ಸರಿಯಾದ ಮೊಬೈಲ್ ಸಂಖ್ಯೆ ನೀಡದ ರೈತರಿಗೆ ಪಿಎಂ ಕಿಸಾನ್ ಹಣ ಸಿಗೋಲ್ಲ - PM Kisan scheme
ಪಿಎಂ-ಕಿಸಾನ್ ಯೋಜನೆಯ 20ನೇ ಕಂತು ಪಡೆಯಲು ರೈತರು ತಮ್ಮ ನವೀಕರಿಸಿದ (updated) ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಮಾಡಿಸಬೇಕು, ಇಲ್ಲದಿದ್ದರೆ ಹಣ ಲಭ್ಯವಾಗದೇ ಉಳಿಯಬಹುದು.

- ಪಿಎಂ-ಕಿಸಾನ್ ಹಣ ಪಡೆಯಲು ಮೊಬೈಲ್ ನಂಬರ್ ಅಪ್ಡೇಟ್ ಅಗತ್ಯ
- ಸರಿಯಾದ ನಂಬರ್ ಇಲ್ಲದಿದ್ದರೆ OTP ತಡ, ಹಣ ಪಾವತಿ ತೊಂದರೆ
- ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ನಂಬರ್ ಅಪ್ಡೇಟ್ ಸುಲಭ
ಪ್ರತಿ ವರ್ಷ ರೈತರಿಗೆ ₹6000 ನೀಡುವ ಕೇಂದ್ರ ಸರ್ಕಾರದ ಪಿಎಂ-ಕಿಸಾನ್ (PM-Kisan) ಯೋಜನೆಯ 20ನೇ ಕಂತು ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಇದರ ಮೊದಲು ತಮ್ಮ mobile number ನವೀಕರಿಸಿಕೊಳ್ಳುವುದು ಅತ್ಯಂತ ಮುಖ್ಯ.
ಒಟಿಪಿ (OTP) ಆಧಾರಿತ ವೆರಿಫಿಕೇಶನ್ ಕಾರಣದಿಂದ, ತಪ್ಪಾದ ನಂಬರ್ ಇದ್ದರೆ ಹಣ ತಲುಪುವಲ್ಲಿ ತೊಂದರೆ ಉಂಟಾಗುತ್ತದೆ.
ಈ ಬಾರಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು, ನಂಬರ್ ಲಿಂಕ್ ಇಲ್ಲದ ಫಲಾನುಭವಿಗಳಿಗೆ ಹಣವನ್ನು ತಡೆಹಿಡಿಯಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ. OTP ಬಾರದೇ ಹೋದರೆ ಪಾವತಿ ಫೇಲ್ ಆಗುತ್ತದೆ, ಹಾಗೂ ಹಣವು ಬೇರೆಯವರ ಖಾತೆಗೆ ಹೋಗುವ ಅಪಾಯವೂ ಇದೆ.
ಇದನ್ನೂ ಓದಿ: ಕಾರು ಅಪಘಾತ ಆದಾಗ ಇನ್ಸೂರೆನ್ಸ್ ಕ್ಲೈಮ್ ಮಾಡೋಕೆ ಹೊಸ ರೂಲ್ಸ್
ಮೊಬೈಲ್ ನಂಬರ್ ನವೀಕರಣಕ್ಕೆ (update) ಆನ್ಲೈನ್ ಅಥವಾ ಆಫ್ಲೈನ್ ಎರಡೂ ಮಾರ್ಗವಿದೆ. ಆನ್ಲೈನ್ ವಿಧಾನದಲ್ಲಿ https://pmkisan.gov.in ವೆಬ್ಸೈಟ್ಗೆ ಹೋಗಿ ‘Farmer’s Corner’ ಸೆಕ್ಷನ್ನಲ್ಲಿನ ‘Updation of Self Registered Farmer’ ಆಯ್ಕೆಗೆ ಹೋಗಬೇಕು. ಅಲ್ಲಿ Aadhaar ನಂಬರ್ ನೀಡಿ, ಕ್ಯಾಪ್ಚಾ ಕೋಡ್ ಹಾಕಿ, OTP ವೆರಿಫೈ ಮಾಡಿ ಹೊಸ ನಂಬರ್ ಹಾಕಿ save ಮಾಡಬಹುದು.
ಆಫ್ಲೈನ್ ವಿಧಾನದಲ್ಲಿ ಹತ್ತಿರದ CSC (Common Service Center) ಕ್ಕೆ ಭೇಟಿ ನೀಡಿ. ನಿಮ್ಮ ಆಧಾರ್ ಕಾರ್ಡ್ ಹಾಗೂ ಹಳೆಯ ನಂಬರ್ನ್ನು ಒಯ್ಯಬೇಕು. ಅಲ್ಲಿನ ಆಪರೇಟರ್ ನಿಮ್ಮ ಹೊಸ ನಂಬರ್ನ್ನು ಪಿಎಂ-ಕಿಸಾನ್ ಪೋರ್ಟಲ್ (portal) ಮೂಲಕ ಅಪ್ಡೇಟ್ ಮಾಡುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಕೆಲ ಶುಲ್ಕವಿದ್ದೇ ಇರಬಹುದು.
ಇದನ್ನೂ ಓದಿ: 2ನೇ ಮದುವೆ ಆದ ಮಹಿಳೆಗೆ ಮೊದಲ ಗಂಡನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ? ಕೋರ್ಟ್ ತೀರ್ಪು
ಸಾಧಾರಣವಾಗಿ ರೈತರು ಮೊಬೈಲ್ ನಂಬರ್ ಮಾತ್ರವೇ ಅಪ್ಡೇಟ್ ಮಾಡಬೇಕೆಂದು ಭಾವಿಸುತ್ತಾರೆ. ಆದರೆ ಬ್ಯಾಂಕ್ ಖಾತೆ ನಂಬರ್, IFSC ಕೋಡ್, ಹಾಗೂ ಆಧಾರ್ ವಿವರಗಳು ಕೂಡ ಸರಿಯಾಗಿರಬೇಕು. ಇದರಲ್ಲಿ ತಪ್ಪು ಇದ್ದರೂ ಹಣದ ಕಂತು ತಡವಾಗಬಹುದು ಅಥವಾ ನಿಲ್ಲಬಹುದು.
ಇದನ್ನೂ ಓದಿ: ಇನ್ಮುಂದೆ ಫೋನ್ ಪೇ, ಗೂಗಲ್ ಪೇ, ಪೇಟಿಎಂನಲ್ಲೇ ಸಿಗುತ್ತೆ ಲೋನ್ ಸೌಲಭ್ಯ
ಹಾಗಾಗಿ ‘Self Registered Farmer’ ವಿಭಾಗದಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ನೋಡಿ, ಸರಿಪಡಿಸಿಕೊಳ್ಳಿ. ಈ ನಿರ್ಲಕ್ಷ್ಯದಿಂದ ಯೋಜನೆ ಹಣ ಬಾರದೆ ಇರಬಹುದು.
ಇದೆ ರೀತಿಯ ಮಾಹಿತಿ ಇನ್ನಷ್ಟು ಪಡೆಯಲು Kannada News Today ವೆಬ್ಸೈಟ್ ವೀಕ್ಷಿಸಿ.
Update Mobile Number to Get PM-Kisan 2000 Installment




