ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ ಈ ಹಸು; ತಿಂಗಳಿಗೆ ಗಳಿಸಬಹುದು 50,000 ಆದಾಯ!
ಹೈನುಗಾರಿಕೆ (dairy farming) ನಮ್ಮ ದೇಶದಲ್ಲಿ ಬಹಳ ಮುಖ್ಯವಾಗಿರುವ ಒಂದು ಕೃಷಿ (Agriculture) ಉಪಕಸುಬು ಎಂದು ಹೇಳಬಹುದು. ಯಾಕಂದ್ರೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆ ಯಾವಾಗಲೂ ಹೆಚ್ಚುತ್ತಲೇ ಇರುತ್ತದೆ ಹಾಗೂ ನಮ್ಮ ದೇಶದಲ್ಲಿ ತಯಾರಾಗುವ ಹಾಲಿನ ಉತ್ಪನ್ನಗಳು ವಿದೇಶಗಳವರೆಗೂ ರಫ್ತಾಗುತ್ತವೆ.
ಚಿನ್ನದ (Gold) ಬೇಡಿಕೆ ಹೇಗೆ ಕಡಿಮೆ ಆಗುವುದಿಲ್ಲವೋ ಹಾಗೆ ಹಾಲಿನ ಬೇಡಿಕೆ ಕೂಡ ಒಂದೇ ಒಂದು ದಿನವೂ ಕಡಿಮೆ ಆಗುವುದಿಲ್ಲ. ಪ್ರತಿ ದಿನ, ಬಹುತೇಕ ಎಲ್ಲಾ ಭಾರತೀಯರ ಮನೆಗಳಲ್ಲಿಯೂ ಹಾಲನ್ನ ಬಳಸಲಾಗುತ್ತದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 10,000 ರೂಪಾಯಿ; ಹೇಗೆ ಗೊತ್ತಾ?
ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ಹೈನುಗಾರಿಕೆಗೆ ರಾಜ್ಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಬೇರೆ ಬೇರೆ ತಳಿಯ ಹಸುಗಳನ್ನು ಅಥವಾ ಎಮ್ಮೆಗಳನ್ನು ಸಾಕಿ ಹೈನುಗಾರಿಕೆ ಉದ್ಯಮ ಮಾಡುವವರಿಗೆ ಸರ್ಕಾರ ಕೂಡ ಬೆಂಬಲ ನೀಡುತ್ತಿದೆ. ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ (Loan) ಒದಗಿಸುತ್ತದೆ. ಈಗ ನಾವು ಹೇಳುವ ಬ್ರೀಡ್ ಹಸುವನ್ನ ನೀವು ಸಾಕಾಣಿಕೆ ಮಾಡಿದರೆ ಪ್ರತಿ ತಿಂಗಳು ಸುಲಭವಾಗಿ 50,000ಗಳಿಗಿಂತಲೂ ಹೆಚ್ಚಿನ ಆದಾಯವನ್ನು ಪಡೆಯಬಹುದು.
ದಿನಕ್ಕೆ 45 ರಿಂದ 50 ಲೀ. ಹಾಲು ಕೊಡುತ್ತೆ, ಈ ಹಸು!
ಸಾಮಾನ್ಯವಾಗಿ ಗರಿಷ್ಠ 30ರಿಂದ 35 ಲೀಟರ್ ಹಾಲು ಕೊಡುವ ಹಸುವಿನ ಬಗ್ಗೆ ನೀವು ಕೇಳಿರಬಹುದು. ಆದರೆ ಈಗ ನಾವು ಹೇಳುತ್ತಿರುವ ಒಂದು ಬ್ರೀಡ್ ಹಸು ದಿನಕ್ಕೆ 45 ರಿಂದ ಕೊಡುತ್ತದೆ ಇದರಿಂದ ಪ್ರತಿ ತಿಂಗಳು ಅತಿ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು.
ಅದರಲ್ಲೂ ಒಂದಕ್ಕಿಂತ ಹೆಚ್ಚಿನ ಹಸುವನ್ನು ಸಾಕಾಣಿಕೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲದೆ ಸುಲಭವಾಗಿ ಲಕ್ಷಗಟ್ಟಲೆ ಆದಾಯ ಗಳಿಸಲು ಸಾಧ್ಯವಿದೆ.
ನಿಮ್ಮ 50 ಲಕ್ಷ ಸಾಲಕ್ಕೆ ಸರ್ಕಾರವೇ ಕೊಡುತ್ತೆ 35% ಸಬ್ಸಿಡಿ! ಈಗಲೇ ಪಡೆಯಿರಿ ಬೆನಿಫಿಟ್
ಎಲ್ಲಿ ಸಿಗುತ್ತೆ ಈ ಹಸು!
ಸಾಮಾನ್ಯವಾಗಿ ಪಂಜಾಬ್ ನಲ್ಲಿ ಇರುವ ಬ್ರೀಡ್ ಹಸುಗಳು 50 ಲೀಟರ್ ವರೆಗೆ ಹಾಲನ್ನು ಕೊಡಬಲ್ಲದು ಈ ಹಸುವಿನ ಬೆಲೆ ಸುಮಾರು 6 ಲಕ್ಷ ರೂಪಾಯಿಗಳಷ್ಟು. ನೀವೇನಾದ್ರೂ ಒಂದಕ್ಕಿಂತ ಹೆಚ್ಚು ಆಕಳನ್ನು ಸಾಕಿದರೆ ಲಕ್ಷಗಟ್ಟಲೆ ಆದಾಯ ನಿಮ್ಮದಾಗುತ್ತದೆ.
ಈ ಹಸುವಿನ ನಿರ್ವಹಣೆ ಅಷ್ಟು ಸುಲಭವಲ್ಲ ನೀವು ಸ್ವಲ್ಪ ಮುತುವರ್ಜಿ ಇಂದ ನಿರ್ವಹಣೆ ಮಾಡಬೇಕಾಗುತ್ತದೆ. ಹಸು ಇರುವ ಜಾಗ ಸ್ವಚ್ಛವಾಗಿರಬೇಕು. ಸರಿಯಾದ ಆಹಾರ ಕೊಡಬೇಕು. ಆರೋಗ್ಯ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು.
ಸರ್ಕಾರ ನೀಡುತ್ತಿದೆ ಉಚಿತ ಮನೆ, ಸ್ವಂತ ಮನೆ ಇಲ್ಲದವರಿಗೆ ಬಂಪರ್ ಅವಕಾಶ! ಅಪ್ಲೈ ಮಾಡಿ
ಈ ಹಸುವಿನ ಕೆಚ್ಚಲು ಮಾಮೂಲಿ ಹಸುವಿಗೆ ಇರುವಂತೆ ಇರುವುದಿಲ್ಲ ಅದಕ್ಕಿಂತ ಬಹಳ ವಿಭಿನ್ನವಾಗಿ ಹಾಗೂ ಬಹಳ ದೊಡ್ಡದಾಗಿ ಇರುತ್ತದೆ ಹಾಗಾಗಿ ಅದರ ನಿರ್ವಹಣೆ ಕೂಡ ಬಹಳ ಮುಖ್ಯ.
ಒಟ್ಟಿನಲ್ಲಿ ಹೈನುಗಾರಿಕೆ ಬಗ್ಗೆ ನಿಮಗೆ ಒಲವು ಇದ್ದರೆ ಜೊತೆಗೆ ಎಕ್ಸ್ಪೀರಿಯನ್ಸ್ ಇದ್ದರೆ, ಈ ರೀತಿಯ ಹಸುಗಳನ್ನು ತಂದು ಸಾಕಿ ಉತ್ತಮ ಆದಾಯ ಗಳಿಸಬಹುದು.
This cow gives 50 liters of milk per day, 50,000 income per month