ಯುಗಾದಿ ಹಬ್ಬಕ್ಕೂ ಮುನ್ನವೇ ಚಿಕನ್ ಮಟನ್ ಬೆಲೆಯಲ್ಲಿ ಏರಿಕೆ! ಎಷ್ಟಾಗಿದೆ ಗೊತ್ತಾ ಬೆಲೆ

ದಿನಬಳಕೆಯ ವಸ್ತುಗಳಿಂದ ಹಿಡಿದು ಸಿಲಿಂಡರ್ (Gas Cylinder), ಪೆಟ್ರೋಲ್ (Petrol) ಎಲ್ಲಾ ವಸ್ತುಗಳ ದರವು ಕೂಡ ಗಗನಕ್ಕೇರಿದೆ.

Bengaluru, Karnataka, India
Edited By: Satish Raj Goravigere

ಇತ್ತೀಚಿಗೆ ಒಂದಲ್ಲಾ ಒಂದು ವಸ್ತುವಿನ ಬೆಲೆ ಏರಿಕೆ ಆಗುತ್ತಿದೆ. ಹಣದುಬ್ಬರದ ಪ್ರತಿಯೊಬ್ಬ ನಾಗರಿಕರ ಮೇಲು ಬಹುವಾಗಿ ಪರಿಣಾಮ ಬೀರುತ್ತಿದೆ ಎನ್ನಬಹುದು. ದಿನಬಳಕೆಯ ವಸ್ತುಗಳಿಂದ ಹಿಡಿದು ಸಿಲಿಂಡರ್ (Gas Cylinder), ಪೆಟ್ರೋಲ್ (Petrol) ಎಲ್ಲಾ ವಸ್ತುಗಳ ದರವು ಕೂಡ ಗಗನಕ್ಕೇರಿದೆ. ಯಾವ ಬೆಲೆ ಇಳಿಕೆಯ ಸುಳಿವು ಕಾಣಿಸುತ್ತಿಲ್ಲ. ಆದರೆ ಇದರ ಜೊತೆಗೆ ನಿಮಗೆ ಮತ್ತೊಂದು ಶಾಕಿಂಗ್ ವಿಷಯ ಇದೆ.

ಹೌದು, ನೀವು ಚಿಕನ್ ಮಟನ್ ಮಾಂಸಾಹಾರ (non veg) ಪ್ರಿಯರಾಗಿದ್ರೆ ಖಂಡಿತವಾಗಿಯೂ ಈ ಸುದ್ದಿ ನಿಮಗಾಗಿ. ನಮ್ಮ ರಾಜ್ಯದಲ್ಲೇ ತಗೊಂಡ್ರೆ ಸಾಕಷ್ಟು ಜನ ಪ್ರತಿನಿತ್ಯ ಮಾಂಸವನ್ನು ಸೇವಿಸುತ್ತಾರೆ, ಮಾಂಸದ ಊಟ ಇಲ್ಲದೆ ಇದ್ರೆ ಊಟವೇ ಆಗುವುದಿಲ್ಲ ಅನ್ನುವಷ್ಟರ ಮಟ್ಟಿಗೆ ನಾನ್ ವೆಜ್ ಇಷ್ಟಪಡುವವರು ಇದ್ದಾರೆ.

Increase in the price of chicken and mutton before Ugadi festival

ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ ಈ ಹಸು; ತಿಂಗಳಿಗೆ ಗಳಿಸಬಹುದು 50,000 ಆದಾಯ!

ಅಂತವರಲ್ಲಿ ನೀವು ಕೂಡ ಒಬ್ಬರಾಗಿದ್ದರೆ ಖಂಡಿತ ನಿಮಗೆ ಇದು ಆತಂಕಕಾರಿ ವಿಷಯ. ಹೌದು ಚಿಕನ್ (chicken) ದರ ಈಗ ಗಗನಕ್ಕೇರಿದೆ. ಚಿಕನ್ ಖರೀದಿ ಮಾಡುವವರು ತಲೆಕೆಡಿಸಿಕೊಳ್ಳುವಂತೆ ಆಗಿದೆ.

ಹಬ್ಬಕ್ಕೂ ಮೊದಲೇ ಮಾಂಸಹಾರದ ಬೆಲೆ ಗಗನಕ್ಕೆ!

ಚಿನ್ನದ ಬೆಲೆ (Gold Price) ಏರಿಕೆ ಕಂಡಂತೆ ಮಾಂಸದ ಬೆಲೆ ಕೂಡ ದಿನದಿಂದ ದಿನಕ್ಕೆ ಏರುತ್ತಿದೆ, ಮಾರುಕಟ್ಟೆಯಲ್ಲಿ ಚಿಕನ್ ಹಾಗೂ ಮಟನ್ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದ್ದು ಮಾಂಸಪ್ರಿಯರಿಗೆ ಮಾಂಸ ಖರೀದಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಲೆಸ್ ಬೈಲರ್ ಚಿಕನ್ ಬೆಲೆ ಪ್ರತಿ ಕೆಜಿಗೆ 230 ರಿಂದ 420 ರೂಪಾಯಿಗಳ ವರೆಗೆ ದಾಖಲಾಗಿದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 10,000 ರೂಪಾಯಿ; ಹೇಗೆ ಗೊತ್ತಾ?

Chicken Priceಚಿಕನ್ ಬೆಲೆ ಈ ಹಿಂದೆ 100ರಿಂದ 150 ರೂಪಾಯಿಗಳ ವರೆಗೆ ಇತ್ತು ಈಗ ಒಂದೇ ಸಲ 100 ರಿಂದ 200 ರೂಪಾಯಿಗಳವರೆಗೆ ಏರಿಕೆಯನ್ನು ಕಂಡಿದ್ದು 240ಗಳ ವರೆಗೂ ನೀವು ಪಾವತಿ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಟೈಸನ್ ಚಿಕನ್ ಬೆಲೆ 270ಗಳಿಗೆ ಏರಿಕೆ ಆಗಿದೆ.

ಇನ್ನು ಮಟನ್ ಮುಟ್ಟುವ ಹಾಗೆ ಇಲ್ಲ. ಪ್ರತಿ ಕೆಜಿಗೆ 700 ರಿಂದ 800 ಗಳನ್ನು ಕೊಟ್ಟು ಖರೀದಿ ಮಾಡಬೇಕು. ಹಾಗಾದ್ರೆ ಫಿಶ್ ತಿನ್ಕೊಂಡು ಇದ್ದುಬಿಡೋಣ ಅಂತ ಯೋಚನೆ ಮಾಡಿದರೆ ಅದು ಸಾಧ್ಯ ಇಲ್ಲ ಫಿಶ್ ಬೆಲೆ ಕೂಡ ತುಂಬಾನೇ ಏರಿಕೆ ಆಗಿದೆ.

ನಿಮ್ಮ 50 ಲಕ್ಷ ಸಾಲಕ್ಕೆ ಸರ್ಕಾರವೇ ಕೊಡುತ್ತೆ 35% ಸಬ್ಸಿಡಿ! ಈಗಲೇ ಪಡೆಯಿರಿ ಬೆನಿಫಿಟ್

ಯಾಕೆ ಮಾಂಸದ ಬೆಲೆ ಏರಿಕೆ ಆಗಿದೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆ ಎಷ್ಟಿದೆ ಅಂದ್ರೆ ಮನುಷ್ಯರಿಗೆ ಆ ಬಿಸಿ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತದ್ರಲ್ಲಿ ಪ್ರಾಣಿ-ಪಕ್ಷಿಗಳಿಗಂತೂ ಇನ್ನು ಕಷ್ಟ. ಹೀಗಾಗಿ ತಾಪಮಾನದ ಏರಿಕೆಯಿಂದ ಕೋಳಿಗಳ ಬೆಳವಣಿಗೆ ಕುಂಠಿತಗೊಂಡಿದೆ.

ಬಿಸಿಲಿನ ಬೇಗೆಗೆ ಕೋಳಿಗಳು ಸಾವನ್ನಪ್ಪುತ್ತಿವೆ. ಇದರಿಂದಾಗಿ ಕೋಳಿ ಮಾಂಸ ಉತ್ಪಾದನೆ ಒಂದೇ ಸಮನೆ ಇಳಿಕೆ ಆಗಿದ್ದು ಮಾರುಕಟ್ಟೆಯಲ್ಲಿ ಚಿಕನ್ ದರ ವಿಪರೀತ ಜಾಸ್ತಿಯಾಗಿದೆ. ಹೀಗಾಗಿ ಮಾಂಸಹಾರವನ್ನು ಸೇವನೆ ಮಾಡುವುದು ಹೇಗಪ್ಪಾ ಅಂತ ಚಿಂತೆ ಮಾಡುವಂತಾಗಿದೆ ಮಾಂಸಪ್ರಿಯರಿಗೆ.

ಸರ್ಕಾರ ನೀಡುತ್ತಿದೆ ಉಚಿತ ಮನೆ, ಸ್ವಂತ ಮನೆ ಇಲ್ಲದವರಿಗೆ ಬಂಪರ್ ಅವಕಾಶ! ಅಪ್ಲೈ ಮಾಡಿ

Increase in the price of chicken and mutton before Ugadi festival