500 Rupee: ಇನ್ಮುಂದೆ ಎಟಿಎಂನಲ್ಲಿ 500 ರೂಪಾಯಿ ನೋಟು ಸಿಗಲ್ಲವೇ? ಅಧಿಕೃತ ಸ್ಪಷ್ಟನೆ ಇಲ್ಲಿದೆ

2026ರ ಮಾರ್ಚ್‌ನಿಂದ ATMಗಳಲ್ಲಿ 500 ರೂಪಾಯಿ ನೋಟು ಲಭ್ಯವಿರುವುದಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ RBI ಹಾಗೂ PIB ನೀಡಿರುವ ಸ್ಪಷ್ಟನೆ ಏನು ಎನ್ನುವುದನ್ನು ತಿಳಿಯಿರಿ.

  • 500 ನೋಟು ಎಟಿಎಂನಲ್ಲಿ ಸಿಗಲ್ಲ ಎಂಬ ವೈರಲ್ ಸುದ್ದಿ
  • 500 ನೋಟುಗಳ ಮೇಲೆ ಯಾವುದೇ ನಿಷೇಧ ಇಲ್ಲ
  • PIB ಫ್ಯಾಕ್ಟ್ ಚೆಕ್: ಈ ಸುದ್ದಿ ಸಂಪೂರ್ಣ ಸುಳ್ಳು

500 Rupee Note: ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುವ ಕೆಲ ಸುದ್ದಿಗಳು ಜನರನ್ನು ಗೊಂದಲಕ್ಕೆ ಒಳಪಡಿಸುತ್ತವೆ. ಇತ್ತೀಚೆಗೆ ಅಂತಹದ್ದೇ ಒಂದು ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. 2026ರ ಮಾರ್ಚ್‌ನಿಂದ ATM ಮೂಲಕ ₹500 ರೂಪಾಯಿ ನೋಟುಗಳನ್ನು ತೆಗೆಯಲು ಸಾಧ್ಯವಿಲ್ಲ ಎಂಬ ಸುದ್ದಿ ವೇಗವಾಗಿ ಹರಡುತ್ತಿದೆ.

ಈ ವೈರಲ್ ಸಂದೇಶಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 500 ರೂಪಾಯಿ ನೋಟುಗಳ ವಿತರಣೆಯನ್ನು ನಿಲ್ಲಿಸುತ್ತಿದೆ ಎಂಬ ಮಾತು ಹೇಳಲಾಗುತ್ತಿದೆ. ಜೊತೆಗೆ ಈ ನೋಟುಗಳು ಚಲಾವಣೆಯಿಂದಲೇ ಹೊರ ಹೋಗುತ್ತವೆ ಎಂಬ ಆತಂಕಕಾರಿ ಹೇಳಿಕೆಗಳನ್ನೂ ಸೇರಿಸಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಈ ಸುದ್ದಿಯ ನಿಜಾಂಶ ಏನು?

ಈ ಬಗ್ಗೆ ಪ್ರೆಸ್ ಇನ್‌ಫರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ತಂಡ ಸ್ಪಷ್ಟನೆ ನೀಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಈ ಸಂದೇಶಗಳು ಸಂಪೂರ್ಣವಾಗಿ ಸುಳ್ಳು ಎಂದು PIB ತಿಳಿಸಿದೆ. RBI ಈ ರೀತಿಯ ಯಾವುದೇ ಘೋಷಣೆಯನ್ನು ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

PIB ಪ್ರಕಾರ, ₹500 ರೂಪಾಯಿ ನೋಟುಗಳ ಮೇಲೆ ಯಾವುದೇ ನಿರ್ಬಂಧವೂ ಇಲ್ಲ, ಅವುಗಳನ್ನು ರದ್ದುಪಡಿಸುವ ನಿರ್ಧಾರವೂ ತೆಗೆದುಕೊಳ್ಳಲಾಗಿಲ್ಲ. ಜನರು ಹಿಂದಿನಂತೆಯೇ ₹500 ರೂಪಾಯಿ ನೋಟುಗಳನ್ನು ಬಳಸಬಹುದು ಎಂದು ಫ್ಯಾಕ್ಟ್ ಚೆಕ್ ತಂಡ ತಿಳಿಸಿದೆ.

ಇಂತಹ ವದಂತಿಗಳು ಹೊಸದಲ್ಲ

₹500 ರ ನೋಟುಗಳ ಬಗ್ಗೆ ಈ ರೀತಿಯ ವದಂತಿಗಳು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಲ್ಲಿ ಹಲವು ಬಾರಿ ಇದೇ ರೀತಿಯ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ ಪ್ರತೀ ಸಲವೂ RBI ಮತ್ತು PIB ಇವುಗಳನ್ನು ಖಂಡಿಸಿದೆ.

 ATMಗಳಲ್ಲಿ ಈಗಿನ ಸ್ಥಿತಿ

ಪ್ರಸ್ತುತ ದೇಶದ ಬಹುತೇಕ ATMಗಳಲ್ಲಿ ₹500 ನೋಟುಗಳೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿವೆ. ಕೆಲ ATMಗಳಲ್ಲಿ ₹100 ಮತ್ತು ₹200 ನೋಟುಗಳು ಕೂಡ ಇರುತ್ತವೆ. ನಿಜಕ್ಕೂ ₹500 ನೋಟುಗಳನ್ನು ನಿಲ್ಲಿಸುವ ನಿರ್ಧಾರ ಬಂದಿದ್ದರೆ, ಸಾರ್ವಜನಿಕರಿಗೆ ದೊಡ್ಡ ತೊಂದರೆ ಉಂಟಾಗುತ್ತಿತ್ತು ಎಂಬುದು ತಜ್ಞರ ಅಭಿಪ್ರಾಯ.

ಆದ್ದರಿಂದ, ಯಾವುದೇ ರೀತಿಯ ಸೋಷಿಯಲ್ ಮೀಡಿಯಾ ಸಂದೇಶಗಳನ್ನು ನಂಬುವ ಮುನ್ನ ಅಧಿಕೃತ ಮೂಲಗಳಿಂದ ಮಾಹಿತಿ ಪರಿಶೀಲಿಸುವುದು ಅತ್ಯಂತ ಅಗತ್ಯ. PIB ಫ್ಯಾಕ್ಟ್ ಚೆಕ್ ಅಥವಾ RBI ಘೋಷಣೆಗಳನ್ನು ಗಮನಿಸುವಂತೆ ಜನರಿಗೆ ಸಲಹೆ ನೀಡಲಾಗಿದೆ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories