ಲೋನ್ ಬೇಕು, ಆದ್ರೆ ಬಡ್ಡಿ ಕಡಿಮೆ ಇರಬೇಕು ಅನ್ನೋದಾದ್ರೆ ಈ ರೀತಿ ಮಾಡಿ
Personal Loan : ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ, ಲೋನ್ ಬಡ್ಡಿದರ ಕಡಿಮೆಯಾಗಬಹುದು. ಅನವಶ್ಯಕ ಚಾರ್ಜ್‌ಗಳನ್ನು ತಪ್ಪಿಸಲು ಹೊಸ ಲೋನ್ ಆಯ್ಕೆ ಮಾಡುವ ಮುನ್ನ ಇವುಗಳನ್ನು ಪರಿಶೀಲಿಸಿ.
- 750+ ಕ್ರೆಡಿಟ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿದರ ಲಾಭ
- ಬ್ಯಾಂಕ್, NBFC ಹಾಗೂ ಡಿಜಿಟಲ್ ಲೋನ್ ಆಫರ್‌ಗಳ ಹೋಲಿಕೆ ಅಗತ್ಯ
- ಪ್ರೀ-ಅಪ್ರೂವ್ಡ್ ಲೋನ್ ಆಯ್ಕೆ ಹೆಚ್ಚು ಅನುಕೂಲ
Personal Loan : ನಾವು ಆಕಸ್ಮಿಕ ಖರ್ಚುಗಳು, ಮನೆ ಖರೀದಿ ಅಥವಾ ಇತರ ಆರ್ಥಿಕ ಅವಶ್ಯಕತೆಗಳಿಗೆ ಪರ್ಸನಲ್ ಲೋನ್ ತೆಗೆದುಕೊಳ್ಳುವಂತಾಗುತ್ತದೆ. ಈ ಸಂದರ್ಭದಲ್ಲಿ ಕಡಿಮೆ ಬಡ್ಡಿದರದಲ್ಲಿ ಲೋನ್ ದೊರಕಿದರೆ ಹೆಚ್ಚು ಲಾಭ.
ಆದರೆ ಯಾವಾಗಲೂ ಹಾಗೆ ಆಗೋದಿಲ್ಲ, ಸರಿಯಾದ ತಂತ್ರ ಬಳಸಿದರೆ ಮಾತ್ರ ಕಡಿಮೆ ಬಡ್ಡಿದರದಲ್ಲಿ ಲೋನ್ ದೊರೆಯಬಹುದು.
ಮೊದಲೇ, ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿ ನಿರ್ವಹಿಸಿದರೆ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಲೋನ್ ನೀಡಲು ಸಹಕರಿಸುತ್ತವೆ. 750 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ಇದ್ದರೆ ನಿಮಗೆ ಬಡ್ಡಿದರದಲ್ಲಿ ರಿಯಾಯಿತಿ ದೊರೆಯಬಹುದು.
ಹಾಗಾಗಿ, (Credit Card) ಬಿಲ್ಲುಗಳನ್ನು ಸರಿಯಾದ ಸಮಯಕ್ಕೆ ಪಾವತಿಸುವುದು, ಸಾಲದ ಪಾವತಿ (EMI) ಗಳನ್ನು ತಪ್ಪದೆ ಕಟ್ಟುವುದು ಬಹಳ ಮುಖ್ಯ.
ಇದನ್ನೂ ಓದಿ: ಬಡವರಿಗಾಗಿ ಬಂತು ಜಿಯೋ ಎಲೆಕ್ಟ್ರಿಕ್ ಸೈಕಲ್, ಕಡಿಮೆ ಬೆಲೆಗೆ ಹೈ ಮೈಲೇಜ್!
ಸಮೀಕ್ಷೆ ಮಾಡುವುದು ಮತ್ತೊಂದು ಮುಖ್ಯ ಅಂಶ. ಒಂದೇ ಬ್ಯಾಂಕ್ ಅಥವಾ NBFC ಗೆ ಹೋಗಿ ಲೋನ್ ತೆಗೆದುಕೊಳ್ಳುವುದನ್ನು ಬಿಟ್ಟು, ಬೇರೆ ಬೇರೆ ಲೋನ್ ಆಫರ್‌ಗಳನ್ನು ಹೋಲಿಸಿ, ಕಡಿಮೆ ಬಡ್ಡಿದರ ಮತ್ತು ಅನುಕೂಲಕರ ನಿಬಂಧನೆಗಳನ್ನು ಒದಗಿಸುವ ಸಂಸ್ಥೆಯನ್ನು ಆಯ್ಕೆ ಮಾಡಬೇಕು.
ಡಿಜಿಟಲ್ ಲೋನ್ (Digital Loan) ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲವು ಆಕರ್ಷಕ ಆಫರ್‌ಗಳೂ ಇರುತ್ತವೆ, ಅವುಗಳನ್ನೂ ಪರಿಶೀಲಿಸಿ.
ಕಡಿಮೆ ಅವಧಿಯ ಸಾಲ ಆಯ್ಕೆ ಮಾಡಿದರೆ ಒಟ್ಟು ಬಡ್ಡಿ ಖರ್ಚು ಕಡಿಮೆಯಾಗುತ್ತದೆ. ಆದರೆ EMI ಜಾಸ್ತಿ ಆಗಬಹುದು, ಹಾಗಾಗಿ ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿ ಆಯ್ಕೆ ಮಾಡಬೇಕು. ಜೊತೆಗೆ, ಕೆಲವೊಂದು ಬ್ಯಾಂಕುಗಳು ಫೆಸ್ಟಿವಲ್ ಆಫರ್‌ಗಳಡಿ (Discount) ಕಡಿಮೆ ಬಡ್ಡಿದರದಲ್ಲಿ ಲೋನ್ ನೀಡುತ್ತವೆ, ಇವುಗಳನ್ನು ಗಮನದಲ್ಲಿಡುವುದು ಒಳ್ಳೆಯದು.
ಅನಗತ್ಯ ಸೇವಾ ಶುಲ್ಕ (Processing Fees) ಹಾಗೂ ಬಡ್ಡಿದರ ಅಡಿಯಲ್ಲಿ ಸ್ಮಾಲ್ ಪ್ರಿಂಟ್‌ನಲ್ಲಿ ಏನಾದರೂ ಅಡಗಿರುವ ಚಾರ್ಜ್‌ಗಳಿವೆ ಎಂದಾದರೆ ಅವುಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.
ಇದನ್ನೂ ಓದಿ: ಇನ್ಮುಂದೆ ಚಿನ್ನ ಅಡವಿಟ್ಟು ಸಾಲ ಪಡೆಯೋಕು ಮುನ್ನ ಈ ವಿಚಾರಗಳು ಗೊತ್ತಿರಲಿ
ಕೆಲವೊಮ್ಮೆ ಲೋನ್ ಜೊತೆ ಸಂಬಂಧ ಇಲ್ಲದ (Insurance) ಯೋಜನೆಗಳನ್ನು ಆಡ್ ಮಾಡಲಾಗಬಹುದು, ಅದನ್ನು ತಪ್ಪಿಸಿಕೊಳ್ಳುವುದು ಉತ್ತಮ.
ಅಂತಿಮವಾಗಿ, ನೀವು ಈಗಾಗಲೇ ಹೆಚ್ಚಿನ ಬಡ್ಡಿದರದಲ್ಲಿ ಲೋನ್ (Personal Loan) ಪಡೆದಿದ್ದರೆ, ಬಡ್ಡಿದರ ಕಡಿಮೆ ಇರುವ ಬ್ಯಾಂಕ್‌ಗೆ (Balance Transfer) ಮಾಡಬಹುದು. ಇದು ಕಡಿಮೆ ಬಡ್ಡಿದರ ಲಾಭ ಪಡೆಯಲು ಸಹಾಯ ಮಾಡುತ್ತದೆ.
How to Get a Low-Interest Personal Loan
Our Whatsapp Channel is Live Now 👇