ಅರ್ಜೆಂಟ್ ಪರ್ಸನಲ್ ಲೋನ್ ಬೇಕಾ? ಈ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿ ಇದೆ ನೋಡಿ
ತುರ್ತು ಅವಶ್ಯಕತೆಗಾಗಿ ಪರ್ಸನಲ್ ಲೋನ್ ಪಡೆಯಲು ಯೋಚಿಸುತ್ತಿದ್ದೀರಾ? ಹಾಗಾದರೆ ಬೇಗ ನಿರ್ಧಾರ ಮಾಡಬೇಡಿ, ವಿವಿಧ ಬ್ಯಾಂಕ್‌ಗಳ ಬಡ್ಡಿ ದರಗಳು ಮತ್ತು ಶುಲ್ಕಗಳನ್ನು ಹೋಲಿಸಿ ತಿಳಿದುಕೊಳ್ಳಿ.

Personal Loan: ಹಣದ ಅವಶ್ಯಕತೆ ಯಾರಿಗಿಲ್ಲ ಹೇಳಿ? ತುರ್ತು ಖರ್ಚುಗಳು ಬಂದಾಗ ಹಲವರು ಹೆಚ್ಚು ಬಡ್ಡಿಗೆ ಸಾಲ ಪಡೆಯುವ ಪರಿಸ್ಥಿತಿಗೆ ಸಿಲುಕುತ್ತಾರೆ. ಆದರೆ ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, ಮೊದಲು ವಿವಿಧ ಬ್ಯಾಂಕ್‌ಗಳ ಬಡ್ಡಿ ದರ, EMI ಮತ್ತು ಪ್ರಾಸೆಸಿಂಗ್ ಶುಲ್ಕಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.
ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಾರ್ಷಿಕ 10.05% ರಿಂದ 15.05% ರಷ್ಟು ಬಡ್ಡಿ ವಿಧಿಸುತ್ತಿದೆ. ಈ ದರಗಳು ಆಗಸ್ಟ್ 15, 2025ರಿಂದ ಅನ್ವಯವಾಗುತ್ತಿವೆ. ಪ್ರಾಸೆಸಿಂಗ್ ಚಾರ್ಜ್ ರೂ.1,000ರಿಂದ ರೂ.15,000ರ ತನಕ ಇರುತ್ತದೆ, ಇದು ಸಾಲದ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ.
ಅದೇ ರೀತಿ ಬ್ಯಾಂಕ್ ಆಫ್ ಬರೋಡಾ 10.40% ರಿಂದ 15.75% ವರೆಗೆ ಬಡ್ಡಿ ವಿಧಿಸುತ್ತಿದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 10.75% ರಿಂದ 14.45% ವರೆಗೆ ಬಡ್ಡಿ ನಿಗದಿ ಪಡಿಸಿದೆ. ಈ ಸರ್ಕಾರೀ ಬ್ಯಾಂಕ್‌ಗಳು ಖಾಸಗಿ ಬ್ಯಾಂಕ್‌ಗಳಿಗಿಂತ ಸ್ವಲ್ಪ ಕಡಿಮೆ ಬಡ್ಡಿ ದರ ನೀಡುತ್ತವೆ.
ಪ್ರೈವೇಟ್ ಕ್ಷೇತ್ರದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ವಾರ್ಷಿಕ 9.99% ರಿಂದ 24% ವರೆಗೆ ಬಡ್ಡಿ ವಿಧಿಸುತ್ತಿದ್ದು, ಜೊತೆಗೆ ರೂ.6,500 ಪ್ರಾಸೆಸಿಂಗ್ ಫೀ ಮತ್ತು ಅದಕ್ಕೆ ಅನ್ವಯಿಸುವ ಜಿಎಸ್ಟಿ ವಸೂಲಿ ಮಾಡುತ್ತದೆ.
ಐಸಿಐಸಿಐ ಬ್ಯಾಂಕ್ ವಾರ್ಷಿಕ 10.60% ರಿಂದ 16.50% ವರೆಗೆ ಬಡ್ಡಿ ವಿಧಿಸುತ್ತಿದ್ದು, ರು. ಮೊತ್ತದ 2% ವರೆಗೆ ಪ್ರಾಸೆಸಿಂಗ್ ಫೀ ವಿಧಿಸುತ್ತದೆ. ಅದೇ ವೇಳೆ ಕೋಟಕ್ ಮಹೀಂದ್ರಾ ಬ್ಯಾಂಕ್ 9.98% ಬಡ್ಡಿಯಿಂದ ಪ್ರಾರಂಭಿಸಿ 5% ವರೆಗೆ ಪ್ರಾಸೆಸಿಂಗ್ ಫೀ ವಿಧಿಸುತ್ತದೆ.
ಇನ್ನೊಂದು ಪ್ರೈವೇಟ್ ಬ್ಯಾಂಕ್ ಫೆಡರಲ್ ಬ್ಯಾಂಕ್, ವಾರ್ಷಿಕ 11.99% ರಿಂದ 18.99% ವರೆಗೆ ಬಡ್ಡಿ ವಿಧಿಸುತ್ತಿದ್ದು, ಪ್ರಾಸೆಸಿಂಗ್ ಫೀ ಸಾಲದ ಮೊತ್ತದ 3% ವರೆಗೆ ಇರುತ್ತದೆ.
ಹೀಗಾಗಿ, ಪರ್ಸನಲ್ ಲೋನ್ ತೆಗೆದುಕೊಳ್ಳುವ ಮೊದಲು ತುರ್ತು ನಿರ್ಧಾರ ಮಾಡದೇ, ಎಲ್ಲಾ ಬ್ಯಾಂಕ್‌ಗಳ ಬಡ್ಡಿ ದರ ಮತ್ತು ಶುಲ್ಕಗಳನ್ನು ಹೋಲಿಸಿ, ನಿಮ್ಮ ಅಗತ್ಯಕ್ಕೆ ತಕ್ಕ ಸಾಲವನ್ನು ಆಯ್ಕೆಮಾಡುವುದು ಸೂಕ್ತ. ಸರಿಯಾದ ನಿರ್ಧಾರವು ನಿಮ್ಮ ಹಣಕಾಸು ಭಾರವನ್ನು ಕಡಿಮೆ ಮಾಡಬಹುದು.
Which Bank Offers the Lowest Personal Loan Interest



