PhonePe ಮತ್ತು Google Pay ಯುಪಿಐ ಬಳಕೆದಾರರಿಗೆ ಇನ್ಮುಂದೆ ಹೊಸ ನಿಯಮಗಳು
ಫೋನ್ ಪೇ, ಗೂಗಲ್ ಪೇ ಬಳಕೆದಾರರು ಇದೀಗ ಹೊಸ ನಿಯಮಗಳಿಗೆ ಸಿದ್ಧರಾಗಬೇಕು. 2025 ಆಗಸ್ಟ್ 1ರಿಂದ ಜಾರಿಗೆ ಬರುವ ನಿಯಮಗಳು ಯುಪಿಐ ವ್ಯವಸ್ಥೆಯ ಸುರಕ್ಷತೆ ಹೆಚ್ಚಿಸಲು ನೆರವಾಗಲಿವೆ.

- ಬ್ಯಾಲೆನ್ಸ್ ಚೆಕ್ಗೆ ದಿನಕ್ಕೆ ಲಿಮಿಟ್
- ಟ್ರಾನ್ಸಾಕ್ಷನ್ ಸ್ಟೇಟಸ್ಗೂ ಹೊಸ ಗೈಡ್ಲೈನ್
- ಎಲ್ಲಾ UPI ಸೇವೆಗಳಿಗೆ ಆಡಿಟ್ ಕಡ್ಡಾಯ
ಡಿಜಿಟಲ್ ಪಾವತಿ ವ್ಯವಸ್ಥೆಯ (digital payments) ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಯುಗದಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಒಂದು ಪ್ರಮುಖ ಸಾಧನವಾಗಿದೆ.
ಹಣ ವರ್ಗಾವಣೆ ಅಥವಾ ಬಿಲ್ ಪಾವತಿಗೆ ಕೆಲವೇ ಕ್ಷಣಗಳಲ್ಲಿ ನೆರವಾಗುವ ಈ ಸೇವೆಯ ಮೇಲೆ ನಿರ್ಬಂಧ ಮತ್ತು ನಿಯಮಗಳನ್ನು ನೈಜಗೊಳಿಸಲು ‘ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ’ (NPCI) ಹೊಸ ಮಾರ್ಗಸೂಚಿಗಳನ್ನು (new rules) ಪ್ರಕಟಿಸಿದೆ.
ಈ ಹೊಸ ನಿಯಮಗಳು 2025 ಆಗಸ್ಟ್ 1 ರಿಂದ ದೇಶಾದ್ಯಂತ ಜಾರಿಗೆ ಬರಲಿವೆ. ಈ ನಿಯಮಗಳ ಮೂಲಕ ಯುಪಿಐ ಆ್ಯಪ್ಗಳ ದುರ್ಬಳಕೆಯನ್ನು ತಡೆಗಟ್ಟಲು ಹಾಗೂ ಸರ್ವರ್ ಮೇಲಿನ ಒತ್ತಡ ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಹೆಚ್ಚುವರಿ API ಕ್ವೆರಿಗಳಿಂದ ಆಗುವ ತೊಂದರೆಗಳನ್ನು ತಪ್ಪಿಸಲು ಈ ಕ್ರಮ ವಹಿಸಲಾಗಿದೆ ಎಂದು NPCI ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕಡಿಮೆ ಸಂಬಳಕ್ಕೂ ಪರ್ಸನಲ್ ಲೋನ್ ಸಿಗುತ್ತೆ! ಈ ಐಡಿಯಾ ಯಾರಿಗೂ ಹೇಳಬೇಡಿ
ನಿಮ್ಮ ಮೊಬೈಲ್ ನಂಬರ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ದಿನಕ್ಕೆ 25 ಬಾರಿ ಮಾತ್ರ ನೋಡಲು ಅವಕಾಶ ಇರುತ್ತದೆ. ಒಬ್ಬ ಬಳಕೆದಾರ ಎರಡು ಆ್ಯಪ್ಗಳನ್ನು ಬಳಸುತ್ತಿದ್ದರೆ ಪ್ರತಿ ಆ್ಯಪ್ಗೆ 25 ಬಾರಿ, ಒಟ್ಟಾರೆ 50 ಬಾರಿ ನೋಡಬಹುದು. ಇದರ ಹಿಂದಿರುವ ಉದ್ದೇಶ – ಅತಿಯಾದ ಮಾಹಿತಿ ಪತ್ತೆ ಪ್ರಯತ್ನಗಳಿಂದ ಉಂಟಾಗುವ ಸರ್ವರ್ ಜಾಮ್ ತಡೆಯುವುದು.
ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ವ್ಯಾಪಾರಿಗಳು ಅಥವಾ ಆರ್ಥಿಕ ಸಂಸ್ಥೆಗಳು ಈ ನಿಯಮದಿಂದ ಸ್ವಲ್ಪ ಅಡಚಣೆಗೆ ಗುರಿಯಾಗಬಹುದು. ಆದರೆ ಸಾಮಾನ್ಯ ಬಳಕೆದಾರರಿಗೆ ಈ ನಿಯಮಗಳು ಬಹುತೇಕ ತೊಂದರೆ ನೀಡುವುದಿಲ್ಲ. (phonepe), (Google Pay) ಬಳಕೆದಾರರು ಇದನ್ನು ಗಮನದಲ್ಲಿಡಬೇಕು.
ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು ದಿನಕ್ಕೆ ಗರಿಷ್ಠ 50 ಬಾರಿ ಅವಕಾಶ ನೀಡಲಾಗಿದೆ. ಇದರ ಜತೆಗೆ, PSPಗಳು ಟ್ರಾನ್ಸಾಕ್ಷನ್ ಸ್ಟೇಟಸ್ ಅನ್ನು ತಕ್ಷಣವೇ ಖಚಿತಪಡಿಸಿಕೊಳ್ಳದಂತೆ ತಡೆ ಮಾಡುವ ಹೊಸ ನಿಯಮವೂ ಜಾರಿಗೆ ಬರಲಿದೆ. ಈ ನಿಯಮದಿಂದ ಟ್ರಾನ್ಸಾಕ್ಷನ್ geccha ಕಡಿಮೆಯಾಗಲಿದ್ದು, ವ್ಯವಸ್ಥೆ ಹೆಚ್ಚು ಸ್ಥಿರವಾಗುತ್ತದೆ.
ಇದನ್ನೂ ಓದಿ: ಕೇವಲ 100 ರೂಪಾಯಿ ಕಟ್ಟಿ 2.14 ಲಕ್ಷ ಗಳಿಸಿ, ಬಂಪರ್ ಪೋಸ್ಟ್ ಆಫೀಸ್ ಸ್ಕೀಮ್
NPCI ಇದೀಗ ಎಲ್ಲಾ ಪೇಮೆಂಟ್ ಸೇವಾ ದಾತರಿಗೆ (Payment Service Providers) ಒಂದು ಆಡಿಟ್ ಪರೀಕ್ಷೆ (audit report) ಸಲ್ಲಿಸಲು ಆದೇಶಿಸಿದೆ. 2025 ಆಗಸ್ಟ್ 31ರೊಳಗೆ ಈ ವರದಿ ಸಲ್ಲಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ, ಸೇವೆ ಸ್ಥಗಿತ ಅಥವಾ ಹೊಸ ಬಳಕೆದಾರರ ನೋಂದಣಿಗೆ ನಿಷೇಧವನ್ನೂ ಎದುರಿಸಬೇಕಾಗಬಹುದು.
ಇದರೊಂದಿಗೆ, ಆ್ಯಪ್ಗಳಲ್ಲಿ ಆವಶ್ಯಕವಲ್ಲದ API ಕ್ವೆರಿಗಳನ್ನು ಕಡಿಮೆ ಮಾಡುವ ಉದ್ದೇಶವಿದೆ. ಈ ನಿಯಮಗಳು ಜಾರಿಗೆ ಬಂದರೆ ಯುಪಿಐ ವ್ಯವಸ್ಥೆಯ (UPI system) ಸ್ಥಿರತೆ ಮತ್ತು ಭದ್ರತೆ ಮತ್ತಷ್ಟು ಸುಧಾರಿಸಲಿದೆ ಎಂದು NPCI ತಿಳಿಸಿದೆ.
UPI Users Alert, New Rules from August 1




