Business News

ಮೃತಪಟ್ಟ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕಿದೆ? ಏನಿದೆ ಕಾನೂನು

Wife Property Rights : ಪತಿ ನಿಧನರಾದ ನಂತರ ಆತನ ಆಸ್ತಿಯಲ್ಲಿ ಪತ್ನಿಗೆ ಯಾವ ಹಕ್ಕುಗಳಿವೆ? ಹಿಂದು ಪರಂಪರೆ ಮತ್ತು ವಾರಸುದಾರರ ಹಕ್ಕುಗಳ ಬಗ್ಗೆ ಭಾರತದ ಕಾನೂನು ಏನು ಹೇಳುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

  • ಗಂಡ ಮೃತಪಟ್ಟ ನಂತರ ಆಸ್ತಿಯು ಪತ್ನಿಗೆ ಹೋಗುತ್ತದಾ?
  • ಹಿಂದು ವಾರಸತ್ವ ಕಾನೂನಿನ ಪ್ರಕಾರ ಪತ್ನಿಯ ಹಕ್ಕುಗಳ ವಿವರ.
  • ಅತ್ತೆ-ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕು ಇದೆಯಾ?

Wife Property Rights : ಗಂಡ ನಿಧನವಾದ ಬಳಿಕ ಆತನ ಆಸ್ತಿಯ ಮೇಲೆ ಪತ್ನಿಗೆ ಹಕ್ಕು ಇದೆಯಾ? ಈ ಪ್ರಶ್ನೆ ಹಲವರಿಗೆ ಇನ್ನೂ ಕಾಡುತ್ತದೆ. ಪ್ರತ್ಯೇಕವಾಗಿ ಪತಿ ಸಂಪಾದನೆಯ ಮೇಲೆ ಅವಲಂಬಿತವಾಗಿರುವ ಮಹಿಳೆಯಾದರೆ, ಆಸ್ತಿಯ ವಿಚಾರ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಹಾಗಾದರೆ ಕಾನೂನು ಏನು ಹೇಳುತ್ತದೆ?

ಇದನ್ನೂ ಓದಿ: ನಂ.1 ಬ್ರಾಂಡ್ ಆಗಿದ್ದ ನಿರ್ಮಾ ವಾಷಿಂಗ್ ಪೌಡರ್ ಕಣ್ಮರೆ ಆಗಲು ಕಾರಣ ಗೊತ್ತಾ

ಮೃತಪಟ್ಟ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕಿದೆ? ಏನಿದೆ ಕಾನೂನು

ಹಿಂದು ವಾರಸುದಾರರ ಹಕ್ಕುಗಳು

ಹಿಂದು ವಾರಸತ್ವ ಕಾನೂನು ಪ್ರಕಾರ, ಪತಿ ಸಾವಿಗೊಳಗಾದರೆ, ಆತನ ಆಸ್ತಿಯ ಮೊದಲ ವಾರಸುದಾರರಾಗಿರುವವರು ಪತ್ನಿ, ಮಕ್ಕಳು ಮತ್ತು ತಾಯಿ. ಆದರೆ, ಅತ್ತೆ-ಮಾವನ ಆಸ್ತಿಯ ವಿಚಾರದಲ್ಲಿ ಸೊಸೆಗೆ ನೇರ ಹಕ್ಕುಗಳಿಲ್ಲ.

ಪತಿ ಮೃತಪಟ್ಟರೆ, ಆತನ ಹೆಸರಿನ ಆಸ್ತಿಯು ಪತ್ನಿಗೆ ವರ್ಗಾವಣೆಯಾಗಲು ಯಾವುದೇ ತೊಂದರೆ ಇಲ್ಲ. ಆದರೆ, ಅತ್ತೆ ಅಥವಾ ಮಾವನ ಆಸ್ತಿ ಸ್ವಾಭಾವಿಕವಾಗಿ ಸೊಸೆಗೆ ಹೋಗುವುದಿಲ್ಲ. ಈ ಆಸ್ತಿ ಪತಿಯ ಹೆಸರಿಗೆ ಬಂದ ನಂತರ ಮಾತ್ರ ಪತ್ನಿಗೆ ಹಕ್ಕು ಸಿಗುತ್ತದೆ.

ಇದನ್ನೂ ಓದಿ: ಎಟಿಎಂನಲ್ಲೇ ಗೋಲ್ಡ್ ಲೋನ್ ಸಿಗುತ್ತೆ, 10 ನಿಮಿಷದಲ್ಲಿ ಹಣ ನಿಮ್ಮ ಕೈ ಸೇರುತ್ತೆ

property-rules

ವಿಲ್ (Will) ಇಲ್ಲದಿದ್ದರೆ!

ಪತಿ ಅಥವಾ ಅವರ ಕುಟುಂಬದವರು ವಿಲ್ ಬರೆದಿಲ್ಲದಿದ್ದರೆ, ಆಸ್ತಿಯು ನೈಸರ್ಗಿಕ ವಾರಸುದಾರರಿಗೆ ಹಂಚಲಾಗುತ್ತದೆ. ಇದು ಮೊದಲಿಗೆ ಪತ್ನಿ, ಮಕ್ಕಳು ಮತ್ತು ತಾಯಿಗೆ ವಿತರಣೆಯಾಗುತ್ತದೆ. ಆದರೆ, ವಿಲ್ ನಲ್ಲಿ ಬೇರೆಯವರ ಹೆಸರನ್ನು ಉಲ್ಲೇಖಿಸಿದರೆ, ಪತ್ನಿಯ ಹಕ್ಕು ಕಡಿಮೆಯಾಗಬಹುದು.

ಅತ್ತೆ-ಮಾವನ ಆಸ್ತಿಯ ಮೇಲೆ ಹಕ್ಕು ಇದೆಯಾ?

ಸಾಮಾನ್ಯವಾಗಿ, ಅತ್ತೆ-ಮಾವನ ಆಸ್ತಿ, ಪತಿಯ ಹೆಸರಿಗೆ ಬಂದಿಲ್ಲದಿದ್ದರೆ, ಪತ್ನಿಗೆ ಹಕ್ಕು ಸಿಗುವುದಿಲ್ಲ. ಆದರೆ, ಪತಿ ನಿಧನರಾದ ನಂತರ, ಆಸ್ತಿಯು ಅವರ ಹೆಸರಿಗೆ ಬಂದು ಹೋದರೆ, ಪತ್ನಿ ಅದರ ಒಡೆಯಳಾಗಬಹುದು.

ಇದನ್ನೂ ಓದಿ: ಎಸ್‌ಬಿಐ ಮಹಿಳಾ ಲೋನ್ ಸ್ಕೀಮ್ ಬಿಡುಗಡೆ, ಕ್ಷಣದಲ್ಲಿ ಸಾಲ ಮಂಜೂರು

Property Documents

ನ್ಯಾಯಾಲಯದ ಮಹತ್ವದ ತೀರ್ಪು

ಇದೆ ವಿಚಾರವಾಗಿ ಛತ್ತೀಸ್‌ಗಢ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಆ ತೀರ್ಪಿನ ಪ್ರಕಾರ, ತನ್ನ ಜೀವನೋಪಾಯ ನಡೆಸಲು ಸಾಧ್ಯವಾಗದ ಮಹಿಳೆಯೊಬ್ಬಳು, ತನ್ನ ಮಾವನ ಆಸ್ತಿಯ ಮೇಲೆ ನಿರ್ಧಿಷ್ಟ ಪರಿಸ್ಥಿತಿಗಳಲ್ಲಿ ಹಕ್ಕು ಹೊಂದಬಹುದು ಎಂದು ಹೇಳಲಾಗಿದೆ.

ಹೀಗಾಗಿ, ಕಾನೂನು ಹಕ್ಕುಗಳ ಬಗ್ಗೆ ಸ್ಪಷ್ಟತೆ ಇರಬೇಕು. ಪತಿ ಅಥವಾ ಅವರ ಕುಟುಂಬ ಸದಸ್ಯರು ವಿಲ್ ಬರೆದಿದ್ದಾರಾ? ಆಸ್ತಿ ಯಾರ ಹೆಸರಿನಲ್ಲಿ ಇದೆ? ಎಂಬ ವಿಚಾರಗಳು ಪತ್ನಿಯ ಹಕ್ಕು ನಿರ್ಧಾರ ಮಾಡುವ ಪ್ರಮುಖ ಅಂಶಗಳಾಗಿವೆ.

What Are a Wife Property Rights After Husband Death

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories