ಎಸ್‌ಬಿಐ ಮಹಿಳಾ ಲೋನ್ ಸ್ಕೀಮ್ ಬಿಡುಗಡೆ, ಕ್ಷಣದಲ್ಲಿ ಸಾಲ ಮಂಜೂರು
SBI Loan Scheme : ಎಸ್‌ಬಿಐ ಮಹಿಳಾ ಲೋನ್ ಯೋಜನೆಯಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ಸುಲಭ ಸಾಲ ಪಡೆದುಕೊಳ್ಳಬಹುದು, ಇದು ಮಹಿಳೆಯರಿಗಾಗಿ ಸ್ಟೇಟ್ ಬ್ಯಾಂಕ್ ಹೊಸ ಯೋಜನೆ

- ಎಸ್‌ಬಿಐ ‘ಅಸ್ಮಿತ’ (Asmita) ಲೋನ್ ಪ್ರೊಡಕ್ಟ್ ಪರಿಚಯ
- ಯಾವುದೇ ಗ್ಯಾರಂಟಿ ಇಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಲೋನ್
- ಮಹಿಳಾ ಉದ್ಯಮಿಗಳಿಗೆ ವೇಗದ ಡಿಜಿಟಲ್ ಫೈನಾನ್ಸ್ ವ್ಯವಸ್ಥೆ
SBI Loan : ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೊಸ ‘ಅಸ್ಮಿತ’ ಲೋನ್ ಯೋಜನೆಯನ್ನು (SBI Loan Scheme) ಪರಿಚಯಿಸಿದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷವಾಗಿ ಈ ಹೊಸ ಕ್ರೆಡಿಟ್ ಸೌಲಭ್ಯವನ್ನು ಜಾರಿಗೆ ತಂದಿದ್ದು, ಯಾವುದೇ ಗ್ಯಾರಂಟಿ (Collateral) ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ಹಣಕಾಸು ನೆರವನ್ನು ಒದಗಿಸಲಿದೆ.
ಇದನ್ನೂ ಓದಿ: ದುಬೈಯಿಂದ ನೀವು ನಮ್ಮ ದೇಶಕ್ಕೆ ಎಷ್ಟು ಚಿನ್ನ ತರಬಹುದು ಗೋತ್ತಾ!
ಬ್ಯಾಂಕ್ ಹೊಸ ಹೆಜ್ಜೆ – ವೇಗದ ಲೋನ್ ಪ್ರಕ್ರಿಯೆ
SBI ಅಸ್ಮಿತ ಒಂದು ಡಿಜಿಟಲ್ SME ಲೋನ್ ಯೋಜನೆಯಾಗಿದ್ದು, ಅಪ್ಲಿಕೇಶನ್ ಪ್ರೊಸೆಸ್ ಸಂಪೂರ್ಣವಾಗಿ API (Application Programming Interface) ಎಕೋಸಿಸ್ಟಮ್‌ನ ಮೇಲೆ ಕಾರ್ಯನಿರ್ವಹಿಸುತ್ತದೆ.
ಇದು ಮಹಿಳಾ ಉದ್ಯಮಿಗಳಿಗೆ ವೇಗವಾಗಿ ಮತ್ತು ಸುಲಭವಾಗಿ ಹಣಕಾಸು ನೆರವನ್ನು ಒದಗಿಸಲು ನೆರವಾಗಲಿದೆ ಎಂದು SBI ಮ್ಯಾನೇಜಿಂಗ್ ಡೈರೆಕ್ಟರ್ ವಿನಯ್ ಟೋನ್ಸೇ ಹೇಳಿದ್ದಾರೆ.
ಬಳಕೆದಾರ ಸ್ನೇಹಿ ಪ್ರಕ್ರಿಯೆ
ಈ ಯೋಜನೆಯಲ್ಲಿ ಲೋನ್ ಪಡೆಯಲು ಆಸಕ್ತಿ ಇರುವವರು ತಮ್ಮ GSTIN, ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಕ್ರೆಡಿಟ್ ಇನ್ಫರ್ಮೇಶನ್ ಕಂಪನಿಗಳ (CIC) ಡೇಟಾ ಬಳಸಬಹುದು. ಇದರಿಂದ ದಾಖಲೆ ಪರಿಶೀಲನೆಯ (Verification) ಅಗತ್ಯ ಕಡಿಮೆಯಾಗುತ್ತದೆ.
ಇದನ್ನೂ ಓದಿ: 5 ಪೋಸ್ಟ್ ಆಫೀಸ್ ಬಂಪರ್ ಯೋಜನೆಗಳು! ಪ್ರತಿದಿನ 1000 ಗಳಿಸುವ ಅವಕಾಶ
ವಿಶೇಷ ಅನುಕೂಲಗಳು – ‘ನಾರಿ ಶಕ್ತಿ’ ಪ್ಲಾಟಿನಂ ಡೆಬಿಟ್ ಕಾರ್ಡ್
ಈ ಹೊಸ ಯೋಜನೆಯೊಂದಿಗೆ SBI ‘ನಾರಿ ಶಕ್ತಿ’ ಪ್ಲಾಟಿನಂ ಡೆಬಿಟ್ ಕಾರ್ಡ್ (Debit Card) ಅನ್ನು ಸಹ ಪರಿಚಯಿಸಿದೆ. 100% ರಿಸೈಕಲ್ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಈ ಕಾರ್ಡ್ ಮಹಿಳೆಯರಿಗೆ ಶಾಪಿಂಗ್, ಬಿಮಾ, ಲೈಫ್‌ಸ್ಟೈಲ್ ಹಾಗೂ ಟ್ರಾವೆಲ್ ಸೌಲಭ್ಯಗಳನ್ನು ಒದಗಿಸುತ್ತದೆ.
ಇಂಡಸ್ಟ್ರಿ ವರದಿ – ಮಹಿಳೆಯರ ಬಿಸಿನೆಸ್ ಲೋನ್ ಪ್ರಿಯಾರಿಟಿ ಕಡಿಮೆ
ಟ್ರಾನ್ಸ್‌ಯುನಿಯನ್ ಸಿಬಿಲ್ (TransUnion CIBIL) ವರದಿ ಪ್ರಕಾರ, ಮಹಿಳೆಯರು ಬಿಸಿನೆಸ್ ಲೋನ್‌ಗಳಿಗೆ (Business Loan) ಕಡಿಮೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಒಟ್ಟು ಮಹಿಳಾ ಸಾಲಗಳಲ್ಲಿ ಕೇವಲ 3% ಮಾತ್ರ ಬಿಸಿನೆಸ್ ಉದ್ದೇಶಕ್ಕೆ ಪಡೆಯಲಾಗುತ್ತವೆ. ಇದನ್ನೇ ಮನಗಂಡು SBI ಈ ಹೊಸ ಫಿನಾನ್ಸಿಂಗ್ ಯೋಜನೆಯನ್ನು ರೂಪಿಸಿದೆ.
ಇದನ್ನೂ ಓದಿ: ಚಿನ್ನ ಅಡವಿಟ್ಟರೂ ಬ್ಯಾಂಕ್ ಕೊಡಲ್ಲ ಸಾಲ! ನಿಯಮಗಳು ಬಿಗಿ, ಹೊಸ ರೂಲ್ಸ್
ಅಸ್ಮಿತ ಯೋಜನೆಯ ಅಡಿಯಲ್ಲಿ ಪ್ರಮುಖ ಮಹಿಳಾ ಉದ್ಯಮಿಗಳನ್ನು ಗುರುತಿಸಿ, ಅವರಿಗಾಗಿ ಉಚಿತ ಮ್ಯಾನೇಜ್‌ಮೆಂಟ್ ಮತ್ತು ಎಂಟರ್‌ಪ್ರೈನರ್‌ಶಿಪ್ ತರಬೇತಿಯನ್ನು ನೀಡಲು SBI ಮುಂದಾಗಿದೆ. ಇದರಿಂದ ಮಹಿಳಾ ಉದ್ಯಮಿಗಳಿಗೆ ಉನ್ನತ ಮಟ್ಟದ ಮಾರ್ಗದರ್ಶನ ದೊರಕಲಿದೆ.
SBI Special Loan Scheme for Women Entrepreneurs





