ರೈತರಿಗೆ ಸಿಗಲಿದೆ ಕುರಿ, ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ

Story Highlights

ರೈತರ ಉದ್ದಾರಕ್ಕಾಗಿ ಅವರ ಉದ್ಯಮವನ್ನು ಬೆಳೆಸುವುದಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card scheme) ಯೋಜನೆಯನ್ನು ಜಾರಿಗೆ ತಂದಿದೆ

ಕೃಷಿ ಚಟುವಟಿಕೆ (Agriculture activities) ಯನ್ನು ಹೊರತುಪಡಿಸಿ ಅಂದರೆ ನಾಟಿ ಮಾಡುವುದನ್ನು ಹೊರತುಪಡಿಸಿ, ಕೆಲವು ಉಪಕಸುಬುಗಳನ್ನು ರೈತರು ಮಾಡುತ್ತಾರೆ ಇದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು ಕೃಷಿಯನ್ನು ಸಾಮಾನ್ಯವಾಗಿ ವಾರ್ಷಿಕ ಬೆಳೆಯಾಗಿರುತ್ತದೆ.

ಹಾಗಾಗಿ ವರ್ಷವಿಡೀ ಉಳಿದ ಸಮಯದಲ್ಲಿ ಮೆಚ್ಚಿಕೊಂಡಿದ್ದರೆ ಅದರಿಂದ ಹೆಚ್ಚು ಲಾಭ ಗಳಿಸಬಹುದು ಹೀಗಾಗಿ ಹೈನುಗಾರಿಕೆ, ಪಶು ಸಂಗೋಪನೆ, ಮೀನು ಸಾಕಾಣಿಕೆ, ಹಂದಿ ಸಾಕಾಣಿಕೆ ಮೊದಲಾದ ಉಪಕಸುಬುಗಳನ್ನು ರೈತರು ಮಾಡಿಕೊಂಡು ಬಂದಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? ಈ ರೀತಿ ಚೆಕ್ ಮಾಡಿಕೊಳ್ಳಿ

ಆದರೆ ಕೃಷಿ ಚಟುವಟಿಕೆ ಎನ್ನಕ್ಷಣ ಅದಕ್ಕೆ ಹಣಕಾಸಿನ ಅಗತ್ಯ ಇದ್ದೇ ಇರುತ್ತದೆ ಇದೀಗ ಸರ್ಕಾರ ರೈತರ ಉದ್ದಾರಕ್ಕಾಗಿ ಅವರ ಉದ್ಯಮವನ್ನು ಬೆಳೆಸುವುದಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card scheme) ಯೋಜನೆಯನ್ನು ಜಾರಿಗೆ ತಂದಿದೆ, ಈ ಒಂದು ಕಾರ್ಡ್ ಇರುವ ರೈತರು ಸರ್ಕಾರದಿಂದ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ! (Kisan credit card scheme)

ಅರ್ಹ ರೈತರು ಪಶುಸಂಗೋಪನೆ ಮೊದಲಾದ ಉಪಕಸುಬುಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಸೌಲಭ್ಯ (loan facility) ಪಡೆಯಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಹಾಗೂ ಪಶುಸಂಗೋಪನೆಗಾಗಿ ಸರ್ಕಾರದಿಂದ ಸಾಲ ಸೌಲಭ್ಯ ಪಡೆಯಬಹುದು. ಇದಕ್ಕೆ ನೀವು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ (Bank) ಅಥವಾ ಸಹಕಾರಿ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದಾಗಿದೆ.

ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂಪಾಯಿ! ನೀವೂ ಈ ರೀತಿ ಅರ್ಜಿ ಸಲ್ಲಿಸಿ

ಬಡ್ಡಿ ರಿಯಾಯಿತಿ!

ಕೇವಲ 2% ಬಡ್ಡಿ ದರದಲ್ಲಿ ನೀವು ಸಾಲ ಸೌಲಭ್ಯ (Loan) ಪಡೆಯಬಹುದು. ಅದರಲ್ಲೂ ಸಕಾಲಕ್ಕೆ ಸಾಲವನ್ನು ಹಿಂತಿರುಗಿಸಿದರೆ ಸಬ್ಸಿಡಿಯನ್ನು ಹೆಚ್ಚಿನ ಮೊತ್ತದಲ್ಲಿ ಕೊಡಲಾಗುವುದು.

Loan schemeಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ರೈತರ ಭೂಮಿಯ ಪತ್ರ ಅಥವಾ ಆರ್ ಟಿ ಸಿ
ಆಧಾರ್ ಕಾರ್ಡ್
ರೇಷನ್ ಕಾರ್ಡ್
ವೋಟರ್ ಐಡಿ
ಮೊಬೈಲ್ ಸಂಖ್ಯೆ
ಅಭ್ಯರ್ಥಿಯ ಭಾವಚಿತ್ರ
ಮೊದಲಾದ ದಾಖಲೆಗಳನ್ನು ಬ್ಯಾಂಕುಗಳಲ್ಲಿ ನೀಡಿ ಸಾಲ ಸೌಲಭ್ಯ ಪಡೆಯಬಹುದು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ! ಹೆಚ್ಚು ಬಡ್ಡಿ ನೀಡುವ ಹೊಸ ಯೋಜನೆ

ಯಾವ ಕೃಷಿ ಚಟುವಟಿಕೆಗೆ ಸಿಗುತ್ತೆ ಸಾಲ?

* ಆಕಳು ಸಾಕಾಣಿಕೆಗೆ 18 ರಿಂದ 36 ಸಾವಿರ ರೂಪಾಯಿ
* ಎಮ್ಮೆ ಸಾಕಾಣಿಕೆಗೆ 42,000
* ಕುರಿ ಸಾಕಾಣಿಕೆಗೆ 29,950
* ಮೇಕೆ ಸಾಕಾಣಿಕೆಗೆ 28,000 ಗಳಿಂದ 57000
* ಹಂದಿ ಸಾಕಾಣಿಕೆಗೆ 60,000
* ಕೋಳಿ ಸಾಕಾಣಿಕೆಗೆ 80,000
* ಮೊಲ ಸಾಕಾಣಿಕೆಗೆ 50,000

ಇವಿಷ್ಟು ಹಣವನ್ನು ನೀವು ಎಷ್ಟು ಪ್ರಾಣಿಗಳನ್ನು ಸಾಕುತ್ತೀರಿ ಹಾಗೂ ಯಾವ ರೀತಿಯ ಪ್ರಾಣಿಯನ್ನು ನಿರ್ವಹಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಸಾಲದ ಮೊತ್ತ ನಿಗದಿಯಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ರೈತ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ ಅಥವಾ ನೀವೇ ಖುದ್ದಾಗಿ ಭೇಟಿ ನೀಡಿ.

Farmers will get low interest loan facility for sheep and chicken farming

Related Stories