ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗುತ್ತೆ 1200 ರೂಪಾಯಿ! ಅರ್ಜಿ ಸಲ್ಲಿಸಿ
ರಾಜ್ಯ ಸರ್ಕಾರ, ಎಲ್ಲಾ ವರ್ಗದ ಸಾರ್ವಜನಿಕರಿಗೂ ಕೂಡ ಆರ್ಥಿಕ ನೆರವು ನೀಡುವ ಸಲುವಾಗಿ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ, ವರ್ಗದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಪ್ರತಿ ತಿಂಗಳು ಮಾಸಾಶನ ಕೂಡ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ಈ ಒಂದು ಮಾಸಾಶನದಿಂದ ಸಾಕಷ್ಟು ಜನ ಇಂದು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆ!
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಈ ಯೋಜನೆಯನ್ನು 2007ರಲ್ಲಿ ಜಾರಿಗೆ ತರಲಾಗಿದೆ. ಅಂದಿನಿಂದ ಇಂದಿನವರೆಗೆ ಪ್ರತಿ ಬಜೆಟ್ ನಲ್ಲಿ ಸಂಧ್ಯಾ ಸುರಕ್ಷಾ ಯೋಜನೆಗಾಗಿ ಒಂದಷ್ಟು ಹಣವನ್ನು ಸರ್ಕಾರ ಮೀಸಲಿಡುತ್ತದೆ.
ಈ ಯೋಜನೆಯ ಅಡಿಯಲ್ಲಿ 1200ಗಳನ್ನು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಪಡೆದುಕೊಳ್ಳಬಹುದು. ಯಾರಿಗೆಲ್ಲ ಈ ಯೋಜನೆಯ ಪ್ರಯೋಜನ ಸಿಗಲಿದೆ ಅರ್ಹತೆಗಳು ಏನು ಎಂಬುದನ್ನು ನೋಡೋಣ.
ಉಚಿತ ಮನೆ ಯೋಜನೆ ಫಲಾನುಭವಿಗಳ ಪಟ್ಟಿ ಬಿಡುಗಡೆ! ನೀವಿನ್ನೂ ಅರ್ಜಿ ಸಲ್ಲಿಸಿಲ್ವಾ?
ಯಾರು ಅರ್ಜಿ ಸಲ್ಲಿಸಬಹುದು?
* ಸಣ್ಣ ರೈತರು
* ಅತಿ ಸಣ್ಣ ರೈತರು
* ಮೀನುಗಾರರು
* ಕೃಷಿಕರು
* ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು (ಈಗಾಗಲೇ ಬೇರೆ ಪಿಂಚಣಿ ಪಡೆದುಕೊಳ್ಳುತ್ತಿದ್ದರೆ ಮಾಸಾಶನ ಸಿಗುವುದಿಲ್ಲ)
ಕುರಿ, ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!
ಇಂಥವರಿಗೆ ಮಾತ್ರ ಸಿಗುತ್ತೆ ಸಂಧ್ಯಾ ಸುರಕ್ಷ ಯೋಜನೆಯ ಹಣ
* ಗಂಡ ಹೆಂಡತಿ ಇಬ್ಬರ ವಾರ್ಷಿಕ ಆದಾಯ ಸಂಯೋಜಿತವಾಗಿ 32,000 ಮೀರುವಂತಿಲ್ಲ
* ಗಂಡ ಹೆಂಡತಿ ಸಂಯೋಜಿತ ಬ್ಯಾಂಕ್ ಖಾತೆಯಲ್ಲಿ (Bank Account) 10,000 ಕ್ಕಿಂತ ಹೆಚ್ಚಿನ ಎಫ್ ಡಿ (Fixed Deposit) ಇರುವಂತಿಲ್ಲ.
* ಈಗಾಗಲೇ ಯಾವುದೇ ರೂಪದಲ್ಲಿ ಪಿಂಚಣಿ ಪಡೆದುಕೊಳ್ಳುತ್ತಿದ್ದರೆ ಅಂತವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
* ಕುಟುಂಬದಲ್ಲಿ ಗಂಡು ಮಕ್ಕಳು ಇದ್ದು ಅವರು ಪೋಷಕರನ್ನು ನೋಡಿಕೊಳ್ಳುತ್ತಿದ್ದರು ಕೂಡ ಹಿರಿಯ ನಾಗರಿಕರು ಅರ್ಜಿ ಸಲ್ಲಿಸಬಹುದು.
ಕೆನರಾ ಬ್ಯಾಂಕ್ ಅಕೌಂಟ್ ಇದ್ರೆ ಬಂಪರ್ ಅವಕಾಶ! ಇದು ನಿಮ್ಮ ಹಣ ಡಬಲ್ ಮಾಡೋ ಸ್ಕೀಮ್
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
* ವಯಸ್ಸಿನ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಬ್ಯಾಂಕ್ ಖಾತೆಯ ವಿವರ
* ರೇಷನ್ ಕಾರ್ಡ್
* ಆಧಾರ್ ಕಾರ್ಡ್
* ಡ್ರೈವಿಂಗ್ ಲೈಸೆನ್ಸ್ ನಂತಹ ಅಡ್ರೆಸ್ ಪ್ರೂಫ್.
ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ 90% ಸಬ್ಸಿಡಿ ಸಿಗಲಿದೆ, ಅರ್ಜಿ ಸಲ್ಲಿಸಿ!
ಅರ್ಜಿ ಸಲ್ಲಿಸುವುದು ಹೇಗೆ?
ಯಾವುದೇ ಗ್ರಾಮ ಒನ್, ಬಾಪೂಜಿ ಕೇಂದ್ರ, ತಶಿಲ್ದಾರರ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಪ್ರತಿ ತಿಂಗಳು 1200 ರೂಪಾಯಿಗಳನ್ನು ನಿಮ್ಮ ಖಾತೆಗೆ ಡಿ ಬಿ ಟಿ ಮಾಡಲಾಗುವುದು.
Under this scheme you will get 1200 rupees every month
Our Whatsapp Channel is Live Now 👇