ಮನೆಯಲ್ಲಿಯೇ ಕುಳಿತು ಕೆಲವೇ ನಿಮಿಷಗಳಲ್ಲಿ ಪಡೆಯಬಹುದು ಪ್ಯಾನ್ ಕಾರ್ಡ್; ಅಬ್ಬಾ! ಇಷ್ಟೊಂದು ಸುಲಭಾನಾ

ಆದಾಯ ತೆರಿಗೆ ಇಲಾಖೆ ಪ್ರತಿಯೊಬ್ಬರಿಗೂ ಪ್ಯಾನ್ ಕಾರ್ಡ್ (PAN Card) ನೀಡುತ್ತದೆ, ನಾವು ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಿದ್ದರೂ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ (Aadhaar Card) ಎರಡೂ ಬಹಳ ಮುಖ್ಯವಾಗಿರುತ್ತದೆ.

ಒಂದು ವೇಳೆ ಪ್ಯಾನ್ ಕಾರ್ಡ್ ಇಲ್ಲದೆ ಇದ್ದರೆ ಆದಾಯ ತೆರಿಗೆ ಸಂಬಂಧಪಟ್ಟ ಯಾವ ವ್ಯವಹಾರವನ್ನು ಕೂಡ ಮಾಡಲು ಸಾಧ್ಯವಿಲ್ಲ, ಹಾಗಾಗಿ 9 ಅಂಕೆಗಳ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಕೂಡ ನೀಡುತ್ತದೆ.

ಕೇವಲ 1,478 ರೂಪಾಯಿ ಪಾವತಿಸಿ ಈ ಸೂಪರ್ ಬೈಕ್ ನಿಮ್ಮದಾಗಿಸಿಕೊಳ್ಳಿ! ಕಡಿಮೆ ಇಎಂಐ ಆಪ್ಷನ್

ಸುಲಭವಾಗಿ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?

ಪ್ರತಿಯೊಂದು ಹಣಕಾಸು ವ್ಯವಹಾರಕ್ಕೆ ಪ್ಯಾನ್ ಕಾರ್ಡ್ (Pan Card) ಬೇಕೇ ಬೇಕು ಇತ್ತೀಚಿಗೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಪ್ಯಾನ್ ಕಾರ್ಡ್ ನಿಷ್ಕ್ರಿಯೆ ಕೂಡ ಗೊಳಿಸಲಾಗಿದೆ. ಈಗ ಇದನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು, ಜೊತೆಗೆ ಸರಿಯಾದ ಮಾಹಿತಿ ನೀಡಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಿ.

ಓಟಿಪಿ ಹಾಕಿದರೆ ಸಾಕು ಪಾನ್ ಕಾರ್ಡ್ ಸಿಗುತ್ತೆ

ಪ್ಯಾನ್ ಕಾರ್ಡ್ ಪಡೆದುಕೊಳ್ಳಲು ಮೊದಲು ನೀವು ಆದಾಯ ತೆರಿಗೆಯ ಅಧಿಕೃತ ವೆಬ್ಸೈಟ್ ಆಗಿರುವ www.incometaxindiaefiling.gov.in ಗೆ ಭೇಟಿ ನೀಡಿ. ಅಲ್ಲಿ ಹೊಸ ಪ್ಯಾನ್ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಬೇಕು. ಚೆಕ್ ಬಾಕ್ಸ್ ಕ್ಲಿಕ್ (Click) ಮಾಡುವ ಮೂಲಕ ದೃಢೀಕರಿಸಬೇಕು. ನಂತರ ಮುಂದಿನ ಪುಟಕ್ಕೆ ಹೋಗಲು ಕ್ಲಿಕ್ ಮಾಡಿ.

ಈಗ ನೀವು ಓಟಿಪಿ (OTP) ಅನ್ನು ಹಾಕಿ ನಾನು ನಿಯಮಗಳನ್ನು ಓದಿ ಮುಂದುವರೆಯಲು ಒಪ್ಪಿದ್ದೇನೆ ಎನ್ನುವ ದೃಢೀಕರಣದ ಮೇಲೆ ಕ್ಲಿಕ್ ಮಾಡಿ. ಈಗ ಆಧಾರ್ ಲಿಂಕ್ (Aadhaar Link) ಮಾಡಲಾಗಿರುವ ಮೊಬೈಲ್ ಸಂಖ್ಯೆಗೆ ಬಂದಿರುವ 6 ಅಂಕಿಗಳ ಓಟಿಪಿಯನ್ನು ನಮೂದಿಸಬೇಕು.

ನಿಮ್ಮ ಬಿಡುವಿನ ವೇಳೆ ಕುಳಿತಲ್ಲೇ ಸುಲಭವಾಗಿ ಗಳಿಸಬಹುದು 7 ಲಕ್ಷ ಆದಾಯ! ಯಾವ ಬ್ಯುಸಿನೆಸ್ ಗೊತ್ತಾ?

ನೀವು ಚೆಕ್ ಬಾಕ್ಸ್ ಆಯ್ಕೆ ಮಾಡಿ ಕೊಳ್ಳುವುದರ ಮೂಲಕ UIDAI ಜೊತೆಗೆ ಆಧಾರ ಮಾಹಿತಿಯನ್ನು ಪರಿಶೀಲಿಸಿಕೊಳ್ಳಲು ಸಾಧ್ಯ. ನಂತರ ಸ್ವೀಕರಿಸುತ್ತೇನೆ ಎನ್ನುವ ಚೆಕ್ ಬಾಕ್ಸ್ ಕ್ಲಿಕ್ ಮಾಡಿ ಮುಂದುವರಿಯಬೇಕು.

Pan Cardಇದರ ಜೊತೆಗೆ ಆಧಾರ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು ಸಂದೇಶ ಬರುತ್ತದೆ. ಬಳಕೆದಾರ ಐಡಿ ಹಾಗೂ ಪಾಸ್ವರ್ಡ್ ಜೊತೆಗೆ ಇ- ಫೈಲಿಂಗ್ ಪೋರ್ಟಲ್ ಗೆ ಲಾಗ್ ಇನ್ ಆಗಬೇಕು. ನಂತರ ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ePAN ಡೌನ್ಲೋಡ್ (Download) ಮಾಡಿಕೊಳ್ಳಬಹುದು ಅಥವಾ ಅದನ್ನು ಅಲ್ಲಿಯೇ ವೀಕ್ಷಿಸಬಹುದು.

ನೀವು ನಿಮ್ಮ ಈ ಫ್ಯಾನ್ ಸ್ಥಿತಿಯನ್ನು ನೋಡಲು ನಿಮ್ಮ 12 ಅಂಕೆಯ ಆಧಾರ ಸಂಖ್ಯೆಯನ್ನು ನಮೂದಿಸಿ ಬಳಿಕ ಅಲ್ಲಿ ಬರುವ ಓ ಟಿ ಪಿ ಯನ್ನು ನಮೂದಿಸಿದರೆ ಇ- ಪ್ಯಾನ್ ಸ್ಥಿತಿ ನೋಡಲು ಸಾಧ್ಯ.

ಸುಲಭವಾಗಿ ನೀವೇ ಎಟಿಎಂ ಪ್ರಾಂಚೈಸಿ ಆರಂಭಿಸಿ, ತಿಂಗಳಿಗೆ ಗಳಿಸಿ 90 ಸಾವಿರ ರೂಪಾಯಿ

ಪ್ಯಾನ್ ಕಾರ್ಡ್ ಆಗಾಗ ನವೀಕರಿಸಿಕೊಳ್ಳಬೇಕಾ?

ಈ ವಿಚಾರ ಹಲವರಿಗೆ ಗೊತ್ತಿರುವುದಿಲ್ಲ ಪ್ಯಾನ್ ಅನ್ನು ಆಗಾಗ ನವೀಕರಿಸಿಕೊಳ್ಳಬೇಕೆ ಅಥವಾ ಎಷ್ಟು ಸಮಯದವರೆಗೆ ಪ್ಯಾನ್ ಕಾರ್ಡ್ ಮಾನ್ಯವಾಗಿರುತ್ತದೆ ಎಂಬುದರ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ.

ಮಾಹಿತಿ ನೀಡುವುದಾದರೆ ಒಮ್ಮೆ ಪ್ಯಾನ್ ಕಾರ್ಡ್ ಪಡೆದುಕೊಂಡರೆ ಅದು ಜೀವಿತಾವಧಿವರೆಗೂ ಮಾನ್ಯವಾಗಿರುತ್ತದೆ. ಅಭಿವ್ಯಕ್ತಿಯ ಮರಣದ ನಂತರವಷ್ಟೇ ಆತನ ಪ್ಯಾನ್ ಕಾರ್ಡ್ ಅನ್ನು ರದ್ದುಪಡಿಸಲಾಗುವುದು. ಪಡೆದುಕೊಳ್ಳುವಾಗ ಸಿಕ್ಕ ಸಂಖ್ಯೆಯನ್ನು ಕೂಡ ಬದಲಾಯಿಸಲು ಸಾಧ್ಯವಿಲ್ಲ ಹಾಗೆಯೇ ಒಬ್ಬ ವ್ಯಕ್ತಿ ಒಂದು ಪ್ಯಾನ್ ಕಾರ್ಡ್ ಅನ್ನು ಮಾತ್ರ ಹೊಂದಿರಬಹುದು.

You can get PAN card in few minutes sitting at home

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories