ರೈತರಿಗಾಗಿ ಹೊಸ ಯೋಜನೆ, ಸಿಗಲಿದೆ 2 ಲಕ್ಷ ಸಾಲ! ಬ್ಯಾಂಕಿನಲ್ಲೇ ಅಪ್ಲಿಕೇಶನ್ ಫಾರ್ಮ್ ಸಿಗುತ್ತದೆ
ಈ ಒಂದು ಯೋಜನೆಯ ಮೂಲಕ ಸರ್ಕಾರವು ರೈತರಿಗೆ 2 ಲಕ್ಷದವರೆಗೂ ಸ್ವಂತ ಉದ್ಯಮ (Own Business) ಶುರು ಮಾಡಲು ಸಾಲ (Loan) ನೀಡುತ್ತಿದೆ.
Loan Scheme : ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ದೇಶದ ಬೆನ್ನೆಲುಬು ಆಗಿರುವ ರೈತನಿಗೆ ಸಹಾಯ ಮಾಡುವಂಥ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ರೈತರು ಆರ್ಥಿಕವಾಗಿ ಸದೃಢವಾಗಿರಲಿ ಎನ್ನುವುದು ಸರ್ಕಾರದ ಉದ್ದೇಶ.
ನಮಗೆಲ್ಲ ಗೊತ್ತಿರುವ ಹಾಗೆ ಕೃಷಿ ಕೆಲಸವನ್ನು ಯಾವಾಗಲೂ ನಂಬಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಸಕಾಲಕ್ಕೆ ಮಳೆ ಬರುವುದು ಎಂದು ನಂಬಲು ಆಗೋದಿಲ್ಲ. ಜೊತೆಗೆ ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆಗಳು ಕೂಡ ಎದುರಾಗುತ್ತದೆ.
ಮಳೆ ಬಾರದೇ ಅಥವಾ ಅತಿಯಾಗಿ ಮಳೆ ಬಂದು ಬೆಳೆ ಹಾನಿ ಸಮಸ್ಯೆ ಶುರುವಾಗಬಹುದು ಅಥವಾ ಇನ್ನಿತರ ಸಮಸ್ಯೆಗಳು ಉಂಟಾಗಬಹುದು. ಅಂಥ ಪರಿಸ್ಥಿತಿ ಬರಬಾರದು ಎಂದು ಕೃಷಿಯ ಜೊತೆಗೆ ಬೇರೆ ಸಣ್ಣ ಉದ್ಯಮವನ್ನು ಶುರು ಮಾಡಲು ಸರ್ಕಾರವು ರೈತರಿಗೆ ಪ್ರೋತ್ಸಾಹ ನೀಡುತ್ತಿದೆ.
ಅದಕ್ಕಾಗಿ ಕೆಲವು ಯೋಜನೆಗಳನ್ನು ಕೂಡ ಪರಿಚಯಿಸುತ್ತಿದೆ. ಈ ಒಂದು ಯೋಜನೆಯ ಮೂಲಕ ಸರ್ಕಾರವು ರೈತರಿಗೆ 2 ಲಕ್ಷದವರೆಗೂ ಸ್ವಂತ ಉದ್ಯಮ (Own Business) ಶುರು ಮಾಡಲು ಸಾಲ (Loan) ನೀಡುತ್ತಿದೆ.
ಬಡವರ ಸ್ವಂತ ಮನೆ ಕನಸು ನನಸಾಗುವ ಕಾಲ ಬಂತು! ಸರ್ಕಾರದಿಂದ ಮನೆ ಭಾಗ್ಯ; ಹೊಸ ಯೋಜನೆ
ಹೈನುಗಾರಿಕೆ ಒಳ್ಳೆಯ ಉದ್ಯಮ
ರೈತರು ಕೃಷಿ (Agriculture) ಕೆಲಸದ ಜೊತೆಗೆ ಮಾಡುವ ಉದ್ಯಮ ಎಂದರೆ ಹೈನುಗಾರಿಕೆ ಒಳ್ಳೆಯ ಆಯ್ಕೆ ಆಗಿದೆ. ಈ ಬಗ್ಗೆ ರೈತರಿಗೆ ಅದಾಗಲೇ ಗೊತ್ತಿರುವ ಕಾರಣ ಸುಲಭವಾಗಿ ಅವರು ಈ ಉದ್ಯಮವನ್ನು ಶುರು ಮಾಡಿಕೊಂಡು ಹೋಗಬಹುದು. ಅದರಿಂದ ಲಾಭವನ್ನು ಪಡೆಯಬಹುದು. ಹೈನುಗಾರಿಕೆಯಲ್ಲಿ ಜಾನುವಾರುಗಳನ್ನು ಸಾಕುವುದು, ಡೈರಿ ಉದ್ಯಮ ಶುರು ಮಾಡುವುದು ಇದೆಲ್ಲವೂ ಸಹ ಒಳ್ಳೆಯ ಆಯ್ಕೆ ಆಗಿರುತ್ತದೆ.
ಜಾನುವಾರುಗಳನ್ನು ಸಾಕಿ, ಅವುಗಳ ವ್ಯವಹಾರ ಮಾಡುವುದಕ್ಕೆ ಮುಖ್ಯವಾಗಿ ಜಾನುವಾರುಗಳನ್ನು ನೋಡಿಕೊಳ್ಳಲು ಶೆಡ್ ಬೇಕಾಗುತ್ತದೆ. ಈ ಶೆಡ್ ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಸಾಲ ಸಿಗುತ್ತದೆ.
ಮನೆ ಬಾಡಿಗೆಗೆ ಕೊಟ್ಟಿರೋ ಮನೆ ಓನರ್‌ಗಳಿಗೆ ಬಿಗ್ ಅಪ್ಡೇಟ್! ಮೊದಲು ಹೊಸ ನಿಯಮ ತಿಳಿಯಿರಿ
ಕೇಂದ್ರ ಸರ್ಕಾರವು ಪಶು ಸಂಗೋಪನೆಗಾಗಿ, ಶೆಡ್ ಗಳನ್ನು ನಿರ್ಮಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ 2 ಲಕ್ಷ ರೂಪಾಯಿಗಳವರೆಗು ಸಾಲ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಈ ಹಣಕ್ಕಾಗಿ ನಿಮಗೆ ಸಬ್ಸಿಡಿ ಸೌಲಭ್ಯ ಕೂಡ ಸಿಗುತ್ತದೆ. ಹಾಗಾಗಿ ಎಲ್ಲಾ ರೈತರು ಕೂಡ ಈ ಯೋಜನೆಯ ಸೌಲಭ್ಯ ಪಡೆಯಬಹುದು.
ತಕ್ಷಣವೇ ಅರ್ಜಿ ಸಲ್ಲಿಸಿ
ನೀವು ರೈತರಾಗಿದ್ದು ಪಶುಸಂಗೋಪನೆ ಬಗ್ಗೆ ಆಸಕ್ತಿ ಇದ್ದರೆ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ನಿಮಗೆ ಹತ್ತಿರ ಇರುವ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಪಡೆಯಬಹುದು.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಿಗ್ ಅಪ್ಡೇಟ್! ರಾತ್ರೋ ರಾತ್ರಿ ಬಡ್ಡಿದರದಲ್ಲಿ ಬದಲಾವಣೆ
ಇನ್ನು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ, ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆದು ಅರ್ಜಿ ಸಲ್ಲಿಸಬಹುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನಿಮಗೆ ಶೆಡ್ ನಿರ್ಮಾಣಕ್ಕೆ 2 ಲಕ್ಷದವರೆಗು ಸಾಲ (Bank Loan) ಸೌಲಭ್ಯ ಸಿಗುತ್ತದೆ.
New scheme for farmers, will get 2 lakh loan, Apply Through bank