ಮಸ್ತ್ ಮೈಲೇಜ್ ನೀಡೋ ಹೀರೋ ಸ್ಪ್ಲೆಂಡರ್ ಬೈಕ್‌ಗೆ ನಂ.1 ಸ್ಥಾನ
ಭಾರತದಲ್ಲಿ ಜನಪ್ರಿಯ ಬೈಕ್‌ಗಳ ಮಾರಾಟದಲ್ಲಿ ಜನವರಿ 2025 ನಲ್ಲಿ ಗಂಭೀರ ಏರಿಕೆ ಕಂಡು ಬಂದಿದೆ. ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದ್ದು, ಹೋಂಡಾ ಶೈನ್, ಬಜಾಜ್ ಪಲ್ಸರ್, HF ಡಿಲಕ್ಸ್, ಟಿವಿಎಸ್ ಅಪಾಚೆ ಕೂಡ ಟಾಪ್-5 ನಲ್ಲಿ ಸ್ಥಾನ ಪಡೆದಿವೆ.
- ಜನವರಿ 2025 ನಲ್ಲಿ 6.28 ಲಕ್ಷಕ್ಕೂ ಹೆಚ್ಚು ಬೈಕ್‌ಗಳ ಮಾರಾಟ
- ಹೀರೋ ಸ್ಪ್ಲೆಂಡರ್ ಮತ್ತೆ ಭಾರತದಲ್ಲಿ ಟಾಪ್ ಸೆಲಿಂಗ್ ಬೈಕ್
- ಹೋಂಡಾ ಶೈನ್, ಪಲ್ಸರ್, HF ಡಿಲಕ್ಸ್, ಟಿವಿಎಸ್ ಅಪಾಚೆ ಟಾಪ್-5ನಲ್ಲಿ
Top 5 best-selling bikes in January 2025 : ಭಾರತದಲ್ಲಿ ಜನಪ್ರಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಜನವರಿ 2025 ಒಂದು ವಿಶೇಷ ತಿಂಗಳಾಗಿದೆ. ಈ ತಿಂಗಳಲ್ಲಿ ಒಟ್ಟು 6,28,536 ಬೈಕ್‌ಗಳ ಮಾರಾಟವಾಗಿದ್ದು, ಅದರಲ್ಲಿ ಟಾಪ್-5 ಬೈಕ್‌ಗಳು ಗಮನ ಸೆಳೆದಿವೆ. ಮಾರಾಟದ ಅಂಕಿ ಅಂಶಗಳನ್ನು ಆಧರಿಸಿ, ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದೆ.
ಹೊಸ ಸ್ವಿಫ್ಟ್ ಕಾರು EMI ನಲ್ಲಿ ಖರೀದಿ ಮಾಡಿದ್ರೆ ಡೌನ್ ಪೇಮೆಂಟ್ ಎಷ್ಟಾಗುತ್ತೆ? ಇಲ್ಲಿದೆ ವಿವರ
ಹೀರೋ ಸ್ಪ್ಲೆಂಡರ್:
Hero Splendor Bike : ಹೀರೋ ಮೋಟೋಕಾರ್ಪ್ ಕಂಪನಿಯ ಸ್ಪ್ಲೆಂಡರ್ ಬೈಕ್ ಬಹಳ ಕಾಲದಿಂದಲೂ ಜನಪ್ರಿಯವಾಗಿದೆ. ಈ ಬೈಕ್ ಉತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚದ ಕಾರಣ ಜನಪ್ರಿಯವಾಗಿದೆ. ಜನವರಿ 2025 ರಲ್ಲಿ ಈ ಬೈಕ್ 2,59,431 ಯೂನಿಟ್ ಮಾರಾಟವಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 2,55,122 ಯೂನಿಟ್ ಮಾರಾಟವಾಗಿತ್ತು.
ಹೋಂಡಾ ಶೈನ್:
Honda Shine : ಜಪಾನ್ ಮೂಲದ ಹೋಂಡಾ ಕಂಪನಿಯ ಶೈನ್ ಬೈಕ್, ಜನವರಿ 2025 ರಲ್ಲಿ 1,68,290 ಬೈಕ್ ಮಾರಾಟಗೊಂಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 1,45,252 ಬೈಕ್‌ಗಳು ಮಾರಾಟವಾಗಿದ್ದವು. ಈ ಬೈಕ್ ಸಹ ಉತ್ತಮ ಮೈಲೇಜ್ ನೀಡುತ್ತದೆ.
ಬಜಾಜ್ ಪಲ್ಸರ್:
Bajaj Pulsar Bike : ಬಜಾಜ್ ಪಲ್ಸರ್ ಮೂರನೇ ಸ್ಥಾನದಲ್ಲಿ ಇದ್ದು, ಹೊಸ ಡಿಸೈನ್ ಮತ್ತು ಪವರ್‌ಫುಲ್ ಎಂಜಿನ್ ಹೊಂದಿರುವ ಈ ಬೈಕ್ ಜನಪ್ರಿಯವಾಗಿದೆ. ಜನವರಿ 2025 ರಲ್ಲಿ 1,04,081 ಬೈಕ್ ಮಾರಾಟವಾಗಿದ್ದು, ಹಿಂದಿನ ವರ್ಷದ ಸಮಾನ ಅವಧಿಯಲ್ಲಿ 1,28,883 ಬೈಕ್ ಮಾರಾಟವಾಗಿತ್ತು. ಮಾರಾಟದಲ್ಲಿ 20% ಇಳಿಮುಖ ಕಂಡು ಬಂದಿದೆ.
ಸ್ಟೇಟ್ ಬ್ಯಾಂಕಿನಿಂದ ಕಡಿಮೆ ಬಡ್ಡಿಗೆ 7 ಲಕ್ಷದವರೆಗೆ ಎಜುಕೇಶನ್ ಲೋನ್! ಬಂಪರ್ ಸ್ಕೀಮ್
ಹೀರೋ HF ಡಿಲಕ್ಸ್:
Hero HF Deluxe : ಹೀರೋ ಮೋಟೋಕಾರ್ಪ್‌ನ ಮತ್ತೊಂದು ಜನಪ್ರಿಯ ಬೈಕ್ HF ಡಿಲಕ್ಸ್, ಜನವರಿ 2025 ರಲ್ಲಿ 62,223 ಬೈಕ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ.
ಟಿವಿಎಸ್ ಅಪಾಚೆ:
TVS Apache : ಟಾಪ್-5 ಲಿಸ್ಟ್‌ನಲ್ಲಿ ಟಿವಿಎಸ್ ಅಪಾಚೆ ಕೂಡ ಸ್ಥಾನ ಪಡೆದುಕೊಂಡಿದೆ. ಕಳೆದ ತಿಂಗಳು 34,511 ಬೈಕ್‌ಗಳ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 31,222 ಬೈಕ್‌ಗಳ ಮಾರಾಟವಾಗಿತ್ತು.
Top 5 best-selling bikes in January 2025
Our Whatsapp Channel is Live Now 👇