ಬಡವರಿಗಾಗಿ ಬಂತು ಜಿಯೋ ಎಲೆಕ್ಟ್ರಿಕ್ ಸೈಕಲ್, ಕಡಿಮೆ ಬೆಲೆಗೆ ಹೈ ಮೈಲೇಜ್!
ಸೋಶಿಯಲ್ ಮೀಡಿಯಾದಲ್ಲಿ ಜಿಯೋ ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಧಿಕೃತ ಮಾಹಿತಿ ಇನ್ನೂ ಬಾರದಿದ್ದರೂ, ಈ ಸೈಕಲ್ ಆಕರ್ಷಕ ಸ್ಪೆಕ್ಸ್ ಹೊಂದಿರುವುದಾಗಿ ಮಾತುಗಳು ಕೇಳಿಬಂದಿವೆ.
- ಜಿಯೋ ಎಲೆಕ್ಟ್ರಿಕ್ ಸೈಕಲ್ 400 ಕಿಮೀ ರೇಂಜ್ ನೀಡಲಿದೆ ಎಂದು ಸುದ್ದಿ
- 30 ಸಾವಿರದೊಳಗೆ ಪ್ರಾರಂಭಿಕ ಬೆಲೆಯಿಂದ ಬರುವ ಸಾಧ್ಯತೆ
- ಜೀಪಿಎಸ್, ಬ್ಲೂಟೂತ್, ಡಿಜಿಟಲ್ ಡಿಸ್ಪ್ಲೇ ಮೊದಲಾದ ಸ್ಮಾರ್ಟ್ ಫೀಚರ್ಸ್
Jio Electric Bicycle : ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದಿನದಿಂದ ದಿನಕ್ಕೆ ಏರುತ್ತಿದೆ. ದೊಡ್ಡ ಕಂಪನಿಗಳಿಂದ ಹಿಡಿದು ಸ್ಟಾರ್ಟಪ್‌ಗಳ ತನಕ ಎಲ್ಲರೂ ಎಲೆಕ್ಟ್ರಿಕ್ ಬೈಕ್ (Electric Bike), ಸ್ಕೂಟರ್ (Electric Scooter) ಬಿಡುಗಡೆ ಮಾಡುತ್ತಿರುವಾಗ, ಎಲೆಕ್ಟ್ರಿಕ್ ಸೈಕಲ್‌ಗಳಿಗೂ ಗರಿಷ್ಠ ಬೇಡಿಕೆ ಎದುರಾಗುತ್ತಿದೆ.
ಇಂತಹ ಹಿನ್ನಲೆಯಲ್ಲಿ, ಜಿಯೋ ಕೂಡಾ ತಮ್ಮದೇ ಆದ ಎಲೆಕ್ಟ್ರಿಕ್ ಸೈಕಲ್ (Electric Cycle) ತರಲು ಸಜ್ಜಾಗುತ್ತಿದೆಯೇ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: ಫೋನ್‌ಪೇ ಬಳಸಿ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಿ! ಬಂಪರ್ ಕೊಡುಗೆ
ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತಂದ ಜಿಯೋ, ಈಗ ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಲಿದೆಯೇ? ಇನ್ನೂ ಅಧಿಕೃತ ಘೋಷಣೆ ಬಂದಿಲ್ಲ, ಆದರೆ ಸೋಶಿಯಲ್ ಮೀಡಿಯಾದಲ್ಲಿ 2025ರ ವೇಳೆಗೆ ಜಿಯೋ ಇ-ಸೈಕಲ್ 400 ಕಿಮೀ (Range) ನೀಡಲಿದೆ, ಮತ್ತು 30 ಸಾವಿರ ರೂ. ಪ್ರಾರಂಭಿಕ ದರದಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ವೈರಲ್ ಆಗಿದೆ.
ಹೆಚ್ಚಿನ ಮಾಹಿತಿಯ ಪ್ರಕಾರ, ಈ ಸೈಕಲ್ ರಿಮೂವ್ ಮಾಡಬಹುದಾದ ಲಿಥಿಯಂ-ಅಯಾನ್ ಬ್ಯಾಟರಿ ಹೊಂದಿರಬಹುದು. ಇದು (Fast Charging) ಗೆ ಸಹಾಯ ಮಾಡುತ್ತೆ, ಪರಿಣಾಮ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಿ ಸೈಕಲ್ ಬಳಸಲು ಅನುಕೂಲ.
ಇದನ್ನೂ ಓದಿ: ಇನ್ಮುಂದೆ ಚಿನ್ನ ಅಡವಿಟ್ಟು ಸಾಲ ಪಡೆಯೋಕು ಮುನ್ನ ಈ ವಿಚಾರಗಳು ಗೊತ್ತಿರಲಿ
ಜೊತೆಗೆ, ಡಿಜಿಟಲ್ ಡಿಸ್ಪ್ಲೇ (Display), ಬ್ಲೂಟೂತ್, ಜಿಪಿಎಸ್ (GPS Tracking), ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಸೈಕಲ್ ಅನ್ನು ಸಂಪರ್ಕಿಸಿ ನಿಯಂತ್ರಿಸುವ ಸೌಲಭ್ಯ ನೀಡಬಹುದು.
ಇದನ್ನೂ ಓದಿ: ಎಸ್‌ಬಿಐ ಗ್ರಾಹಕರಿಗೆ ಹೊಸ ಸ್ಕೀಮ್! ಸಿಗುತ್ತೆ ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿ
ನಾವು ಪ್ರತಿದಿನ ಕೆಲಸಕ್ಕೆ ಹೋಗಲು ಬಳಸುವಂತಹ ಸರಳ ಮತ್ತು ಸುಲಭ ಸಂಚಾರದ ಆಯ್ಕೆಯಾಗುವ ಈ ಸೈಕಲ್, ಪೆಟ್ರೋಲ್ ದರ ಹೆಚ್ಚಳದ ಹೊಡೆತಕ್ಕೆ ಉತ್ತಮ ಪರ್ಯಾಯವಾಗಬಹುದು. ಆದರೆ, ಜಿಯೋ ಈವೀ ಕ್ಷೇತ್ರಕ್ಕೂ ಅದೇ ರೀತಿಯ ಕ್ರಾಂತಿ ತರಬಹುದೇ ಎಂಬುದನ್ನು ನೋಡಬೇಕಿದೆ.
Jio Electric Bicycle, Budget EV with Smart Features