ಬೀದಿ ಬದಿ ವ್ಯಾಪಾರ ಮಾಡೋರಿಗೆ ಸರ್ಕಾರವೇ ನೀಡುತ್ತೆ 50,000 ರೂಪಾಯಿ! ಬಂಪರ್ ಕೊಡುಗೆ
ಇಂದು ಲಕ್ಷಾಂತರ ಜನ ಬ್ಯಾಂಕ್ನಿಂದ ಸಾಲ (Bank Loan) ಪಡೆದು ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ.
Loan Scheme : ಕರೋನಾ ಸಮಯ, ದೇಶದ ಆರ್ಥಿಕತೆ ಕುಸಿದಿತ್ತು. ಆಗ ದೇಶದ ಆರ್ಥಿಕತೆಯನ್ನು ಸುಧಾರಿಸುವ ಸಲುವಾಗಿ ಮತ್ತು ದೇಶದಲ್ಲಿ ವಾಸಿಸುವ ಜನರ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಬಹಳ ಪ್ರಮುಖ ಯೋಜನೆಯ ಜಾರಿಗೆ ತಂದಿದೆ
ಈ ಮೂಲಕ ಇಂದು ಸಾಕಷ್ಟು ಜನ ತಮ್ಮ ಸ್ವಂತ ಉದ್ಯಮವನ್ನು ಮಾಡುತ್ತಾ ಉತ್ತಮ ಆದಾಯ ಕಂಡುಕೊಳ್ಳುವಂತೆ ಆಗಿದೆ. ಕೋವಿಡ್ 19 (covid-19) ಸಂದರ್ಭದಲ್ಲಿ ಬೀದಿಬದಿಯ ವ್ಯಾಪಾರಿಗಳು (Street vendors) ಹೆಚ್ಚು ಸಂಕಷ್ಟ ಅನುಭವಿಸಿದ್ದಾರೆ ಎನ್ನಬಹುದು.
ಆದರೆ ಆ ಕಾಲಘಟ್ಟದ ನಂತರ ಮತ್ತೆ ತಮ್ಮ ಉದ್ಯಮವನ್ನು ಉದ್ದಾರ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿತು. ಇದರಿಂದಾಗಿ ಇಂದು ಲಕ್ಷಾಂತರ ಜನ ಬ್ಯಾಂಕ್ನಿಂದ ಸಾಲ (Bank Loan) ಪಡೆದು ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ.
ರೈತರಿಗೆ ಸಿಗಲಿದೆ ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ! (Pm SVANidhi Yojana)
2020 ರಿಂದ ಆತ್ಮ ನಿರ್ಭರ ನಿಧಿ (PM SVANidhi) ಜಾರಿಗೆ ತರಲಾಗಿದೆ. ಈ ಮೂಲಕ ಬೀದಿ ಬದಿಯ ವ್ಯಾಪಾರಿಗಳಿಗೆ ಮೈಕ್ರೋ ಕ್ರೆಡಿಟ್ ಸಾಲವನ್ನು ನೀಡಲಾಗುತ್ತದೆ ಯಾವುದೇ ಅಡಮಾನವಿಲ್ಲದೆ 50,000 ವರೆಗೆ ಸಾಲ ಪಡೆಯಬಹುದಾಗಿದೆ.
ಯಾರಿಗೆ ಸಿಗಲಿದೆ ಹಣಕಾಸಿನ ನೆರವು?
ಬೀದಿ ಬದಿಯ ವ್ಯಾಪಾರಿಗಳಾದ ಹೂವು, ಹಣ್ಣು, ತರಕಾರಿ ಮಾರುವವರು, ಇಸ್ತ್ರಿ ಅಂಗಡಿ, ಚಮ್ಮಾರರು, ಕ್ಷೌರಿಕರು, ಪಾನ್ ಅಂಗಡಿ ಮೊದಲಾದವರು ಈ ಯೋಜನೆ ಅಡಿಯಲ್ಲಿ ಹಣಕಾಸಿನ ಸಹಾಯ ಪಡೆಯಬಹುದು. ಈ ಯೋಜನೆ ಇಂದು ಬಹುತೇಕ ಯಶಸ್ವಿಯಾಗಿದ್ದು 50 ಲಕ್ಷಕ್ಕಿಂತ ಹೆಚ್ಚಿನ ಜನ ಸಾಲ (Loan) ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? ಈ ರೀತಿ ಚೆಕ್ ಮಾಡಿಕೊಳ್ಳಿ
ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು
* ಆಧಾರ್ ಕಾರ್ಡ್
* ಅಡ್ರೆಸ್ ಪ್ರೂಫ್
* ವೋಟರ್ ಐಡಿ
* ರೇಷನ್ ಕಾರ್ಡ್
* ಬ್ಯಾಂಕ್ ಖಾತೆ ವಿವರ
* ಅರ್ಜಿದಾರನ ಭಾವಚಿತ್ರ
ಪ್ರಧಾನ ಮಂತ್ರಿ SVANidhi ಯೋಜನೆಯ ಸಾಲವನ್ನು ಯಾವುದೇ ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಸಂಸ್ಥೆಗಳು ಮೊದಲಾದವು ನೀಡುತ್ತವೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು 5500 ರೂಪಾಯಿ ಬಡ್ಡಿಯೇ ಸಿಗುತ್ತೆ!
ಅರ್ಜಿ ಸಲ್ಲಿಸುವುದು ಹೇಗೆ?
ಯೋಜನೆ ಅಡಿಯಲ್ಲಿ 10,000, 20,000 ಹಾಗೂ 50,000 ರೂಪಾಯಿಗಳ ಹಣಕಾಸು ನೆರವು ಪಡೆಯಬಹುದು. ಮೊದಲು ತೆಗೆದುಕೊಂಡ ಹಣವನ್ನು ಮರುಪಾವತಿ ಮಾಡಿದ ನಂತರವಷ್ಟೇ ಎರಡನೇ ಬಾರಿಗೆ ಸಾಲ ಪಡೆಯಬಹುದು.
ನೀವು ಯಾವುದೇ ಬ್ಯಾಂಕ್ಗೆ ಹೋಗಿ ನೇರವಾಗಿ ಅರ್ಜಿ ಸಲ್ಲಿಸಿ ಆ ಹಣಕಾಸಿನ ನೆರವು ಪಡೆಯಬಹುದು. ಅಥವಾ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು https://pmsvanidhi.mohua.gov.in/ ಈ ಅಧಿಕೃತ ವೆಬ್ಸೈಟ್ನಲ್ಲಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ.
The government will give 50,000 rupees to street vendors