ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಅತೀ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ 2 ಲಕ್ಷ ಸಾಲ! ಅರ್ಜಿ ಸಲ್ಲಿಸಿ
ಸರ್ಕಾರ ಈಗ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯ ಅಡಿಯಲ್ಲಿ ಅತೀ ಕಡಿಮೆ ಬಡ್ಡಿಗೆ 2 ಲಕ್ಷದವರೆಗೂ ಸಾಲ (Loan) ಸಿಗುತ್ತದೆ.
Loan Scheme : ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಕೂಡ ಜನರಿಗೆ ಅನುಕೂಲ ಅಗುವಂಥ ಯೋಜನೆಗಳನ್ನು ಜಾರಿಗೆ ತಂದು, ಜನರು ಸ್ವಂತ ಉದ್ಯೋಗ ಅಥವಾ ಉದ್ಯಮ ಶುರು ಮಾಡಲು ಸಹಾಯ ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಸರ್ಕಾರ ಈಗ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯ ಅಡಿಯಲ್ಲಿ ಅತೀ ಕಡಿಮೆ ಬಡ್ಡಿಗೆ 2 ಲಕ್ಷದವರೆಗೂ ಸಾಲ (Loan) ಸಿಗುತ್ತದೆ.
ಹಾಗಿದ್ದಲ್ಲಿ ಈ ಸಾಲ ಪಡೆಯುವುದು ಹೇಗೆ? ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏನು? ಮಾನದಂಡಗಳು ಏನೇನು? ಇದೆಲ್ಲವನ್ನು ತಿಳಿಸುತ್ತೇವೆ ನೋಡಿ..
ಮಹಿಳೆಯರಿಗೆ ಸಿಗಲಿದೆ 50 ಸಾವಿರ ಸಾಲ, ಅದ್ರಲ್ಲಿ 25 ಸಾವಿರ ಕಟ್ಟಿದರೆ ಸಾಕು! ಉಳಿದ 25 ಸಾವಿರ ಸಬ್ಸಿಡಿ
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
ನಮ್ಮ ರಾಜ್ಯ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು, ಸಣ್ಣ ಉದ್ಯಮ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಸಹಾಯ ಮಾಡುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅಡಿಯಲ್ಲಿ ನೀವು 2 ಲಕ್ಷ ರೂಪಾಯಿಯವರೆಗು Loan ಸಿಗಲಿದ್ದು, ಇದರಲ್ಲಿ ₹30,000 ವರೆಗು ಸಬ್ಸಿಡಿ ಸಿಗುತ್ತದೆ. ಇನ್ನು 1.70 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಬೇಕು, ಇದಕ್ಕೆ ಬಹಳ ಕಡಿಮೆ ಅಂದರೆ 4% ಬಡ್ಡಿ ಪಾವತಿ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ ಮಾಡಬೇಕು?
ಸ್ವಂತ ಉದ್ಯಮ ಶುರು ಮಾಡುವ ಆಸಕ್ತಿ ಹೊಂದಿದ್ದು, ಅದಕ್ಕಾಗಿ ಪ್ಲಾನ್ ಮಾಡಿಕೊಂಡಿರುವವರು, ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನಿಮಗೆ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್ ಕಚೇರಿಗಳಿಗೆ ಭೇಟಿ ನೀಡಿ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ (Loan Scheme) ಅರ್ಜಿ ಸಲ್ಲಿಸಬಹುದು. ಈ ಅರ್ಜಿ ಸಲ್ಲಿಸುವುದಕ್ಕೆ 2024ರ ಆಗಸ್ಟ್ 30 ಕೊನೆಯ ದಿನಾಂಕ ಆಗಿದ್ದು, ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ..
ಪ್ರತಿ ತಿಂಗಳು 5000 ಆದಾಯ ಬೇಕು ಅಂದ್ರೆ ಪೋಸ್ಟ್ ಆಫೀಸ್ ನ ಈ ಸ್ಕೀಮ್ ಸೇರಿಕೊಳ್ಳಿ! ಬಂಪರ್ ಆದಾಯ
ಅಗತ್ಯವಿರುವ ದಾಖಲೆಗಳು:
*ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ರೇಷನ್ ಕಾರ್ಡ್ ಮಾಹಿತಿ ಹಾಗೂ ನಂಬರ್
*ಶೈಕ್ಷಣಿಕ ಅರ್ಹತೆಗೆ ಮಾರ್ಕ್ಸ್ ಕಾರ್ಡ್ ಗಳು
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಂಪರ್ ಸುದ್ದಿ, ಹೆಚ್ಚಿನ ಬಡ್ಡಿ ಸಿಗೋ ಎಫ್‌ಡಿ ಯೋಜನೆ ಬಿಡುಗಡೆ
ಅರ್ಜಿ ಸಲ್ಲಿಸಲು ಅರ್ಹತೆಗಳು:
*ಅರ್ಜಿ ಸಲ್ಲಿಸುವ ವ್ಯಕ್ತಿಯ ಕುಟುಂಬದ ವಾರ್ಷಿಕ ಆದಾಯ ಅವರು ಹಳ್ಳಿಯವರಾದರೆ ₹98 ಸಾವಿರದ ಒಳಗಿರಬೇಕು, ಸಿಟಿ ಯವರಾದರೆ ₹1.20 ಲಕ್ಷದ ಒಳಗೆ ವಾರ್ಷಿಕ ಆದಾಯ ಇರಬೇಕು.
*18 ರಿಂದ 55 ವರ್ಷಗಳ ಒಳಗಿರುವ, ಕರ್ನಾಟಕ ರಾಜ್ಯಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದು.
*ಅರ್ಜಿದಾರರು ಈ ಮೊದಲು ಸರ್ಕಾರದ ಬೇರೆ ಯಾವುದೇ ಸೌಲಭ್ಯವನ್ನು ಪಡೆದಿರಬಾರದು.
*ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು, ಅದಕ್ಕೆ ಫೋನ್ ನಂಬರ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
*ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಸಾಲ ಸಿಗುತ್ತದೆ.
*ನೀವು ಶುರು ಮಾಡಬೇಕಾಗಿರುವ ಉದ್ಯಮ ಅಥವಾ ಸ್ವಂತ ಉದ್ಯೋಗದ ಬಗ್ಗೆ ಪೂರ್ತಿ ಮಾಹಿತಿ ಕೊಡಬೇಕು.
*ಅರ್ಜಿದಾರರಿಗೆ ಯಾವುದೇ ಕೆಲಸ ಇರಬಾರದು. ಇದಕ್ಕಾಗಿ ಸರ್ಟಿಫಿಕೇಟ್ ಇರಬೇಕು.
Those who have to do their own business can get a loan of 2 lakhs at very low interest