ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ 90% ಸಬ್ಸಿಡಿ ಸಿಗಲಿದೆ, ಅರ್ಜಿ ಸಲ್ಲಿಸಿ!

Story Highlights

ನೀವು ಅರ್ಹರಾಗಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ಲೋನ್ ಅನ್ನು (Loan) ನಿಮ್ಮ ಬ್ಯಾಂಕಿನ ಖಾತೆಗೆ ವರ್ಗಾವಣೆ (Bank Account) ಮಾಡಲಾಗುತ್ತದೆ.

ನಮ್ಮ ರಾಜ್ಯದ ರೈತರಿಗೆ (farmers) ಸರ್ಕಾರ ಕೇವಲ ಕೃಷಿ ಮಾತ್ರವಲ್ಲದೆ ಕೃಷಿಯ ಜೊತೆಗೆ ಮಾಡುವಂತಹ ಪಶುಪಾಲನೆಗಾಗಿ ಕೂಡ ಪ್ರೋತ್ಸಾಹವನ್ನು ನೀಡಲು ಹೊರಟಿದೆ. ಮೇಕೆ ಸಾಕಾಣಿಕೆ (goat farming) ಮಾಡುವಂತಹ ರೈತರಿಗೆ 90% ಸಹಾಯಧನದ (subsidy Loan) ಜೊತೆಗೆ ಒಂದು ವಿಶೇಷ ಯೋಜನೆಯ ಜಾರಿಗೆ ತಂದಿದ್ದು, ಬನ್ನಿ ಇವತ್ತಿನ ಈ ಲೇಖನದ ಮೂಲಕ ಆ ಮಾಹಿತಿಯನ್ನು ತಿಳಿಯೋಣ.

ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಭಾರಿ ಪ್ರೋತ್ಸಾಹ

ಮೇಕೆ ಸಾಕಾಣಿಕೆ ಮಾಡುವಂತಹ ರೈತರಿಗೆ ಒಂದು ಕೋಟಿ ರೂಪಾಯಿಗಳವರೆಗು ಕೂಡ ಸಾಲ ಸೌಲಭ್ಯವನ್ನು (Loan) ನೀಡುವಂತಹ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಕೃಷಿ (agriculture)ಯ ಜೊತೆಗೆ ಈ ರೀತಿ ಪಶು ಪಾಲನೆ ಅಂದರೆ ಮೇಕೆ ಸಾಕಾಣಿಕೆ ಅಂತಹ ಕಮರ್ಷಿಯಲ್ ಪಶು ಪಾಲನೆಯನ್ನು ಕೂಡ ರೈತರು ಮಾಡುವ ಕಾರಣಕ್ಕಾಗಿ ಇದಕ್ಕೆ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

ಮೇಕೆ ಸಾಕಾಣಿಕೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನೀಡುವಂತಹ ದೊಡ್ಡ ಮಟ್ಟದ ಉದ್ಯಮಗಳಲ್ಲಿ ಒಂದಾಗಿದೆ. ಈ ಯೋಜನೆ ಅಡಿಯಲ್ಲಿ 1 ಕೋಟಿ ರೂಪಾಯಿಗಳಲ್ಲಿ 90% ಸಹಾಯಧನವನ್ನು ಸರ್ಕಾರ ನೀಡಲಿದೆ.

ನಿಮಗೂ ಸಿಗುತ್ತೆ ಸ್ವಂತ ಬಿಸಿನೆಸ್ ಮಾಡೋದಕ್ಕೆ 10 ಲಕ್ಷ ಸಾಲ! ಯೋಜನೆಗೆ ಅರ್ಜಿ ಸಲ್ಲಿಸಿ

ನಬಾರ್ಡ್ ನಿಂದ ಸಹಾಯಧನ ಸಹಾಯಧನ

ಮೇಕೆ ಸಾಕಾಣಿಕೆ ಯೋಜನೆಗೆ ಸಾಲ ನೀಡುವುದರಲ್ಲಿ ಬೇರೆ ಬ್ಯಾಂಕುಗಳಿಂದ ನಬಾರ್ಡ್ (NABARD) ಬ್ಯಾಂಕ್, ಮುಂಚೂಣಿಯಲ್ಲಿದೆ. ಇಲ್ಲಿ ಬಿಪಿಎಲ್ ವರ್ಗದ ಅಡಿಯಲ್ಲಿ ಬರುವಂತಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು 50% ಸಹಾಯಧನವನ್ನು ಪಡೆಯಬಹುದಾಗಿದೆ.

ಇನ್ನು ಉಳಿದ ಹಿಂದುಳಿದ ವರ್ಗದ ಜನರು 40 ಪ್ರತಿಶತ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಸಹಾಯಧನದ ಗರಿಷ್ಠ ಮೊತ್ತ 50 ಲಕ್ಷ ರೂಪಾಯಿಗಳ ವರೆಗೆ ಇರುತ್ತದೆ.

ಇನ್ನು ಈ ಯೋಜನೆ ಅಡಿಯಲ್ಲಿ ಸಾಲವನ್ನು ನೀಡುವಂತಹ ಬ್ಯಾಂಕುಗಳ (Banks) ಬಗ್ಗೆ ಮಾತನಾಡುವುದಾದರೆ ಗ್ರಾಮೀಣ ಬ್ಯಾಂಕ್, ಅರ್ಬನ್ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ರಾಜ್ಯ ಸಹಕಾರಿ ಕೃಷಿ ಬ್ಯಾಂಕ್ ಸೇರಿದಂತೆ ಇನ್ನು ಹಲವಾರು ಬ್ಯಾಂಕುಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ.

ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ ಈ ಹಸು; ತಿಂಗಳಿಗೆ ಗಳಿಸಬಹುದು 50,000 ಆದಾಯ!

Goat farmingಅರ್ಜಿ ಸಲ್ಲಿಸುವುದು ಹೇಗೆ?

* ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿ ಇರುವಂತಹ ರೈತರು ಮೊದಲಿಗೆ ತಮ್ಮ ಹತ್ತಿರದ ಬ್ಯಾಂಕುಗಳಿಗೆ ಹೋಗಿ ಈ ಯೋಜನೆ ಅಡಿಯಲ್ಲಿ ಸಿಗುವಂತಹ ಸಾಲದ ಅರ್ಜಿ ಫಾರ್ಮ್ ಅನ್ನು ತೆಗೆದುಕೊಳ್ಳಬೇಕು.

* ಅರ್ಜಿ ಫಾರ್ಮ್ ಪಡೆದ ನಂತರ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಿಸಬೇಕು ಹಾಗೂ ಕೇಳಲಾಗುವಂತಹ ಪ್ರತಿಯೊಂದು ಡಾಕ್ಯುಮೆಂಟ್ಗಳನ್ನು ಅಟ್ಯಾಚ್ ಮಾಡಬೇಕು. ಕೇಳಲಾಗುವಂತಹ ಫೋಟೋ ಕಾಪಿಗಳನ್ನು ಕೂಡ ಇದರ ಜೊತೆಗೆ ಅಟ್ಯಾಚ್ ಮಾಡುವುದನ್ನು ಮರೆಯಬೇಡಿ.

ಯುಗಾದಿ ಹಬ್ಬಕ್ಕೂ ಮುನ್ನವೇ ಚಿಕನ್ ಮಟನ್ ಬೆಲೆಯಲ್ಲಿ ಏರಿಕೆ! ಎಷ್ಟಾಗಿದೆ ಗೊತ್ತಾ ಬೆಲೆ

* ಮೊದಲಿಗೆ ನೀವು ಭರ್ತಿ ಮಾಡಿರುವಂತಹ ಅರ್ಜಿ ಫಾರ್ಮ್ ಅನ್ನು ಬ್ಯಾಂಕಿನ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಅದು ಸರಿಯಾಗಿದ್ದರೆ ಹಾಗೂ ನೀವು ಅರ್ಹರಾಗಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ಲೋನ್ ಅನ್ನು (Loan) ನಿಮ್ಮ ಬ್ಯಾಂಕಿನ ಖಾತೆಗೆ ವರ್ಗಾವಣೆ (Bank Account) ಮಾಡುತ್ತಾರೆ.

ಇನ್ನು ಮೇಕೆ ಸಾಕಾಣಿಕೆ ಮೇಲೆ ಅರ್ಜಿ ಸಲ್ಲಿಸುವಂತಹ ರೈತರು ತಾವು ಪಡೆದುಕೊಂಡಿರುವಂತಹ ಲೋನ್ (loan) ಮೇಲೆ 11.20% ಬಡ್ಡಿ ದರ (rate of interest) ದಲ್ಲಿ ಬಡ್ಡಿಯನ್ನು ಕಟ್ಟಬೇಕಾಗಿರುತ್ತದೆ. ಮೇಕೆ ಸಾಕಾಣಿಕೆ ಮಾಡುವಂತಹ ರೈತರು ಈ ಮೇಲಿನ ಹೇಳಿರುವಂತಹ ಬ್ಯಾಂಕುಗಳಲ್ಲಿ ಅಥವಾ ಫೈನಾನ್ಸಿಯಲ್ ಸಂಸ್ಥೆಗಳಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ನಿಮ್ಮ 50 ಲಕ್ಷ ಸಾಲಕ್ಕೆ ಸರ್ಕಾರವೇ ಕೊಡುತ್ತೆ 35% ಸಬ್ಸಿಡಿ! ಈಗಲೇ ಪಡೆಯಿರಿ ಬೆನಿಫಿಟ್

Goat farmers will get 90 Percent subsidy from the government

Related Stories