ಇದೊಂದು ಕಾರ್ಡ್ ಇದ್ರೆ ಸಾಕು ಇಂತಹ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬೆನಿಫಿಟ್!
ರೈತರು (farmers) ನಮ್ಮ ಭಾರತ ದೇಶದ ಬೆನ್ನೆಲುಬು. ಅವರು ಚೆನ್ನಾಗಿದ್ರೆ ನಮ್ಮ ದೇಶ ಚೆನ್ನಾಗಿರುತ್ತೆ. ಇನ್ನು ಈ ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ಬೇಕಾಗಿರುವಂತಹ ಗೊಬ್ಬರ, ಟ್ರ್ಯಾಕ್ಟರ್, ಪಂಪ್ಸೆಟ್ ಸೇರಿದಂತೆ ಕೃಷಿ ಉಪಕರಣಗಳನ್ನು ಖರೀದಿಸುವುದಕ್ಕಾಗಿ ಹಣ ಆಗಾಗ ಬೇಕಾಗಿರುತ್ತದೆ.
ಸರ್ಕಾರದ ಈ ಕಾರ್ಡ್ ಹೊಂದಿದ್ರೆ ಅವರಿಗೆ 3 ಲಕ್ಷ ರೂಪಾಯಿಗಳವರೆಗೂ ಕೂಡ ಸಾಲ (loan) ಸಿಗುತ್ತೆ. ಇವತ್ತಿನ ಈ ಲೇಖನದ ಮೂಲಕ ಈ ಯೋಜನೆಯ ಬಗ್ಗೆ ರೈತರಿಗೆ ಇನ್ನಷ್ಟು ಹೆಚ್ಚಿನ ಜ್ಞಾನವನ್ನು ನೀಡುವಂತಹ ಕೆಲಸವನ್ನು ಮಾಡೋಣ.
ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ 90% ಸಬ್ಸಿಡಿ ಸಿಗಲಿದೆ, ಅರ್ಜಿ ಸಲ್ಲಿಸಿ!
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (Kisan credit scheme)
ಕೇಂದ್ರ ಸರ್ಕಾರ (Central government) ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಿಂದಾಗಿ ರೈತರು ತಾವು ಮಾಡುವಂತಹ ಕೃಷಿ ಕೆಲಸದಲ್ಲಿ ಬೇಕಾಗಿರುವಂತಹ ಹಣವನ್ನು ಅತ್ಯಂತ ಕಡಿಮೆ ಅಥವಾ ಬಡ್ಡಿರಹಿತ ಸಾಲ (loan without interest) ದ ಮೂಲಕ ಪಡೆದುಕೊಳ್ಳುತ್ತಿದ್ದಾರೆ.
ಅವುಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆ ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಈ ಯೋಜನೆಯ ಮೂಲಕ ರೈತರು 3,00,000ಗಳವರೆಗೂ ಕೂಡ ಸಾಲ ಸೌಲಭ್ಯವನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು.
ಈ ಸಾಲವನ್ನು ಯಾರೆಲ್ಲ ಪಡೆಯಬಹುದು – ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು ಯಾವುವು?
* ಸ್ಥಿರವಾಗಿರುವಂತಹ ಆದಾಯದ ಮೂಲ ಹೊಂದಿರುವಂತಹ ರೈತರು ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
* ಕನಿಷ್ಠ ಒಂದು ಎಕರೆಯಿಂದ ಪ್ರಾರಂಭಿಸಿ ಗರಿಷ್ಠ 10 ಎಕರೆಯವರಿಗೆ ಕೂಡ ಭೂಮಿಯನ್ನು ಹೊಂದಿರುವಂತಹ ರೈತರು ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ನಿಮಗೂ ಸಿಗುತ್ತೆ ಸ್ವಂತ ಬಿಸಿನೆಸ್ ಮಾಡೋದಕ್ಕೆ 10 ಲಕ್ಷ ಸಾಲ! ಯೋಜನೆಗೆ ಅರ್ಜಿ ಸಲ್ಲಿಸಿ
* 18 ರಿಂದ 70 ವರ್ಷದ ವಯಸ್ಸಿನ ನಡುವೆ ಇರುವಂತಹ ಕೃಷಿಕರು ಈ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಬಹುದು.
ಬೇಕಾಗಿರುವಂತಹ ದಾಖಲೆಗಳನ್ನು ಗಮನಿಸುವುದಾದರೆ ಪಹಣಿ ಪತ್ರದ ಜೊತೆಗೆ ಆಧಾರ್ ಕಾರ್ಡ್ ಅನ್ನು ಒದಗಿಸ ಬೇಕಾಗಿರುತ್ತದೆ. ಇದರ ಜೊತೆಗೆ ನಿಮ್ಮ ಇನ್ಕಮ್ ಸರ್ಟಿಫಿಕೇಟ್ ಅನ್ನು ಕೂಡ ನೀಡಬೇಕಾಗಿರುತ್ತದೆ. ಇದರ ಜೊತೆಗೆ ನಿಮ್ಮ ವೋಟರ್ ಐಡಿ ಸೇರಿದಂತೆ ಕೆಲವೊಂದು ಪ್ರಮುಖ ಅಗತ್ಯ ಆಗಿರುವಂತಹ ದಾಖಲೆಗಳನ್ನು ನೀಡಬೇಕಾಗಿರುತ್ತದೆ.
ಈ ಯೋಜನೆಯ ಪ್ರಮುಖ ಅಂಶಗಳು
* ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ನಬಾರ್ಡ್ ಯೋಜನೆಯನ್ನು ಜಾರಿಗೆ ತಂದಿದ್ದು ಮೂರು ವರ್ಷಗಳ ಅವಧಿಗಾಗಿ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಮತ್ತು ಮೇಕೆ ಸಾಕಾಣಿಕೆ ಸೇರಿದಂತೆ ಇಂತಹ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ರೈತರಿಗೆ ಎರಡನೇ ಅವಧಿಯ ಸಾಲವನ್ನು ಇದರಲ್ಲಿ ನೀಡಲಾಗುತ್ತದೆ.
ಯುಗಾದಿ ಹಬ್ಬಕ್ಕೂ ಮುನ್ನವೇ ಚಿಕನ್ ಮಟನ್ ಬೆಲೆಯಲ್ಲಿ ಏರಿಕೆ! ಎಷ್ಟಾಗಿದೆ ಗೊತ್ತಾ ಬೆಲೆ
ಕೇವಲ ನಾಲ್ಕು ಪ್ರತಿಶತ ಬಡ್ಡಿ ದರದಲ್ಲಿ ನಿಮಗೆ ಈ ಯೋಜನೆ ಅಡಿಯಲ್ಲಿ ಸಾಲ ದೊರಕುತ್ತದೆ ಆದರೆ ಪ್ರತಿಯೊಂದು ಬ್ಯಾಂಕುಗಳಿಂದ ಇನ್ನೊಂದು ಬ್ಯಾಂಕಿಗೆ ಬಡ್ಡಿಯ ದರದಲ್ಲಿ ಹಾಗೂ ಸಾಲದ ಮೊತ್ತದಲ್ಲಿ ವ್ಯತ್ಯಾಸವನ್ನು ನೀವು ಕೆಲವೊಮ್ಮೆ ಕಾಣಬಹುದಾಗಿದೆ.
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ನಾಲ್ಕರಿಂದ ಐದು ವರ್ಷಗಳ ವರೆಗೆ 3 ಲಕ್ಷ ರೂಪಾಯಿಗಳ ಸಾಲಕ್ಕೆ 2 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
* ಹೆಚ್ ಡಿ ಎಫ್ ಸಿ (HDFC Bank) ಬ್ಯಾಂಕಿನಲ್ಲಿ ನಾಲ್ಕರಿಂದ ಐದು ವರ್ಷಗಳ ಅವಧಿಗೆ 3 ಲಕ್ಷ ರೂಪಾಯಿಗಳ ಸಾಲವನ್ನು 9 ಪ್ರತಿಶತ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
* ಆಕ್ಸಿಸ್ ಬ್ಯಾಂಕ್ ನಲ್ಲಿ 2.50 ಲಕ್ಷ ರೂಪಾಯಿಗಳ ಸಾಲವನ್ನು 5 ವರ್ಷಗಳ ಅವಧಿಗೆ 8.55 ಪ್ರತಿಶತ ಬಡ್ಡಿ ದರದಲ್ಲಿ ನಿಗದಿಪಡಿಸಲಾಗಿದೆ.
ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ ಈ ಹಸು; ತಿಂಗಳಿಗೆ ಗಳಿಸಬಹುದು 50,000 ಆದಾಯ!
ರೈತರಿಗೆ ಈ ರೀತಿಯ ಸಾಲ ಯೋಜನೆಗಳು (Loan Scheme) ಹಾಗೂ ಸರ್ಕಾರದಿಂದ ಸಿಗುವಂತಹ ಸಹಾಯಧನ ಸೇರಿದಂತೆ ಸಾಕಷ್ಟು ಮಾಹಿತಿಗಳ ಬಗ್ಗೆ ಅಷ್ಟೊಂದು ವಿಚಾರ ತಿಳಿದಿರುವುದಿಲ್ಲ. ಇಂತಹ ಮಾಹಿತಿಗಳನ್ನು ಅವರ ಜೊತೆಗೆ ಶೇರ್ ಮಾಡಿಕೊಳ್ಳುವ ಮೂಲಕ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಕ್ರಾಂತಿಕಾರಿ ಬದಲಾವಣೆಗಳನ್ನು ನಾವು ತರಬಹುದಾಗಿದೆ.
such farmers will get a benefit of 3 lakh by Kisan credit Card