5 ಪೋಸ್ಟ್ ಆಫೀಸ್ ಬಂಪರ್ ಯೋಜನೆಗಳು! ಪ್ರತಿದಿನ 1000 ಗಳಿಸುವ ಅವಕಾಶ
ಕೇವಲ ಈ 5 ಪೋಸ್ಟ್ ಆಫೀಸ್ ಪ್ಲ್ಯಾನ್ ಗಳಲ್ಲಿ ಹೂಡಿಕೆ ಮಾಡಿ, ವಾರ್ಷಿಕ ₹1.5 ಲಕ್ಷದಷ್ಟು ತೆರಿಗೆ ಉಳಿಸಿ! ಕೇಂದ್ರ ಸರ್ಕಾರದ ಭರವಸೆಯಿಂದ ನೀವು ಹೂಡಿಸಿದ ಹಣ ಸಂಪೂರ್ಣ ಸುರಕ್ಷಿತ

- ಪೋಸ್ಟ್ ಆಫೀಸ್ ಯೋಜನೆಗಳು ಸುರಕ್ಷಿತ ಹೂಡಿಕೆ ಮಾರ್ಗ
- ಕಡಿಮೆ ಹೂಡಿಕೆ, ಗರಿಷ್ಠ ಲಾಭ, ತೆರಿಗೆ ಉಳಿತಾಯವಿರುವ ಆಯ್ಕೆ
- ಕೇಂದ್ರ ಸರ್ಕಾರದ ಭರವಸೆ – ನೀವು ಹೂಡಿಸಿದ ಹಣ ಸಂಪೂರ್ಣ ಸುರಕ್ಷಿತ!
Savings Scheme : ಹಣ ಉಳಿತಾಯಕ್ಕೆ ಪೋಸ್ಟ್ ಆಫೀಸ್ ನಲ್ಲಿ (Post Office Schemes) ಹಲವಾರು ಆಯ್ಕೆಗಳಿವೆ. ಜೊತೆಗೆ, ಹೆಚ್ಚಿನ ಜನರು ಸುರಕ್ಷಿತ ಮತ್ತು ಖಾತ್ರಿ ಆದಾಯವನ್ನು ನೀಡುವ ಪೋಸ್ಟ್ ಆಫೀಸ್ ಯೋಜನೆಗಳತ್ತ ಹೆಚ್ಚು ಆಸಕ್ತಿ ತೋರುತ್ತಾರೆ. ಈ ಯೋಜನೆಗಳು ಕೇವಲ ಉಳಿತಾಯ ಮಾತ್ರವಲ್ಲ, ತೆರಿಗೆ ಉಳಿತಾಯದ (Tax Saving) ಅವಕಾಶವನ್ನೂ ನೀಡುತ್ತವೆ.
ಪೋಸ್ಟ್ ಆಫೀಸ್ ಯೋಜನೆಗಳು ಕಡಿಮೆ ಮೊತ್ತದಿಂದ ಆರಂಭಿಸಿ ಗರಿಷ್ಠ ಹೂಡಿಕೆ ಮಾಡುವವರಿಗೂ ಸೂಕ್ತವಾಗಿದೆ. ಮುಖ್ಯವಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ನ್ಯಾಷನಲ್ ಸೇವಿಂಗ್ ಸರ್ಕರ್ಟಿಫಿಕೇಟ್ (NSC), ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ (SCSS), ಸುಕನ್ಯಾ ಸಮೃದ್ಧಿ ಯೋಜನೆ (SSY) ಹಾಗೂ 5 ವರ್ಷಗಳ ಟೈಮ್ ಡಿಪಾಜಿಟ್ (POTD) ಇವು ಆರ್ಥಿಕ ಭದ್ರತೆಯ ಜೊತೆಗೆ ತೆರಿಗೆ ಉಳಿತಾಯವನ್ನೂ ನೀಡುತ್ತವೆ.
ಇದನ್ನೂ ಓದಿ: Gold Price: ಬೆಳ್ಳಂಬೆಳಗ್ಗೆ ಚಿನ್ನದ ಬೆಲೆ ಕುಸಿತ! ಮತ್ತೆ ಹೆಚ್ಚಾಗೋ ಮುನ್ನ ಖರೀದಿಸಿ
PPF – ನಿಮ್ಮ ಭವಿಷ್ಯದ ಭದ್ರತಾ ಗುತ್ತಿಗೆ!
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund – PPF) ಯೋಜನೆ ಹೂಡಿಕೆದಾರರಿಗೆ ಭದ್ರತೆ ಮತ್ತು ದೀರ್ಘಕಾಲೀನ ಹೂಡಿಕೆಯ ಒಂದು ಉತ್ತಮ ಆಯ್ಕೆ. ಕನಿಷ್ಠ ₹500 ರಿಂದ ಪ್ರಾರಂಭಿಸಿ, ವರ್ಷಕ್ಕೆ ₹1.5 ಲಕ್ಷ ವರೆಗೆ ಹೂಡಿಕೆ ಮಾಡಬಹುದು. ಸದ್ಯದಲ್ಲಿನ ಬಡ್ಡಿದರ 7.1% ಆಗಿದ್ದು, ಸಂಪೂರ್ಣ ತೆರಿಗೆ ಮುಕ್ತ (Tax-Free Returns) ಲಾಭ ನೀಡುತ್ತದೆ.
NSC – ಕಡಿಮೆ ಹೂಡಿಕೆ, ಖಾತ್ರಿ ಆದಾಯ!
ನ್ಯಾಷನಲ್ ಸೇವಿಂಗ್ ಸರ್ಕರ್ಟಿಫಿಕೇಟ್ (National Savings Certificate – NSC) ಯೋಜನೆಯು ವರ್ಷಕ್ಕೆ 7.7% ಬಡ್ಡಿದರ ನೀಡುತ್ತಿದ್ದು, ಇದರಲ್ಲಿ ಹೂಡಿಕೆಯು 5 ವರ್ಷಗಳ ಬಳಿಕ ಪರಿಪಕ್ವವಾಗುತ್ತದೆ. ಈ ಯೋಜನೆಯೂ 80C ಸೆಕ್ಷನ್ ಅಡಿಯಲ್ಲಿ ತೆರಿಗೆ ಉಳಿತಾಯ ನೀಡುತ್ತದೆ.
ಇದನ್ನೂ ಓದಿ : ಚಿನ್ನ ಅಡವಿಟ್ಟರೂ ಬ್ಯಾಂಕ್ ಕೊಡಲ್ಲ ಸಾಲ! ನಿಯಮಗಳು ಬಿಗಿ, ಹೊಸ ರೂಲ್ಸ್
SSY – ಮಕ್ಕಳ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ!
ಮಗಳ ಭವಿಷ್ಯದ ಭದ್ರತೆಗಾಗಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana – SSY) ಅತ್ಯುತ್ತಮ ಯೋಜನೆ. ಕನಿಷ್ಠ ₹250 ಮತ್ತು ಗರಿಷ್ಠ ₹1.5 ಲಕ್ಷ ಹೂಡಿಕೆ ಮಾಡಬಹುದು. ಇದಕ್ಕೆ 8.2% ಬಡ್ಡಿದರ ಲಭ್ಯವಿದ್ದು, ತೆರಿಗೆ ಮುಕ್ತ ಲಾಭ ನೀಡುತ್ತದೆ.
SCSS – ಹಿರಿಯ ನಾಗರಿಕರಿಗೆ ಖಾತ್ರಿ ಆದಾಯ!
60 ವರ್ಷ ಮೇಲ್ಪಟ್ಟವರಿಗೆ ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ (Senior Citizens Saving Scheme – SCSS) ಅತ್ಯುತ್ತಮ ಆಯ್ಕೆ. 8.2% ಬಡ್ಡಿದರವನ್ನು ನೀಡುವ ಈ ಯೋಜನೆಯಲ್ಲಿ ಗರಿಷ್ಠ ₹30 ಲಕ್ಷವರೆಗೆ ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಲೋನ್ ಬೇಕು, ಆದ್ರೆ ಬಡ್ಡಿ ಕಡಿಮೆ ಇರಬೇಕು ಅನ್ನೋದಾದ್ರೆ ಈ ರೀತಿ ಮಾಡಿ
5 Year POTD – ಕಡಿಮೆ ಸಮಯದಲ್ಲಿ ಹೆಚ್ಚು ಲಾಭ!
ಈ 5 ವರ್ಷಗಳ ಪೋಸ್ಟ್ ಆಫೀಸ್ ಟೈಮ್ ಡಿಪಾಜಿಟ್ (Post Office Time Deposit – POTD) ಯೋಜನೆ 7.5% ಬಡ್ಡಿದರವನ್ನು ನೀಡುತ್ತದೆ. ಕೇವಲ ₹1000 ಇಂದ ಪ್ರಾರಂಭಿಸಬಹುದು ಮತ್ತು ಇದು 80C ಸೆಕ್ಷನ್ ಅಡಿಯಲ್ಲಿ ತೆರಿಗೆ ಉಳಿತಾಯ ನೀಡುತ್ತದೆ.
ಪೋಸ್ಟ್ ಆಫೀಸ್ ಯೋಜನೆಗಳು ಪಕ್ಕಾ ಸುರಕ್ಷಿತ. ಆದರೂ ಹೂಡಿಕೆ ಮಾಡೋ ಮುನ್ನ ಪ್ರಸ್ತುತ ಬಡ್ಡಿದರ ಮತ್ತು ನಿಯಮಗಳನ್ನು ಪರಿಶೀಲಿಸೋದು ಉತ್ತಮ! ನೀವು ಯಾವ ಯೋಜನೆ ಆಯ್ಕೆ ಮಾಡ್ತೀರಾ?
Best Post Office Schemes to Save Tax





