ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲದವರು ಕಟ್ಟಬೇಕು ದಂಡ; ಕಟ್ಟುನಿಟ್ಟಿನ ಆದೇಶ
Aadhaar card update : 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ ಅಂತವರು ತಕ್ಷಣ ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಿಸಬೇಕು
ಆಧಾರ್ ಕಾರ್ಡ್ ಅಪ್ಡೇಟ್ (Aadhaar card update) ಮಾಡಿಸಿಕೊಳ್ಳಲು ಸರ್ಕಾರ ಈಗಾಗಲೇ ಗಡುವು ನೀಡಿದೆ. ಈ ದಿನಾಂಕದ ಒಳಗೆ ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ ಅಂತವರಿಗೆ ಹೆಚ್ಚುವರಿ ದಂಡ ವಿಧಿಸುವುದಾಗಿ ತಿಳಿಸಿದೆ.
ಭಾರತೀಯ ನಾಗರಿಕರಿಗೆ ಭಾರತದ ವಿಶಿಷ್ಟ ಗುರುತುಗಳ ಪ್ರಾಧಿಕಾರ (UIDAI) ನೀಡಿರುವ ಆಧಾರ್ ಕಾರ್ಡ್ ಬಗ್ಗೆ ವಿಶೇಷ ಅಪ್ಡೇಟ್ ಅನ್ನು ಸರ್ಕಾರ ನೀಡಿದೆ ಈಗಾಗಲೇ ತಿಳಿಸಿರುವಂತೆ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ ಅಂತವರು ತಕ್ಷಣ ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಿಸಬೇಕು.
ಆಧಾರ್ ನವೀಕರಣ ಆಗದೆ ಇದ್ದರೆ ಯಾವುದೇ ರೀತಿಯ ಸರ್ಕಾರಿ ಯೋಜನೆಗಳ (government schemes) ಪ್ರಯೋಜನವು ಸಿಗುವುದಿಲ್ಲ, ಅಷ್ಟೇ ಅಲ್ಲದೆ ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಅಥವಾ ಮುಖ್ಯವಾಗಿರುವ ಡಾಕ್ಯುಮೆಂಟ್ಸ್ (documents) ಪಡೆದುಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 14 ರವರೆಗೆ (December 14th last date) ಅವಕಾಶ ನೀಡಲಾಗಿದ್ದು ತಕ್ಷಣವೇ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವ ಅಪ್ಡೇಟ್ ಮಾಡಿಸಿಕೊಳ್ಳಿ.
ಆಸ್ತಿ ಖರೀದಿ ಹಾಗೂ ಜಮೀನು ನೋಂದಣಿ ನಿಯಮಗಳಲ್ಲಿ ಬದಲಾವಣೆ! ಹೊಸ ರೂಲ್ಸ್
ಆಧಾರ್ ಕಾರ್ಡ್ ಅಪ್ಡೇಟ್ ಗೆ ಇನ್ನಿಲ್ಲ ಹೆಚ್ಚು ದಿನ! (December 14th last date for Aadhaar update)
ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಹೀಗೆ ಪ್ರತಿಯೊಂದು ವಿವರಣೆಗಳನ್ನು ಕೂಡ ನವೀಕರಣ ಮಾಡಿಸಿಕೊಳ್ಳಬಹುದು. ಎಷ್ಟು ಬಾರಿ ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಆಗುತ್ತೇವೆ ಅಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಿಕೊಳ್ಳುವುದು ಅನಿವಾರ್ಯ
ಅದೇ ರೀತಿ ಮೊಬೈಲ್ ಸಂಖ್ಯೆ ಕೂಡ ಬದಲಾಗಬಹುದು ಹಾಗೆ ಜನ್ಮ ದಿನಾಂಕದಲ್ಲಿಯೂ ತಿದ್ದುಪಡಿ ಮಾಡುವ ಅಗತ್ಯ ಇರಬಹುದು. ಈ ಎಲ್ಲಾ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಸರ್ಕಾರ ಡಿಸೆಂಬರ್ 14ರ ವರೆಗೆ ಅವಕಾಶ ನೀಡಿದೆ.
ಒಟ್ಟಾರೆ ಆರು ತಿಂಗಳವರೆಗೆ ಅವಕಾಶ ನೀಡಲಾಗಿತ್ತು. ಈಗ ಕೊನೆಯ ಅವಕಾಶವನ್ನು ನೀಡಲಾಗಿದ್ದು, ಈ ದಿನಾಂಕದೊಳಗೆ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳದೆ ಇದ್ದರೆ ದಂಡ ಪಾವತಿಸಬೇಕಾಗಬಹುದು ಎಂದು ಸರ್ಕಾರ ತಿಳಿಸಿದೆ.
ಚಿನ್ನದ ಬೆಲೆ 10 ದಿನಗಳಲ್ಲಿ ಸುಮಾರು 2 ಸಾವಿರ ರೂಪಾಯಿ ಇಳಿಕೆ! ಇಂದು ಇನ್ನಷ್ಟು ಕುಸಿತ
ಮೊಬೈಲ್ ನಲ್ಲಿಯೇ ಮಾಡಬಹುದು ಆಧಾರ್ ಅಪ್ಡೇಟ್! (How to update Aadhaar in mobile)
*ಇದಕ್ಕಾಗಿ ನೀವು ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಮೈ ಆಧಾರ್ (MyAadhar web portal) ಎನ್ನುವ ವೆಬ್ಸೈಟ್ https://myaadhaar.uidai.gov.in/ ಕ್ಲಿಕ್ ಮಾಡಿ.
* ಈಗ ನೀವು ಮೈ ಆಧಾರ್ ವೆಬ್ ಪೋರ್ಟಲ್ ಗೆ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕೊಟ್ಟು ಓಟಿಪಿ (OTP) ಯನ್ನು ಬಳಸಿ ಲಾಗಿನ್ (login) ಆಗಬೇಕು.
*ಬಳಿಕ ಆಧಾರ್ ಅಪ್ಡೇಟ್ ಎನ್ನುವ ಆಯ್ಕೆ ಕಾಣಿಸುತ್ತದೆ. ಇದರಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
ಮಳೆಯಿಂದ ನಿಮ್ಮ ಕಾರ್ ಹಾನಿ ಆದ್ರೆ, ಇನ್ಸೂರೆನ್ಸ್ ಕ್ಲೈಮ್ ಮಾಡಬಹುದಾ? ಇಲ್ಲಿದೆ ಮಾಹಿತಿ
*ಈಗ ಡಾಕ್ಯುಮೆಂಟ್ಸ್ ಅಪ್ಡೇಟ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರಲ್ಲಿ ನೀವು ಯಾವ ವಿಚಾರವನ್ನು ನವೀಕರಣ ಮಾಡಲು ಬಯಸುತ್ತೀರೋ ಅದರ ಡಾಕ್ಯುಮೆಂಟ್ಸ್ jpg ಅಥವಾ PDF ಕಾಪಿ ಅಪ್ಲೋಡ್ ಮಾಡಬೇಕು. ನೀವು ವಿಳಾಸ ಬದಲಾಯಿಸುವುದಿದ್ದರೆ ನಿಮ್ಮ ಈಗಿನ ವಿಳಾಸದ ಪ್ರೂಫ್ ನೀಡಬೇಕಾಗುತ್ತದೆ.
*ಎಲ್ಲ ಮಾಹಿತಿಗಳನ್ನು ಸರಿಯಾಗಿ ಓದಿ ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಮಾಡಿ ಬಳಿಕ ಸಬ್ಮಿಟ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
*ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿಯನ್ನು ತೆಗೆದುಕೊಳ್ಳಿ. ಒಂದು ರೆಫರೆನ್ಸ್ ನಂಬರ್ (reference number) ಕೊಡಲಾಗುತ್ತದೆ, 14 ದಿನಗಳ ಬಳಿಕ ಈ ನಂಬರ್ ಮೂಲಕ ನಿಮ್ಮ ಅಪ್ಡೇಟೆಡ್ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!
Those who have not updated Aadhaar card have to pay fine