋಡ್ ಮಾಡೋದು ಹೇಗೆ?

*ಮೊದಲು ಯುಐಡಿಎಐ ವೆಬ್ಸೈಟ್ ಗೆ ಭೇಟಿ ನೀಡಿ

*ಇಲ್ಲಿ ಮೈ ಆಧಾರ್ ಎನ್ನುವ ಆಪ್ಶನ್ ಗೆ ಹೋಗಿ, ಅಲ್ಲಿ ಡೌನ್ಲೋಡ್ ಆಧಾರ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ನಿಮ್ಮ ಆಧಾರ್ ನಂಬರ್ ಹಾಕಿ, ಫೋನ್ ಗೆ ಬರುವ ಓಟಿಪಿ ಹಾಕಿ, ಕ್ಯಾಪ್ಚ ಕೋಡ್ ಎಂಟರ್ ಮಾಡಿ

*ಓಟಿಪಿ ಇಂದ ಲಾಗಿನ್ ಮಾಡಿ

*ಡೌನ್ಲೋಡ್ ಆಧಾರ್ ಎನ್ನುವ ಆಪ್ಷನ್ಸ್ ಸೆಲೆಕ್ಟ್ ಮಾಡುವ ಮೂಲಕ ನಿಮ್ಮ ಅಪ್ಡೇಟ್ ಆಗಿರುವ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿ.

ಬಡವರ ಸ್ವಂತ ಮನೆ ಕನಸು ನನಸಾಗುವ ಕಾಲ ಬಂತು! ಸರ್ಕಾರದಿಂದ ಮನೆ ಭಾಗ್ಯ; ಹೊಸ ಯೋಜನೆ

Make this to change your Aadhaar card Photo in Online

Related Stories