Business News

ನಿಮಗೂ ಸಿಗುತ್ತೆ ಸ್ವಂತ ಬಿಸಿನೆಸ್ ಮಾಡೋದಕ್ಕೆ 10 ಲಕ್ಷ ಸಾಲ! ಯೋಜನೆಗೆ ಅರ್ಜಿ ಸಲ್ಲಿಸಿ

Loan Scheme : ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದಲ್ಲಿ ಈಗಾಗಲೇ ಕೇಂದ್ರ ಸರ್ಕಾರ (central government) ದೇಶದ ಯುವ ಜನತೆಗೆ ಸ್ವಾವಲಂಬಿಯಾಗಿ ನಿಂತುಕೊಳ್ಳಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳಲ್ಲಿ ಇವತ್ತಿನ ಈ ಲೇಖನದಲ್ಲಿ ಕೂಡ ನಾವು ನಿಮಗೆ ಒಂದು ಪ್ರಮುಖವಾದ ಯೋಜನೆ ಬಗ್ಗೆ ಹೇಳಲು ಹೊರಟಿದ್ದೇವೆ. ಬನ್ನಿ ಆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಮುದ್ರಾ ಯೋಜನೆ (mudra Loan scheme)

ಇಂದಿನ ಸಮಯದಲ್ಲಿ ನಮ್ಮ ದೇಶದಲ್ಲಿ ಕೆಲವರು ಸಾಕಷ್ಟು ದೊಡ್ಡ ಮಟ್ಟದ ಉನ್ನತ ವ್ಯಾಸಂಗವನ್ನು ಪಡೆದುಕೊಂಡಿರುತ್ತಾರೆ ಆದರೆ ಅವರಿಗೆ ಸರಿಯಾದ ಕೆಲಸ ಸಿಕ್ಕಿರೋದಿಲ್ಲ. ಅಂತವರಿಗಾಗಿ ಸ್ವಂತ ಉದ್ಯಮ (own business) ವನ್ನು ಪ್ರಾರಂಭಿಸಬೇಕು ಎನ್ನುವಂತಹ ಆಸೆ ಇದ್ರೆ ಮುದ್ರಾ ಲೋನ್ (mudra loan) ಯೋಜನೆಯ ಮೂಲಕ 10 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ನೀಡುವ ಮೂಲಕ ಅಂತಹ ಯುವ ಜನತೆಯ ಕನಸಿಗೆ ಆಸರೆ ನೀಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ.

More People applying for the new scheme of the central government

ಯುಗಾದಿ ಹಬ್ಬಕ್ಕೂ ಮುನ್ನವೇ ಚಿಕನ್ ಮಟನ್ ಬೆಲೆಯಲ್ಲಿ ಏರಿಕೆ! ಎಷ್ಟಾಗಿದೆ ಗೊತ್ತಾ ಬೆಲೆ

ಈ ಸಾಲವನ್ನು (Loan) ಪಡೆದುಕೊಳ್ಳುವ ಮೂಲಕ ಹೊಸ ವ್ಯಾಪಾರವನ್ನು ಪ್ರಾರಂಭ ಮಾಡಬಹುದು ಅಥವಾ ಈಗ ಇರುವಂತಹ ವ್ಯಾಪಾರವನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ ನಿಮಗೆ 50,000 ಗಳಿಂದ ಪ್ರಾರಂಭಿಸಿ 10 ಲಕ್ಷ ರೂಪಾಯಿಗಳವರೆಗೆ ಕೂಡ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಮೂರು ರೀತಿಯಲ್ಲಿ ಸಿಗುತ್ತೆ ಸಾಲ

50,000ಗಳವರೆಗೆ ಶಿಶು ಸಾಲ ನಿಮಗೆ ಸಿಗುತ್ತದೆ.

ಐವತ್ತು ಸಾವಿರದಿಂದ 5 ಲಕ್ಷಗಳವರೆಗೆ ಕಿಶೋರ ಸಾಲ ಸಿಗುತ್ತದೆ.

5 ಲಕ್ಷದಿಂದ 10 ಲಕ್ಷ ರೂಪಾಯಿಗಳ ವರೆಗೆ ತರುಣ ಸಾಲ ಸಿಗುತ್ತದೆ.

ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ ಈ ಹಸು; ತಿಂಗಳಿಗೆ ಗಳಿಸಬಹುದು 50,000 ಆದಾಯ!

ಯಾವುದಕ್ಕೆ ಈ ಸಾಲವನ್ನು ಉಪಯೋಗಿಸಿಕೊಳ್ಳಬಹುದು?

ಈ ಸಾಲದಿಂದ ನೀವು,
ಜನರಲ್ ಸ್ಟೋರ್
ಟ್ಯಾಕ್ಸಿ ಅಥವಾ ಆಟೋರಿಕ್ಷಾ
ಗ್ಯಾರೇಜ್
ಜೆರಾಕ್ಸ್ ಅಂಗಡಿ
ಹೂ ಹಣ್ಣು ವ್ಯಾಪಾರ ಮಾಡುವ ಅಂಗಡಿ
ಮೀನು ಮಾಂಸ ಮಾರಾಟ ಮಾಡುವ ಅಂಗಡಿ
ಜಿಮ್
ಕೋಳಿ ಅಥವಾ ಕುರಿ ಸಾಕಾಣಿಕೆ
ಉಪ್ಪಿನಕಾಯಿ ಹಪ್ಪಳ ಸಂಡಿಗೆ ತಯಾರಿಸುವ ಸ್ಥಳ
ಬ್ಯೂಟಿ ಪಾರ್ಲರ್ ಅಥವಾ ಸಲೂನ್ ಗಳಂತಹ ಚಿಕ್ಕಪುಟ್ಟ ವ್ಯಾಪಾರವನ್ನು ಪ್ರಾರಂಭ ಮಾಡಬಹುದಾಗಿದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 10,000 ರೂಪಾಯಿ; ಹೇಗೆ ಗೊತ್ತಾ?

ಸಾಲವನ್ನು ಪಡೆಯಲು ಬೇಕಾಗಿರುವ ಮುಖ್ಯ ಡಾಕ್ಯುಮೆಂಟ್ಗಳು

* ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಹಾಗೂ ಅಡ್ರೆಸ್ ಪ್ರೂಫ್ ಬೇಕಾಗಿರುತ್ತದೆ.

* ಮೂರು ವರ್ಷಗಳ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಹಾಗೂ ಮಾಲಿಕತ್ವದ ಪುರಾವೆ ಬೇಕಾಗಿರುತ್ತದೆ.

* ಸ್ವಯಂ ಮೌಲ್ಯಮಾಪನ ರಿಪೋರ್ಟ್ ಹಾಗೂ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ಕೂಡ ನೀವು ಈ ಸಂದರ್ಭದಲ್ಲಿ ಒದಗಿಸಬೇಕಾಗಿರುತ್ತದೆ.

ಈ ಯೋಜನೆಯ ಲಾಭಗಳು

Mudra Loanಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಂತಹ ವರ್ಗಗಳ ಯುವ ವ್ಯಾಪಾರಿಗಳಿಗೆ ಅಥವಾ ಅಂತಹ ಮನೋಭಾವ ಉಳ್ಳವರಿಗೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಹಣ ಸಾಲ ರೂಪದಲ್ಲಿ ಸಿಗುತ್ತದೆ.

ಉದಾಹರಣೆಗೆ ತರುಣ ಸಾಲದಲ್ಲಿ 0.50% ಬಡ್ಡಿಯನ್ನು ಮಾತ್ರ ವಿಧಿಸಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ನೀವು ತೆಗೆದುಕೊಂಡಿರುವಂತಹ ಸಾಲದ ಮೇಲೆ ಸಬ್ಸಿಡಿಯನ್ನು ವಿಧಿಸುವಂತಹ ಆಪ್ಷನ್ ಇದ್ದರೆ ಆಯ್ಕೆಯನ್ನು ಕೂಡ ಸರ್ಕಾರ ಅಳವಡಿಸುತ್ತದೆ.

ನಿಮ್ಮ 50 ಲಕ್ಷ ಸಾಲಕ್ಕೆ ಸರ್ಕಾರವೇ ಕೊಡುತ್ತೆ 35% ಸಬ್ಸಿಡಿ! ಈಗಲೇ ಪಡೆಯಿರಿ ಬೆನಿಫಿಟ್

ಮುದ್ರಾ ಲೋನ್ ಅನ್ನು ನೀಡುವ ಕೆಲವು ಪ್ರಮುಖ ಬ್ಯಾಂಕುಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ಬ್ಯಾಂಕ್ ಆಫ್ ಇಂಡಿಯಾ (Bank of India)

ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra)

ಬ್ಯಾಂಕ್ ಆಫ್ ಬರೋಡ (Bank of Baroda)

ಕೆನರಾ ಬ್ಯಾಂಕ್ (Canara Bank)

ಡೆಕ್ಕನ್ ಗ್ರಾಮೀಣ ಬ್ಯಾಂಕ್ (Deccan Bank)

ಆಕ್ಸಿಸ್ ಬ್ಯಾಂಕ್ (Axis Bank)

ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank)

ಫೆಡರಲ್ ಬ್ಯಾಂಕ್ ಲಿಮಿಟೆಡ್ (federal Bank limited)

ಸರ್ಕಾರ ನೀಡುತ್ತಿದೆ ಉಚಿತ ಮನೆ, ಸ್ವಂತ ಮನೆ ಇಲ್ಲದವರಿಗೆ ಬಂಪರ್ ಅವಕಾಶ! ಅಪ್ಲೈ ಮಾಡಿ

ಗುಜರಾತ್ ಸ್ಟೇಟ್ ಕೋ ಆಪರೇಟಿವ್ ಬ್ಯಾಂಕ್ (Gujarat state ko operative Bank) ಸೇರಿದಂತೆ ಸಾಕಷ್ಟು ಪ್ರಮುಖ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ನೀವು ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

get 10 lakh loan for own business, Apply for a government scheme

Our Whatsapp Channel is Live Now 👇

Whatsapp Channel

Related Stories