ಇನ್ಮುಂದೆ ಕ್ಯಾಶ್ ಪಡೆಯಲು ಎಟಿಎಂ ಅಗತ್ಯವಿಲ್ಲ, ಯುಪಿಐ ಮೂಲಕ ದೇಶದಲ್ಲಿ ಹೊಸ ಡಿಜಿಟಲ್ ಕ್ರಾಂತಿ
UPI QR ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ವಿತ್ ಡ್ರಾ ಮಾಡಬಹುದು. ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಹಿಟಾಚಿ ಪೇಮೆಂಟ್ ಸರ್ವೀಸ್ ಈ ಎರಡು ಸಂಸ್ಥೆಗಳು ಸೇರಿ UPI ATM ಅನ್ನು ತಯಾರಿಸಿದೆ.
ಅಕೌಂಟ್ ನಲ್ಲಿ ಹಣವಿದ್ದು ಕ್ಯಾಶ್ ಬೇಕು ಎಂದರೆ, ಎಲ್ಲರೂ ಎಟಿಎಂ ಹೋಗಿ ಕ್ಯಾಶ್ (Cash) ಪಡೆಯುತ್ತಾರೆ. ಎಟಿಎಂ ಗಳಲ್ಲಿ (ATM Center) ಕ್ಯಾಶ್ ಪಡೆಯಬೇಕು ಎಂದರೆ ಅದಕ್ಕಾಗಿ ಡೆಬಿಟ್ ಕಾರ್ಡ್ ಇರಲೆಬೇಕು. ಪ್ರಸ್ತುತ ನಮ್ಮ ದೇಶದಲ್ಲಿ ಡಿಜಿಟಲ್ ಪೇಮೆಂಟ್ ಕೂಡ ಹೆಚ್ಚಾಗುತ್ತಿದೆ.
ಅಂದರೆ ಯುಪಿಐ ಬಳಸಿ ಎಲ್ಲೆಡೆ ಹಣ ಪಾವತಿ ಮಾಡುವ ಕೆಲಸ ಹೆಚ್ಚಾಗುತ್ತಿದ್ದು, ಡಿಜಿಟಲ್ ಕ್ರಾಂತಿಯಲ್ಲಿ (Digital Revolution) ನಮ್ಮ ದೇಶ ಮುಂದಿದೆ. ಆದರೆ ಡಿಜಿಟಲ್ ವಹಿವಾಟು ಜಾಸ್ತಿ ಆಗುತ್ತಿರುವ ಕಾರಣ, ಎಟಿಎಂ ಬಳಕೆ ಕಡಿಮೆ ಆಗುತ್ತಿದೆ. ಇದರಿಂದಾಗಿ ಎಟಿಎಂ ವಿಚಾರದಲ್ಲಿ ವಂಚನೆ ಆಗಬಹುದು ಎನ್ನುವ ಕಾರಣಕ್ಕೆ ಭಾರತದಲ್ಲಿ ಹೊಸ ವ್ಯವಸ್ಥೆ ತರಲಾಗುತ್ತಿದೆ.
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಎಲ್ಲರಿಗೂ ಸರ್ಕಾರದಿಂದ ಮತ್ತೊಂದು ಸೂಚನೆ
ಎಟಿಎಂ ಇಂದ ಹಣ ಪಡೆಯಬೇಕು ಎಂದಾಗ ಆತುರದಲ್ಲಿ ಡೆಬಿಟ್ ಕಾರ್ಡ್ (Debit Card), ಕ್ರೆಡಿಟ್ ಕಾರ್ಡ್ (Credit Card) ಇಲ್ಲದೆ ಫಜೀತಿಗೆ ಒಳಗಾಗುವ ಘಟನೆ ಕೂಡ ನಡೆಯುತ್ತದೆ. ಅದಕ್ಕಾಗಿ ಭಾರತದಲ್ಲಿ ಈಗ UPI ATM ಶುರು ಮಾಡಬೇಕು ಎಂದು ಪ್ಲಾನ್ ಮಾಡಿಕೊಳ್ಳಲಾಗಿದೆ..
ಈ ಮೂಲಕ ನೀವು ನಿಮ್ಮ ಮೊಬೈಲ್ ಇಂದ UPI QR ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ವಿತ್ ಡ್ರಾ ಮಾಡಬಹುದು. ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಹಿಟಾಚಿ ಪೇಮೆಂಟ್ ಸರ್ವೀಸ್ ಈ ಎರಡು ಸಂಸ್ಥೆಗಳು ಸೇರಿ UPI ATM ಅನ್ನು ತಯಾರಿಸಿದೆ.
ಇದರಿಂದ ನೀವು ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ, UPI ಮೂಲಕ ಎಟಿಎಂ ಇಂದ ಹಣವನ್ನು ಪಡೆಯಬಹುದು. ಈ ಮಷಿನ್ ನಲ್ಲಿ ಹಣ ವಿತ್ ಡ್ರಾ ಮಾಡುವುದು ಕೂಡ ಸುಲಭ.
ನಿಮ್ಮ ಜೀವನದಲ್ಲಿ ಕೇವಲ 5000 ಇದ್ರೆ ಸಾಕು; ಈ ಬಿಸಿನೆಸ್ ತಂದು ಕೊಡುತ್ತೆ ಪ್ರತಿ ತಿಂಗಳು ಲಕ್ಷ ಲಕ್ಷ ಆದಾಯ
ಈಗ ನಿಮ್ಮ ಮೊಬೈಲ್ ಓಪನ್ ಮಾಡಿ ಕೋಡ್ ಸ್ಕ್ಯಾನ್ ಮಾಡಬೇಕು. ಇದು ಮರ್ಚೆಂಟ್ ಕೋಡ್ ಥರ ಇರುವುದಿಲ್ಲ. ಸ್ಕ್ಯಾನ್ ಮಾಡಿದ ತಕ್ಷಣ ನಿಮಗೆ ಹಣ ಬರುತ್ತದೆ ಎಂದು ನೋಟಿಫಿಕೇಶನ್ ಬರುತ್ತದೆ. ನಂತರ ನೀವು UPI ಪಿನ್ ನಂಬರ್ ಹಾಕಿದ ಬಳಿಕ ನೀವು ಆಯ್ಕೆ ಮಾಡಿದಷ್ಟು ಹಣ, ಮಷಿನ್ ಮೂಲಕ ಸಿಗುತ್ತದೆ. ಈ ರೀತಿಯಾಗಿ UPI ATM ಬಳಕೆ ಮಾಡುವುದರಿಂದ ಸಾಕಷ್ಟು ವಂಚನೆಗಳನ್ನು ತಡೆಯಬಹುದು..ಅದು ಹೇಗೆ ಎಂದು ಈಗ ತಿಳಿಯೋಣ..
ಕೇವಲ 5 ಲಕ್ಷಕ್ಕೆ ಕಾರು ಬಿಡುಗಡೆ ಮಾಡಿದ ಟಾಟಾ, ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ!
ಎಟಿಎಂ ನಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ವಿತ್ ಡ್ರಾ ಮಾಡುವಾಗ ಎಟಿಎಂ ಮಷಿನ್ ಗೆ ಕೆಲವು ಕಿಡಿಗೇಡಿಗಳು ಡಿವೈಸ್ ಗಳನ್ನು ಅಳವಡಿಸಿ, ಅದರಿಂದ ವ್ಯಕ್ತಿಯ ಎಟಿಎಂ ಕಾರ್ಡ್ ನಂಬರ್, ಪಿನ್ ನಂಬರ್ ಇದೆಲ್ಲವನ್ನು ತಿಳಿದುಕೊಂಡು ಮೋಸ ಮಾಡುತ್ತಿದ್ದರು.
ಆದರೆ ಇನ್ನುಮುಂದೆ UPI ATM ಇರುವುದರಿಂದ ಇಂಥ ತೊಂದರೆಗಳು ಆಗುವುದಿಲ್ಲ. ಇದೀಗ ನಮ್ಮ ದೇಶದಲ್ಲಿ ಈ UPI ATM ಗಳ ಸ್ಥಾಪನೆ ಆಗುತ್ತಿದ್ದು, ಮುಂಬೈ ಮತ್ತು ಇನ್ನಿತರ ಸಿಟಿಗಳಲ್ಲಿ UPI ATM ಸ್ಥಾಪನೆ ಶುರುವಾಗಿದೆ.
UPI ATM Machine Introduced for Cash Withdraw without Debit Card
Follow us On
Google News |