ಈ ಬ್ಯಾಂಕ್ ನಿಮ್ಮ ಫಿಕ್ಸೆಡ್ ಹಣಕ್ಕೆ 9.10% ಬಡ್ಡಿ ಕೊಡುತ್ತೆ! ಯಾರಿಗೂ ಗೊತ್ತಿಲ್ಲ
ಹೆಚ್ಚಿದ ಬಡ್ಡಿದರಗಳ ನಡುವೆಯೂ, ಬಹುತೇಕ ಬ್ಯಾಂಕುಗಳು ಬಡ್ಡಿಯನ್ನು ಕಡಿಮೆ ಮಾಡುತ್ತಿದ್ದಾಗ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮಾತ್ರ FD ಮೇಲೆ ಬಡ್ಡಿದರವನ್ನು ಹೆಚ್ಚಿಸಿದೆ!

ಆರ್‌ಬಿಐ (RBI) ಎರಡು ಬಾರಿ ರೆಪೋ ರೇಟ್ ಕಡಿತ ಮಾಡಿದ ಬಳಿಕ ಬಹುತೇಕ ಬ್ಯಾಂಕುಗಳು ತಕ್ಷಣವೇ ಎಫ್‌ಡಿಗಳ (FD interest rates) ಬಡ್ಡಿದರವನ್ನು ಕಡಿತಗೊಳಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಎಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI) ಸೇರಿ ಪ್ರಮುಖ ಖಾತೆದಾರರ ಬ್ಯಾಂಕುಗಳು ಬಡ್ಡಿದರ ಇಳಿಕೆಯೊಂದಿಗೆ ಸಾಗಿವೆ.
ಇಂತಹ ಸಂದರ್ಭದಲ್ಲಿಯೇ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Suryoday Small Finance Bank) ಮಾತ್ರ ವಿರುದ್ಧದ ದಿಕ್ಕಿನಲ್ಲಿ ಸಾಗುತ್ತಿದೆ. ಇತ್ತೀಚೆಗಷ್ಟೇ ಈ ಬ್ಯಾಂಕ್ ತನ್ನ ಎಫ್‌ಡಿ ಮೇಲಿನ ಬಡ್ಡಿದರವನ್ನು 41 ಬೆಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿರುವುದಾಗಿ ಪ್ರಕಟಿಸಿದೆ.
ಈ ಬದಲಾವಣೆಯೊಂದಿಗೆ, ಸಾಮಾನ್ಯ ಗ್ರಾಹಕರಿಗೆ ಈಗ 4% ರಿಂದ 8.60% ವರೆಗೆ ಬಡ್ಡಿ ಲಭಿಸುತ್ತಿದೆ. ಇದೇ ಸಮಯದಲ್ಲಿ, ಹಿರಿಯ ನಾಗರಿಕರಿಗೆ (Senior Citizens) 5 ವರ್ಷದ ಫಿಕ್ಸ್‌ಡ್ ಡಿಪಾಸಿಟ್‌ಗಳ (Fixed Deposit) ಮೇಲೆ ಗರಿಷ್ಠ 9.10% ಬಡ್ಡಿದರ ಲಭಿಸುತ್ತಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಇದು ಭದ್ರತೆ (safe investment) ಮತ್ತು ಲಾಭದಾಯಕತೆ (high returns) ನಡುವೆ ಸರಿಯಾದ ಸಮತೋಲನವನ್ನು ಹುಡುಕುತ್ತಿರುವ ಉಳಿತಾಯದವರಿಗೆ ಉತ್ತಮ ಅವಕಾಶವಾಗಿದೆ. ಕಡಿಮೆ ಬಡ್ಡಿದರದ ಪರಿಸ್ಥಿತಿಯಲ್ಲಿ FD ಮೇಲೆ 9.1% ಬಡ್ಡಿ ನೀಡುವಂತಹ ಬ್ಯಾಂಕುಗಳ ಸಂಖ್ಯೆ ತುಂಬಾ ಕಡಿಮೆ.
ಅಲ್ಲದೆ, ಶಿವಾಲಿಕ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಂತಹ ಇತರ ಸಣ್ಣ ಬ್ಯಾಂಕುಗಳೂ ಸಹ ಬಡ್ಡಿದರವನ್ನು ಇತ್ತೀಚೆಗೆ ಕಡಿತಗೊಳಿಸಿದ್ದವು. ಇದರಿಂದ ಸೂರ್ಯೋದಯ್ ಬ್ಯಾಂಕ್ ಜನಪ್ರಿಯತೆಗೆ ಮತ್ತಷ್ಟು ಬಲ ಬಂದಿದೆ.
This Bank Offers Highest FD Interest Rate




