ಇನ್ಮುಂದೆ ಕರೆಂಟ್ ಬಿಲ್ ಕಟ್ಟಬೇಕು ಅನ್ನೋ ತಾಪತ್ರಯ ಇಲ್ಲ! ಬಂತು ಸ್ಮಾರ್ಟ್ ಮೀಟರ್ ಸೌಲಭ್ಯ

Story Highlights

ಸರ್ಕಾರ ಈಗ ಪ್ರತಿ ಮನೆಗೆ ಸ್ಮಾರ್ಟ್ ಮೀಟರ್ (Electricity Smart Meter) ಅಳವಡಿಸುವ ಪ್ಲಾನ್ ಮಾಡಿಕೊಂಡಿದೆ.

ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ನಮ್ಮ ರಾಜ್ಯದ ಜನರು ಉಚಿತವಾಗಿ ವಿದ್ಯುತ್ ಬಳಕೆ (Free Electricity) ಮಾಡಲಿ ಎಂದು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತು. ರಾಜ್ಯದ ಬಹಳಷ್ಟು ಜನರು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದರೂ ಸಹ, ಇನ್ನಷ್ಟು ಜನರು ಹೆಚ್ಚುವರಿ ವಿದ್ಯುತ್ ಬಳಸಿ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡುವ ಪರಿಸ್ಥಿತಿ ಎದುರಾಗಿದೆ.

ಪ್ರಸ್ತುತ ಬೆಲೆ ಏರಿಕೆ ಕೂಡ ಆಗುತ್ತಿರುವ ಕಾರಣ, ವಿದ್ಯುತ್ ಬಿಲ್ ಅನ್ನು ಕೂಡ ಕಟ್ಟುವುದು ಜನರಿಗೆ ಹೊರೆಯಾದಂತೆ ಆಗಿದೆ.

ಉಚಿತ ಗ್ಯಾಸ್ ಕನೆಕ್ಷನ್ ಜೊತೆಗೆ ಇನ್ನೂ ಮುಂದಿನ 9 ತಿಂಗಳ ಕಾಲ ಸಿಗಲಿದೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ

ಬೆಲೆ ಏರಿಕೆಗಳ ನಡುವೆ ವಿದ್ಯುತ್ ಬೆಲೆ ಕೂಡ ಜಾಸ್ತಿ ಆಗಿರುವ ಕಾರಣ, ಜನರು ವಿದ್ಯುತ್ ಬಿಲ್ ಕಟ್ಟುವುದಕ್ಕೆ ಪರದಾಡುವ ಹಾಗೆ ಆಗಿದೆ ಎಂದರೂ ತಪ್ಪಲ್ಲ. ಹೆಚ್ಚುವರಿ ವಿದ್ಯುತ್ ಬಳಕೆ ಮಾಡುವುದಕ್ಕೂ ಆಗುತ್ತಿಲ್ಲ ಎಂದು ಕೆಲವರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಕಾರಣಕ್ಕೆ ಸರ್ಕಾರ ಈಗ ಜನರ ಹೊರೆಯನ್ನು ಕಡಿಮೆ ಮಾಡುವುದಕ್ಕೆ ಒಂದು ಸ್ಮಾರ್ಟ್ ಐಡಿಯಾ ಮಾಡಿದೆ. ಇದರಿಂದ ನೀವು ವಿದ್ಯುತ್ ಬಿಲ್ ಕಟ್ಟುವುದೇ ಬೇಡ…

ಶೀಘ್ರದಲ್ಲೇ ಬರಲಿದೆ ಸ್ಮಾರ್ಟ್ ಮೀಟರ್:

ಇಷ್ಟು ವರ್ಷ ಹೇಗಿತ್ತು ಎಂದರೆ, ಇಡೀ ತಿಂಗಳು ನೀವು ವಿದ್ಯುತ್ ಬಳಕೆ ಮಾಡಿ, ಎಷ್ಟು ವಿದ್ಯುತ್ ಬಳಕೆ ಮಾಡಿದ್ದೀರೋ ಅಷ್ಟು ಹಣ ಪಾವತಿ ಮಾಡಬೇಕಿತ್ತು. ಗೃಹಜ್ಯೋತಿ ಯೋಜನೆ ಬಂದ ಬಳಿಕ ಉಚಿತ ವಿದ್ಯುತ್ ಲಿಮಿಟ್ ಮೀರಿ ಬಳಕೆ ಮಾಡಿದರೆ, ಆಗ ಬಿಲ್ ಪಾವತಿ ಮಾಡಬೇಕಿತ್ತು. ಜನರಿಗೆ ಈ ತೊಂದರೆಯೇ ಬೇಡ ಎಂದು ಸರ್ಕಾರ ಈಗ ಪ್ರತಿ ಮನೆಗೆ ಸ್ಮಾರ್ಟ್ ಮೀಟರ್ (Electricity Smart Meter) ಅಳವಡಿಸುವ ಪ್ಲಾನ್ ಮಾಡಿಕೊಂಡಿದೆ.

ಮಹಿಳೆಯರಿಗೆ ಸಿಗಲಿದೆ ₹60,000 ರೂಪಾಯಿ! ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು

Electricity Smart meterಭಾರತದ ಎಲ್ಲೆಡೆ ಮನೆಗಳಲ್ಲಿ ಈಗಿರುವ ವಿದ್ಯುತ್ ಮೀಟರ್ ಗಳ ಬದಲಾಗಿ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಲಾಗುತ್ತದೆ. ಈ ಸ್ಮಾರ್ಟ್ ಮೀಟರ್ ಗಳ ವಿಶೇಷತೆ ಏನು ಎಂದರೆ, ಇದರಲ್ಲಿ ನೀವು ಫೋನ್ ರೀಚಾರ್ಜ್ ಮಾಡುವ ಹಾಗೆ, ವಿದ್ಯುತ್ ಅನ್ನು ರೀಚಾರ್ಜ್ ಮಾಡಿಕೊಳ್ಳಬಹುದು.

ನೀವು ರೀಚಾರ್ಜ್ ಮಾಡಿರುವಷ್ಟು ವಿದ್ಯುತ್ ಬಳಕೆ ಮಾಡಬಹುದು. ರೀಚಾರ್ಜ್ ಖಾಲಿ ಆದ ನಂತರ ಮತ್ತೆ ವಿದ್ಯುತ್ ಬಳಸಲು ಇನ್ನೊಮ್ಮೆ ರೀಚಾರ್ಜ್ ಮಾಡಬೇಕಾಗುತ್ತದೆ.
ಈ ರೀತಿಯ ಮೀಟರ್ ಅಳವಡಿಕೆ ಮಾಡುವುದಾಗಿ ಇಂಧನ ಇಲಾಖೆ ಇಂದ ಮಾಹಿತಿ ಸಿಕ್ಕಿದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್! ಬಂಪರ್ ಕೊಡುಗೆ

ಕೊನೆಯಾಗಲಿದೆ ವಿದ್ಯುತ್ ಸಮಸ್ಯೆ:

ನಿಮ್ಮ ಮನೆಗೆ ಅಳವಡಿಸುವ ಈ ಹೊಸ ಸ್ಮಾರ್ಟ್ ಮೀಟರ್ ಗೆ ಒಂದು ಸಿಮ್ ಕಾರ್ಡ್ ಅನ್ನು ಕೂಡ ಅಳವಡಿಸಲಾಗುತ್ತದೆ. ಅದರ ಮೂಲಕ ಕಡಿಮೆ ವಿದ್ಯುತ್ ಬಳಕೆ ಆಗುವುದಕ್ಕೆ ಮತ್ತು ಬ್ಯಾಲೆನ್ಸ್ಡ್ ಆಗಿ ವಿದ್ಯುತ್ ಬಳಕೆ ಆಗುವುದಕ್ಕೆ ಸಹಾಯ ಆಗುತ್ತದೆ.

ಜೊತೆಗೆ ಏನಾದರೂ ಸಮಸ್ಯೆ ಉಂಟಾದರೆ, ನಿಮ್ಮ ಮೊಬೈಲ್ ಗೆ ಎಲ್ಲಾ ಮಾಹಿತಿ ಬರುತ್ತದೆ. ಈ ರೀತಿಯ ಸೌಲಭ್ಯದಿಂದ ಹಳ್ಳಿ ಮತ್ತು ಸಿಟಿ ಎರಡು ಕಡೆ ವಿದ್ಯುತ್ ಮೀಟರ್ ಸಮಸ್ಯೆ ಕಡಿಮೆ ಆಗುತ್ತದೆ.

ಈ ಒಂದು ಸ್ಮಾರ್ಟ್ ಮೀಟರ್ ಅನ್ನು ಮನೆಗೆ ಹಾಕಿಸಿಕೊಂಡರೆ, ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಬರುವುದಿಲ್ಲ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ರೀಚಾರ್ಜ್ ಮಾಡಿಕೊಳ್ಳಬಹುದು. ರೀಚಾರ್ಜ್ ಖಾಲಿ ಆದಾಗ ನಿಮ್ಮ ಫೋನ್ ಗೆ ಮೆಸೇಜ್ ಬರುತ್ತದೆ. ಆಗ ನೀವು ಮತ್ತೊಮ್ಮೆ ರೀಚಾರ್ಜ್ ಮಾಡಿಕೊಳ್ಳಬಹುದು. ಈ ರೀತಿಯಾಗಿ ಪ್ರೀಪೇಯ್ಡ್ ಆಗಿ ವಿದ್ಯುತ್ ಬಳಕೆ ಮಾಡಬಹುದು.

ಸ್ಟೇಟ್ ಬ್ಯಾಂಕ್ ನಲ್ಲಿ 80 ಸಾವಿರ ರೂಪಾಯಿ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

There is no need to pay the Electricity bill anymore, Smart meter facility has come

Related Stories