ಈ ಟಿಪ್ಸ್ ಫಾಲೋ ಮಾಡಿ! ಬೇಸಿಗೆಯಲ್ಲೂ ಹಸು ಹೆಚ್ಚು ಹಾಲು ಕೊಡುವಂತೆ ಮಾಡಬಹುದು
ಬೇಸಿಗೆಯಲ್ಲಿ ಹಸು ಹೆಚ್ಚು ಹಾಲು ಕೊಡುವಂತೆ ಮಾಡಲು ಏನು ಮಾಡಬೇಕು? ಈ ಟಿಪ್ಸ್ ನಿಂದ ಹಸು ಹೆಚ್ಚು ಹಾಲು ಕೊಡುತ್ತೆ!
ಬೇಸಿಗೆ ಎಂದರೆ ಬಹಳಷ್ಟು ಮಂದಿಗೆ ಇಷ್ಟ ಇರುವುದಿಲ್ಲ. ಬಿಸಿಲಿನ ಬೇಗೆಗೆ ದಣಿದು ಸಾಕಪ್ಪ ಈ ಬೇಸಿಗೆಗಾಲ ಎಂದು ಹೇಳುವವರೇ ಹೆಚ್ಚು. ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ಕೂಡ ಬೇಸಿಗೆಕಾಲ ಎಂದರೆ ಕಷ್ಟದ ಅವಧಿ ಆಗಿದೆ.
ಸರಿಯಾಗಿ ನೀರು (Water) ಸಿಗದೇ ಇರುವ ಸ್ಥಳಗಳಲ್ಲಿ ಇರುವ ಜಾನುವಾರುಗಳ ಪರಿಸ್ಥಿತಿಯಂತೂ ಹೇಳತೀರದು. ತಮ್ಮ ವೇದನೆಗಳನ್ನು ಅಥವಾ ಕಷ್ಟವನ್ನು ಹೇಳಲು ಸಾಧ್ಯವಿಲ್ಲದ ಮೂಕ ಪ್ರಾಣಿಗಳ ವೇದನೆ ಇನ್ನು ತಳಮಳಕಾರಿ.
ಬೇಸಿಗೆ ಕಾಲದಲ್ಲಿ ಹಸುಗಳು ಕೊಡುವ ಹಾಲಿನ ಮಟ್ಟವು ಕೂಡ ಕಡಿಮೆಯಾಗಿರುತ್ತದೆ ಎನ್ನುವುದು ನಿಮಗೆ ಗೊತ್ತೇ? ನೀರಿನ ಅಂಶ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹಸುಗಳು ನೀಡುವ ಹಾಲಿನ ಮಟ್ಟವು (Milk) ಕೂಡ ಕಡಿಮೆ ಇರುತ್ತದೆ, ಚಳಿಗಾಲ ಮತ್ತು ಮಳೆಗಾಲಕ್ಕೆ ಹೋಲಿಸಿದಲ್ಲಿ ಬೇಸಿಗೆಯಲ್ಲಿ ಹಸುಗಳು ಬಹಳ ಕಡಿಮೆ ಹಾಲನ್ನು ನೀಡುತ್ತವೆ.
ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್! ಸರಕಾರದಿಂದ ಸಿಗುತ್ತೆ 15,000 ಸ್ಕಾಲರ್ಶಿಪ್
ಆದರೆ ಹಸುಗಳಿಗೆ ಸರಿಯಾಗಿ ನೀರು ನೀಡುವುದರ ಮೂಲಕ ಅದೇ ರೀತಿ ಕೆಲವು ಆಹಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹಸು (Cow) ನೀಡುವ ಹಾಲು ಕಡಿಮೆಯಾಗದಂತೆ ನಾವು ನೋಡಿಕೊಳ್ಳಬಹುದು. ಇದರ ಮೂಲಕ ಹಾಲನ್ನು ಮಾರಾಟ ಮಾಡಿ ಜೀವನ ನಡೆಸುತ್ತಿರುವವರಿಗೆ ಬೇಸಿಗೆಕಾಲದಲ್ಲಿ ಕೂಡ ಯಾವುದೇ ರೀತಿಯ ನಷ್ಟ ಆಗೋದಿಲ್ಲ.
ಹಾಗಾದರೆ ಯಾವ ರೀತಿ ಆಹಾರ ನೀಡಿದಾಗ ಹಸುಗಳಿಗೆ ಹಾಲು ಅದೇ ಪ್ರಮಾಣದಲ್ಲಿ ಇರುತ್ತದೆ ಎಂದು ನೋಡೋಣ.
ಬಿಹಾರದ ಪಶ್ಚಿಮ ಚಂಪಾರನ್ ನ ರೈತರು ಬೇಸಿಗೆಯಲ್ಲಿ ಕೂಡ ತಮ್ಮ ಹಸುಗಳು ಮೊದಲಿನಂತೆಯೇ ಹಾಲು ನೀಡುವಂತೆ ನೋಡಿಕೊಳ್ಳುತ್ತಾರೆ. ಇದರಲ್ಲಿ ಮುಖ್ಯವಾದ ಪಾತ್ರ ವಹಿಸುವುದು ಲೋಭಿಯಾ ಎನ್ನುವ ಹುಲ್ಲು, ಇದನ್ನು ಹಸುಗಳಿಗೆ ನೀಡುತ್ತಾ ಇದ್ದರೆ ಹಸುಗಳ ಹಾಲಿನ ಮಟ್ಟದಲ್ಲಿ ಬದಲಾವಣೆ ಆಗುವುದಿಲ್ಲ.
ರೈತರಿಗೆ ಸರ್ಕಾರದಿಂದ ಸಿಗುತ್ತೆ 25,000 ಸಹಾಯಧನ! ಪಡೆದುಕೊಳ್ಳುವುದಕ್ಕೆ ಹೀಗೆ ಮಾಡಿ
ಈ ಹುಲ್ಲು ಔಷಧೀಯ ಗುಣಗಳನ್ನು ಹೊಂದಿದ್ದು ಹಸುಗಳಿಗೆ ಯಾವುದೇ ರೀತಿಯ ದುಷ್ಪರಿಣಾಮವನ್ನು ಬೀರುವುದಿಲ್ಲ. ಬಹಳ ಕಡಿಮೆ ಅವಧಿಯಲ್ಲಿ ಈ ಹುಲ್ಲು ಹಾಲನ್ನು ಗುಣಮಟ್ಟದ ಜೊತೆಗೆ ಹೆಚ್ಚಿಸುತ್ತದೆ ಇದರಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಗಳು ಯಾವುದೇ ರೀತಿಯಲ್ಲಿ ಹಸುವಿಗೆ ಬಾಧಕ ಅಲ್ಲ ಇದು ಸುರಕ್ಷಿತವಾದ ಒಂದು ಆಹಾರವಾಗಿದೆ.
ಇದರ ಜೊತೆಗೆ ಔಷಧಿ ಕೂಡ ತಯಾರು ಮಾಡಬಹುದು. 250 ಗ್ರಾಂ ಗೋಧಿ ಗಂಜಿ, 100 ಗ್ರಾಂ ಬೆಲ್ಲದ ಪಾಕ, 50 ಗ್ರಾಂ ಮೆಂತ್ಯ ಬೀಜಗಳು, ಒಂದು ಹಸಿ ತೆಂಗಿನಕಾಯಿ, ತಲಾ 25 ಗ್ರಾಂ ಅಜ್ವಾಲ್ ಮತ್ತು ಜೀರಿಗೆ ಬೇಕಾಗುತ್ತದೆ.
ಎಲ್ಲಾ ಮಹಿಳೆಯರಿಗೂ ಸಿಗುತ್ತೆ ಉಚಿತ ಟೂಲ್ ಕಿಟ್ ಜೊತೆಗೆ 15,000 ರೂಪಾಯಿ! ಅರ್ಜಿ ಸಲ್ಲಿಸಿ
ಔಷಧಿ ತಯಾರಿಸಲು, ಮೊದಲು ಗಂಜಿ, ಮೆಂತ್ಯ ಮತ್ತು ಬೆಲ್ಲವನ್ನು ಬೇಯಿಸಿ. ನಂತರ ತುರಿದ ತೆಂಗಿನಕಾಯಿಯನ್ನು ಸೇರಿಸಬೇಕು. ತಣ್ಣಗಾದ ನಂತರ ಪ್ರಾಣಿಗಳಿಗೆ ತಿನ್ನಿಸಿ. ಇದೇ ರೀತಿ 2 ತಿಂಗಳ ಕಾಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀಡಬೇಕು.
25-25 ಗ್ರಾಂ ಅಜ್ವಲ್ ಮತ್ತು ಜೀರಿಗೆಯನ್ನು ಕರು ಹಾಕಿದ 3 ದಿನಗಳ ನಂತರ ಮಾತ್ರ ನೀಡಬೇಕು. ಹಸುವಿಗೆ 21 ದಿನಗಳವರೆಗೆ ಸಾಮಾನ್ಯ ಆಹಾರವನ್ನು ನೀಡಬೇಕು. ಹಸುವಿಗೆ 3 ತಿಂಗಳಿರುವಾಗ ಅಥವಾ ಹಸುವಿನ ಹಾಲು ಕಡಿಮೆಯಾದಾಗ, ಪ್ರತಿದಿನ 30 ಗ್ರಾಂ ಜಾವಾಸ್ ಔಷಧಿಯನ್ನು ನೀಡುವುದರಿಂದ ಹಾಲು ಕಡಿಮೆಯಾಗುವುದಿಲ್ಲ.
ಮಹಿಳೆಯರೇ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬೇಕು ಅಂದ್ರೆ ಈ ದಾಖಲೆ ಕಡ್ಡಾಯ!
These tips can make the cow give more milk even in summer