ಬ್ಯಾಂಕ್ ಗಿಂತ ಹೆಚ್ಚು ಲಾಭ ಕೊಡುವ ಪೋಸ್ಟ್ ಆಫೀಸ್ ಯೋಜನೆಗಳು ಇವು! ಬಂಪರ್ ಕೊಡುಗೆ

ಲಾಭ ಕೊಡೋ ವಿಚಾರದಲ್ಲಿ ಪೋಸ್ಟ್ ಆಫೀಸ್ನ ಈ ಯೋಜನೆಗಳ ಮುಂದೆ ಬ್ಯಾಂಕ್ ಕೂಡ ಫೇಲ್!

Bengaluru, Karnataka, India
Edited By: Satish Raj Goravigere

ಒಂದು ಕಾಲದಲ್ಲಿ ಜನರು ಹಣವನ್ನ ಉಳಿತಾಯ ಮಾಡ್ತಾ ಇದ್ರು‌. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಬುದ್ಧಿವಂತರಾಗಿದ್ದು ಹಣವನ್ನು ಉಳಿತಾಯ ಮಾಡಿದರೆ ಅದು ಹೆಚ್ಚಾಗುವುದಿಲ್ಲ ಬದಲಾಗಿ ಅದನ್ನ ಹೂಡಿಕೆ ಮಾಡಿದರೆ ಮಾತ್ರ ಆ ಹಣವನ್ನು ಇನ್ನಷ್ಟು ಹೆಚ್ಚು ಮಾಡಬಹುದು ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿದೆ.

ಇನ್ನು ಬ್ಯಾಂಕ್ ಗಿಂತ ಹೆಚ್ಚಾಗಿ ಪೋಸ್ಟ್ ಆಫೀಸ್ನಲ್ಲಿ(post office) ಇರುವಂತಹ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಸುರಕ್ಷಿತ ಹಾಗೂ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ ಎನ್ನುವಂತಹ ರಹಸ್ಯವನ್ನು ಕೂಡ ಗ್ರಾಹಕರು ಈಗಾಗಲೇ ಅರಿತುಕೊಂಡಿದ್ದಾರೆ.

you will get 16 lakhs In this post office Savings scheme

ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗುತ್ತೆ 1200 ರೂಪಾಯಿ! ಅರ್ಜಿ ಸಲ್ಲಿಸಿ

ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್

ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ ನಲ್ಲಿ ರಾಷ್ಟ್ರೀಯ ಉಳಿತಾಯ ಯೋಜನೆಯನ್ನು ನೀವು ಮಾಡಿದರೆ ಖಂಡಿತವಾಗಿ ಉತ್ತಮ ರೀತಿಯಲ್ಲಿ ರಿಟರ್ನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವರ್ಷದ ಹೂಡಿಕೆ ಮೇಲೆ 6.9 ಪ್ರತಿಶತ ಹಣವನ್ನು ನೀವು ಯೋಜನೆಯಲ್ಲಿ ಪಡೆದುಕೊಳ್ಳಬಹುದು.

ಎರಡು ವರ್ಷಕ್ಕೆ ಏಳು ಪ್ರತಿಶತ ಹಾಗೂ ಐದು ವರ್ಷಕ್ಕೆ 7.5% ಬಡ್ಡಿದರವನ್ನು ನೀವು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದು. ಇನ್ನು ಮತ್ತೊಂದು ಯೋಜನೆ ಬಗ್ಗೆ ಮಾತನಾಡುವುದಾದರೆ 6.5% ಬಡ್ಡಿದರವನ್ನು ನೀಡುವ ರಿಕರಿಂಗ್ ಡೆಪಾಸಿಟ್ ನಲ್ಲಿ ಕೂಡ ನೀವು ಹಣವನ್ನು ಹೂಡಿಕೆ ಮಾಡಬಹುದಾಗಿದೆ. ನೀವು ಇಡುವಂತಹ ಹಣ 12 ವರ್ಷ ನಾಲ್ಕು ತಿಂಗಳಲ್ಲಿ ದುಪ್ಪಟ್ಟಾಗುತ್ತದೆ.

ಉಚಿತ ಮನೆ ಯೋಜನೆ ಫಲಾನುಭವಿಗಳ ಪಟ್ಟಿ ಬಿಡುಗಡೆ! ನೀವಿನ್ನೂ ಅರ್ಜಿ ಸಲ್ಲಿಸಿಲ್ವಾ?

Post Office Schemeಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್(post office senior citizen saving scheme)

60 ವರ್ಷದ ವಯಸ್ಸಿನ ಮೇಲೆ ಇರುವಂತಹ ವೃದ್ಧರು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಹಣವನ್ನು ಇಲ್ಲಿ ಹೂಡಿಕೆ ಮಾಡುವುದರಿಂದಾಗಿ 8.2 ಪ್ರತಿಶತ ಬಡ್ಡಿದರ ಸಿಗುತ್ತದೆ. ಇನ್ನು 7.4% ಬಡ್ಡಿದರ ಇಲ್ಲಿ ಮಾಡುವಂತಹ ಠೇವಣಿ ಹಣದ ಮೇಲೆ ನಿಮಗೆ ಸಿಗುತ್ತೆ. ಮಾಡುವಂತಹ ಪಿಪಿಎಫ್ ಯೋಜನೆಯಲ್ಲಿ ನೀವು 7.1% ಬಡ್ಡಿದರವನ್ನು ನಿಮಗೆ ಹೂಡಿಕೆ ಮೇಲೆ ನೀಡುತ್ತದೆ.

ಕುರಿ, ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!

ಸುಕನ್ಯಾ ಸಮೃದ್ಧಿ ಯೋಜನೆ -ಹಾಗೂ ಇನ್ನಿತರ ಯೋಜನೆಗಳು

10 ವರ್ಷಕ್ಕಿಂತ ಕಡಿಮೆ ಇರುವಂತಹ ಹೆಣ್ಣು ಮಕ್ಕಳ ಹೆಸರಿನಲ್ಲಿ ತಂದೆ ತಾಯಿಯರು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಯನ್ನು ನಿರ್ಮಾಣ ಮಾಡಬಹುದು. ಇಲ್ಲಿ ನೀವು ಮಾಡುವಂತ ಹೂಡಿಕೆ ಮೇಲೆ ಎಂಟು ಪ್ರತಿಶತ ರಿಟರ್ನ್ ಬಡ್ಡಿ ರೂಪದಲ್ಲಿ ನೀಡುತ್ತದೆ.

ಮಹಿಳಾ ಸಮಾಜ ಯೋಜನೆ ಅಡಿಯಲ್ಲಿ ಮಾಡುವಂತಹ ಹೂಡಿಕೆ ಮೇಲೆ 7.5% ವಾರ್ಷಿಕ ರಿಟರ್ನ್ ಇದೆ. ಇನ್ನು ಕಿಸಾನ್ ವಿಕಾಸ್ ಪತ್ರ ಯೋಜನೆಯ ಅಡಿಯಲ್ಲಿ ನೀವು ವರ್ಷಕ್ಕೆ ಒಮ್ಮೆ ಹೂಡಿಕೆ ಮಾಡುವ ಮೂಲಕ 7.5% ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಎಲ್ಲ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡುವ ಮೂಲಕ ಉತ್ತಮ ರಿಟರ್ನ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಕೆನರಾ ಬ್ಯಾಂಕ್ ಅಕೌಂಟ್ ಇದ್ರೆ ಬಂಪರ್ ಅವಕಾಶ! ಇದು ನಿಮ್ಮ ಹಣ ಡಬಲ್ ಮಾಡೋ ಸ್ಕೀಮ್

These are post office schemes which are more profitable than bank