ಕುರಿ, ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!

Story Highlights

Loan Scheme : ಕುರಿ ಅಥವಾ ಕೋಳಿ ಫಾರ್ಮ್ (poultry farming) ಪ್ರಾರಂಭಿಸುವವರಿಗೆ ಸರ್ಕಾರದ ಯೋಜನೆ ಅಡಿಯಲ್ಲಿ 25 ರಿಂದ 30 ಲಕ್ಷ ರೂಪಾಯಿಗಳ ಸಾಲ ಸಿಗುತ್ತದೆ.

Loan Scheme : ನಮ್ಮ ದೇಶದ ಪ್ರಮುಖ ಕಸುಬು ಎಂಬುದಾಗಿ ನಾವು ಕೃಷಿ (Agriculture) ಯನ್ನು ಕರೆಯುತ್ತೇವೆ. ಬೇಸಾಯ ಮಾಡೋದು ಖಂಡಿತವಾಗಿ ರೈತರ ಪ್ರಮುಖ ಗುರಿಯಾಗಿರುತ್ತದೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅದರ ಜೊತೆಗೆನೇ ರೈತರು (farmers ) ಹಣವನ್ನು ಸಂಪಾದನೆ ಮಾಡುವಂತಹ ಕೆಲವೊಂದು ಬೇರೆ ರೀತಿಯ ಕೆಲಸಗಳನ್ನು ಕೂಡ ಮಾಡಬೇಕಾಗಿರುತ್ತದೆ

ಉದಾಹರಣೆಗೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಕುರಿ ಹಾಗೂ ಮೇಕೆ ಸಾಕಾಣಿಕೆಗಳಂತಹ ಬೇರೆ ಬೇರೆ ಕಸುಬುಗಳನ್ನು ಕೂಡ ಈ ಸಂದರ್ಭದಲ್ಲಿ ರೈತರು ಹೆಚ್ಚಿನ ಹಣದ ಆದಾಯವನ್ನು ಪಡೆದುಕೊಳ್ಳಲು ಮಾಡಬೇಕಾಗಿರುತ್ತದೆ.

ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ಹೈನುಗಾರಿಕೆಗೆ ಸಿಗುವಂತಹ ಸರ್ಕಾರದ ಸಾಲದ (Loan) ಯೋಜನೆ ಬಗ್ಗೆ ಹೇಳೋದಕ್ಕೆ.

ಕೆನರಾ ಬ್ಯಾಂಕ್ ಅಕೌಂಟ್ ಇದ್ರೆ ಬಂಪರ್ ಅವಕಾಶ! ಇದು ನಿಮ್ಮ ಹಣ ಡಬಲ್ ಮಾಡೋ ಸ್ಕೀಮ್

ಎಲ್ಎಲ್ಎಂ ಯೋಜನೆ

ಕುರಿ ಅಥವಾ ಕೋಳಿ ಫಾರ್ಮ್ (poultry farming) ಪ್ರಾರಂಭಿಸುವವರಿಗೆ ಸರ್ಕಾರದ ಕಡೆಯಿಂದ ಎಲ್ ಎಲ್ ಎಮ್ ಯೋಜನೆ ಅಡಿಯಲ್ಲಿ 25 ರಿಂದ 30 ಲಕ್ಷ ರೂಪಾಯಿಗಳ ಸಾಲ ಸಿಗುತ್ತದೆ.

ಈ ರೀತಿ ಹೈನುಗಾರಿಕೆ (diary farming) ಹಾಗೂ ಕುರಿ ಕೋಳಿ ಸಾಕಾಣಿಕೆ ಕ್ಷೇತ್ರದಲ್ಲಿ ಯುವಜನತೆಯನ್ನು ಇನ್ನಷ್ಟು ಉತ್ತೇಜಿಸುವ ಕಾರಣಕ್ಕಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

ಸರ್ಕಾರವೇ ಈ ರೀತಿ ದೊಡ್ಡ ಮಟ್ಟದ ಸಾಲದ ಮೊತ್ತವನ್ನು ನೀಡುವುದರಿಂದಾಗಿ ಖಂಡಿತವಾಗಿ ಗ್ರಾಮೀಣ ಪ್ರದೇಶ (village area) ದಲ್ಲಿ ಇರುವಂತಹ ರೈತರು ಕೂಡ ಬೇಸಾಯವನ್ನು ಹೊರತುಪಡಿಸಿ ಇನ್ನೊಂದು ಪ್ರಮುಖ ಆದಾಯವನ್ನು ಸ್ಥಾಪಿಸಿಕೊಳ್ಳುವಂತಹ ಆರ್ಥಿಕ ಸಬಲತೆ ಕೂಡ ಕೃಷಿ ಕ್ಷೇತ್ರದಲ್ಲಿ ಈ ಯೋಜನೆಯ ಮೂಲಕ ಸೃಷ್ಟಿ ಆಗಲಿದೆ.

ಇದೊಂದು ಕಾರ್ಡ್ ಇದ್ರೆ ಸಾಕು ಇಂತಹ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬೆನಿಫಿಟ್!

Loan schemeಈ ಯೋಜನೆಯಲ್ಲಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಎಲ್ಲ ವರ್ಗದ ರೈತರು ಕೂಡ ಈ ಯೋಜನೆ ಅಡಿಯಲ್ಲಿ ಕುರಿ ಅಥವಾ ಕೋಳಿ ಫಾರ್ಮ್ (Poultry Farm) ಮಾಡುವುದಕ್ಕೆ ಆಸಕ್ತಿ ಇದ್ರೆ ಸಾಲವನ್ನು (Loan) ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಅವರ ಬಳಿ ಸ್ವಂತಭೂಮಿಯನ್ನು ಹೊಂದಿರುವವರು ಭೂಮಿಯ ಪತ್ರ ಹಾಗೂ ಆಧಾರ್ ಕಾರ್ಡ್ (Aadhaar card) ಅನ್ನು ಪ್ರಮುಖವಾಗಿ ಒದಗಿಸಬೇಕು.

ಬಾಡಿಗೆ ಭೂಮಿಯನ್ನು ಹೊಂದಿರುವಂತಹ ರೈತರು ತಮ್ಮ ಅಗ್ರಿಮೆಂಟ್ ಪೇಪರ್ ಅನ್ನು ನೀಡಬೇಕು. ಎಲ್ಲಿ ಕೋಳಿ ಫಾರ್ಮ್ ಅನ್ನು ಕಟ್ಟಬೇಕು ಎಂಬುದಾಗಿ ಯೋಜನೆಯನ್ನು ಹಾಕಿಕೊಂಡಿದ್ದೀರೋ ಅದರ ಜಿಪಿಎಸ್ ಫೋಟೋ ನೀಡಬೇಕಾಗಿರುತ್ತದೆ.

ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ 90% ಸಬ್ಸಿಡಿ ಸಿಗಲಿದೆ, ಅರ್ಜಿ ಸಲ್ಲಿಸಿ!

ಇದರ ಜೊತೆಗೆ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (Bank Statement) ಅನ್ನು ಕೂಡ ಒದಗಿಸಬೇಕಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ದುಡಿದಿರುವಂತಹ ಅನುಭವವನ್ನು ಹೊಂದಿರುವಂತಹ ಸರ್ಟಿಫಿಕೇಟ್ ಬೇಕು. ಇದರ ಜೊತೆಗೆ ಅಟ್ಯಾಚ್ ಆಗಿರುವ ಅಡ್ರೆಸ್ ಪ್ರೂಫ್ ಬೇಕಾಗಿರುತ್ತದೆ.

Poultry Farming Loan Detailsಅರ್ಜಿ ಸಲ್ಲಿಸುವ ವಿಧಾನ

ಕುರಿ ಕೋಳಿ ಫಾರ್ಮ್ ಮಾಡುವಂತಹ ಎಲ್ ಎಲ್ ಎಮ್ ಯೋಜನೆ ಅಡಿಯಲ್ಲಿ ಸರ್ಕಾರ ನಿಮಗೆ 25 ರಿಂದ 30 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ನೀಡುತ್ತದೆ. ಮೊದಲನೆಯದಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದು ಅಲ್ಲಿಯೇ ಅರ್ಜಿ ಸಲ್ಲಿಸಿ ಸಾಲವನ್ನು ಪಡೆದುಕೊಳ್ಳಬಹುದು.

ನಿಮಗೂ ಸಿಗುತ್ತೆ ಸ್ವಂತ ಬಿಸಿನೆಸ್ ಮಾಡೋದಕ್ಕೆ 10 ಲಕ್ಷ ಸಾಲ! ಯೋಜನೆಗೆ ಅರ್ಜಿ ಸಲ್ಲಿಸಿ

ಇಲ್ಲದೆ ಹೋದಲ್ಲಿ ನೀವು https://nlm.udyamimitra.in ಈ ಅಧಿಕೃತ ವೆಬ್ಸೈಟ್ನಲ್ಲಿ ಹೋಗಿ ಬೇಕಾಗಿರುವಂತಹ ಮಾಹಿತಿಗಳನ್ನು ತುಂಬಿಸಿ ನಂತರ ಕೇಳಲಾಗುವಂತಹ ಡಾಕ್ಯುಮೆಂಟ್ ಗಳನ್ನು ಅಟಾಚ್ ಮಾಡಿ ಸಬ್ಮಿಟ್ ಮಾಡಿದ ನಂತರ ಈ ಯೋಜನೆಗೆ ಬೇಕಾಗಿರುವಂತಹ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

The government will give 30 lakh subsidy loan for sheep and chicken farming