ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಂಪರ್ ಸುದ್ದಿ, ಹೆಚ್ಚಿನ ಬಡ್ಡಿ ಸಿಗೋ ಎಫ್‌ಡಿ ಯೋಜನೆ ಬಿಡುಗಡೆ
Fixed Deposit : ಇದೀಗ SBI ತಮ್ಮ ಗ್ರಾಹಕರಿಗೆ ಒಳ್ಳೆಯ ಆದಾಯ ಬರುವ ಹಾಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲಿದ್ದು, ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ.
State Bank Of India ನಮ್ಮ ದೇಶದ ಅತಿದೊಡ್ಡ ಸರ್ಕಾರೀ ಬ್ಯಾಂಕ್ ಗಳಲ್ಲಿ ಒಂದು. ಈ ಬ್ಯಾಂಕ್ ತಮ್ಮ ಗ್ರಾಹಕರಿಗೆ ಉತ್ತಮವಾದ ಸೇವೆಗಳನ್ನು ನೀಡುವ ಮೂಲಕ ಅವರ ವಿಶ್ವಾಸ ಗಳಿಸಿದೆ. ಹಾಗೆಯೇ ಗ್ರಾಹಕರಿಗೆ ಒಳ್ಳೆಯ ಆದಾಯ ಬರುವಂಥ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಆರ್ಥಿಕವಾಗಿ ಕೂಡ ಅವರಿಗೆ ನೆರವಾಗಿದೆ.
ಇದೀಗ SBI ತಮ್ಮ ಗ್ರಾಹಕರಿಗೆ ಒಳ್ಳೆಯ ಆದಾಯ ಬರುವ ಹಾಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲಿದ್ದು, ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ..
ರೈತರೇ, ಮಳೆಗಾಲದಲ್ಲಿ ಈ ಬೆಳೆಗಳನ್ನು ಬೆಳೆಯಿರಿ, ಕೈತುಂಬಾ ಆದಾಯ ಗಳಿಸಿ! ಇಲ್ಲಿದೆ ಮಾಹಿತಿ
SBI ಅಮೃತ್ ವೃಷ್ಟಿ ಯೋಜನೆ;
ಇದು SBI ಜಾರಿಗೆ ತಂದಿರುವ ಮತ್ತೊಂದು ಹೊಸ Fixed Deposit ಹೂಡಿಕೆಯ ಯೋಜನೆ ಆಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ಅತಿಹೆಚ್ಚು ಬಡ್ಡಿ ಪಡೆಯುತ್ತಾರೆ. ಇದೇ ಕಾರಣಕ್ಕೆ ನೀವು ಈ ಒಂದು FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ನಮ್ಮ ಭಾರತ ದೇಶದವರು ಹಾಗೂ NRI ಗಳು ಇಬ್ಬರಿಗೂ ಕೂಡ ಅಮೃತ್ ವೃಷ್ಟಿ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ. 2024ರ ಜುಲೈ 15ರಂದು ಜಾರಿಗೆ ತಂದಿರುವ ಯೋಜನೆ ಇದಾಗಿದೆ.
ಅಮೃತ್ ವೃಷ್ಟಿ ಯೋಜನೆಯು 444 ದಿನಗಳಿಗೆ ಮೆಚ್ಯುರ್ ಆಗುವ ಯೋಜನೆ ಆಗಿದ್ದು, ಇದರಲ್ಲಿ ಸಾಮಾನ್ಯ ಜನರಿಗೆ 7.25% ವರೆಗು ಬಡ್ಡಿ ಸಿಗುತ್ತದೆ. ಇನ್ನು ಹಿರಿಯ ನಾಗರೀಕರಿಗೆ 7.75% ವರೆಗು ಬಡ್ಡಿ ಸಿಗುತ್ತದೆ.
ಹಾಗಾಗಿ ಈ ಯೋಜನೆಯಲ್ಲಿ ಅತಿ ಹೆಚ್ಚು ಆದಾಯ ಪಡೆಯುವ ಅವಕಾಶ ಗ್ರಾಹಕರಿಗೆ ಸಿಗುತ್ತಿದೆ.. Internet Banking ಅಥವಾ YONO App ಬಳಕೆ ಮಾಡಿ, ಈ ಒಂದು ಯೋಜನೆಯನ್ನು ಶುರು ಮಾಡಬಹುದು.
ಆಧಾರ್ ಕಾರ್ಡಿನಲ್ಲಿ ಅಡ್ರೆಸ್ ತಿದ್ದುಪಡಿಗೆ ಇನ್ಮುಂದೆ ನೂತನ ವ್ಯವಸ್ಥೆ ಜಾರಿ! ಇಲ್ಲಿದೆ ಪೂರ್ತಿ ಡೀಟೇಲ್ಸ್
SBI ಅಮೃತ್ ವೃಷ್ಟಿ ಯೋಜನೆ:
SBI ಜಾರಿಗೆ ತಂದಿರುವ ಈ ಒಂದು ಯೋಜನೆಗೆ ಎಲ್ಲಿಯವರೆಗೂ ಹೂಡಿಕೆ ಮಾಡಬಹುದು ಎಂದರೆ, ಈ ಯೋಜನೆ 2024ರ ಜುಲೈ 15ರಂದು ಶುರುವಾಗಿದ್ದು, 2025ರ ಮಾರ್ಚ್ 31ರ ವರೆಗೂ ಇದರಲ್ಲಿ ಹೂಡಿಕೆ ಮಾಡಬಹುದು.
ಇದು 444 ದಿನಗಳ ಅವಧಿಯ ಹೂಡಿಕೆ ಯೋಜನೆ ಆಗಿದೆ. ಇಲ್ಲಿ ನಿಮ್ಮ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಸಮಯದಲ್ಲಿ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ನಿಮಗೆ TDS ಸೌಲಭ್ಯ, ಸಿಗಲಿದ್ದು ಹಣವು ಗ್ರಾಹಕರ ಬ್ಯಾಂಕ್ ಅಕೌಂಟ್ ಗೆ ಬರಲಿದೆ.
ಇದರ ಜೊತೆಗೆ SBI ಇನ್ನೊಂದು Fixed Deposit ಸ್ಕೀಮ್ ಅನ್ನು ಕೂಡ ಜಾರಿಗೆ ತಂದಿದ್ದು, ಇದರ ಹೆಸರು ಅಮೃತ್ ಕಲಶ್ ಯೋಜನೆ ಆಗಿದೆ. ಇದರಲ್ಲಿ ಹೂಡಿಕೆ ಮಾಡಿದರೆ ಸಾಮಾನ್ಯ ಜನರಿಗೆ 7.10% ರಿಟರ್ನ್ಸ್, 7.60% ಹಿರಿಯ ನಾಗರೀಕರಿಗೆ ಸಿಗುವ ಬಡ್ಡಿ ಆಗಿದೆ.
ದಿಢೀರ್ ಇಳಿಕೆಯಾದ ಚಿಕನ್ ಬೆಲೆ, ಪ್ರಸ್ತುತ 1 ಕೆ.ಜಿ ಚಿಕನ್ ರೇಟ್ ಎಷ್ಟಿದೆ ಗೊತ್ತಾ? ಮಾಂಸಾಹಾರಿಗಳಿಗೆ ಭರ್ಜರಿ ಸುದ್ದಿ
ಇದು 400 ದಿನಗಳ ಅವಧಿಯ FD ಯೋಜನೆ ಆಗಿದೆ..ಈ ಯೋಜನೆಯಲ್ಲಿ 7 ದಿನಗಳಗಿಂತ ಕಡಿಮೆ ಅವಧಿಗೆ ಹೂಡಿಕೆ ಮಾಡುವ ಹಾಗಿಲ್ಲ. ಈ ಒಂದು ಯೋಜನೆಯ ಸದುಪಯೋಗವನ್ನು ಕೂಡ ಪಡೆದುಕೊಳ್ಳಬಹುದು.
Bumper news for State Bank customers, New FD scheme Launched