ಬರೀ 60 ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್! ವಾಹ್ವ್ 100 ಕಿ.ಮೀ ಮೈಲೇಜ್
Electric Bike: ಒಮ್ಮೆ ಚಾರ್ಜ್ ಮಾಡಿದರೆ 100 ಕಿಮೀ ಮೈಲೇಜ್! ಸ್ವಂತ ಎಲೆಕ್ಟ್ರಿಕ್ ಬೈಕ್ ತಯಾರಿಸಿ ಐತಿಹಾಸಿಕ ಸಾಧನೆ ಮಾಡಿದ ಯುವಕ!
- ಗರಿಷ್ಠ 50 ಕಿಮೀ ವೇಗದಲ್ಲಿ ಚಲಿಸುವ ಇ-ಬೈಕ್
- ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಪ್ರಯಾಣ
- ಕೇವಲ ₹60,000 ವೆಚ್ಚದಲ್ಲಿ ತಯಾರಿಸಿದ ವಿಶೇಷ ಬೈಕ್
ಲಕ್ನೋ: ಎಲೆಕ್ಟ್ರಿಕ್ ವಾಹನಗಳ ಪ್ರೇಮಿಗಳು ಓದಲೇಬೇಕಾದ ಸುದ್ದಿ! ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಮೈಲೇಜ್ ನೀಡುವ ಬೈಕ್ (Electric Bike) ಅನ್ನು ಉತ್ತರ ಪ್ರದೇಶದ ಬಲರಾಮ್‍ಪುರ ಜಿಲ್ಲೆಯ ಕೃಷ್ಣನಗರ ಗ್ರಾಮದ ಯುವಕ ಶ್ರೀದಮ್ ಹಲ್ದಾರ್ ತಯಾರಿಸಿದ್ದಾರೆ. ಈ ಹೊಸ ತಂತ್ರಜ್ಞಾನದಿಂದ ಶ್ರೀದಮ್ ಎಲ್ಲರ ಗಮನ ಸೆಳೆದಿದ್ದಾರೆ.
ಇ-ಬೈಕ್ ವಿಶೇಷತೆ ಏನು? ಇದರಲ್ಲಿ ಒಟ್ಟು ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಚಾರ್ಜ್ ಮಾಡಿದರೆ ಇದು ಬರೋಬ್ಬರಿ 100 ಕಿಮೀ ದೂರ ಪ್ರಯಾಣಿಸಲಿದೆ.
ಇದನ್ನೂ ಓದಿ: ಹೊಸ ಮನೆ ಕಟ್ಟೋರಿಗೆ ಬಿಗ್ ಶಾಕ್, ಸಿಮೆಂಟ್ ಬೆಲೆ ಭಾರೀ ಏರಿಕೆ
ಇದಲ್ಲದೆ, ಗರಿಷ್ಠ ಗಂಟೆಗೆ 50 ಕಿಮೀ ವೇಗದಲ್ಲಿ ಓಡಲು ಸಾಧ್ಯ. ಇದನ್ನು ಕೇವಲ ₹60,000 ವೆಚ್ಚದಲ್ಲಿ ತಯಾರಿಸಿದ್ದು, ಕಡಿಮೆ ಬಜೆಟ್‌ನಲ್ಲಿ ಉತ್ತಮ ಆಯ್ಕೆಯಾಗಿದೆ.
ಶ್ರೀದಮ್ ಈ ಐಡಿಯಾ ಹೇಗೆ ಪಡೆದರು?
ಖಾಸಗಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಶ್ರೀದಮ್ ಮಾತನಾಡಿದ್ದು, “ನಾನು ಎಲೆಕ್ಟ್ರಿಕ್ ರಿಕ್ಷಾ ನೋಡಿ ಪ್ರೇರಿತನಾದೆ. ಆದರೆ, ರಿಕ್ಷಾ ಬದಲು ಒಂದು ಬೈಕ್ (Electric Bike) ಇದ್ರೆ ಎಲ್ಲಿಗೆ ಬೇಕಾದರೂ ಹೋಗಬಹುದು, ಗುಡ್ಡಗಾಡು ರಸ್ತೆಗಳಲ್ಲೂ ಸುಲಭವಾಗಿ ಓಡಿಸಬಹುದು ಎಂಬ ಆಶಯವಿತ್ತು. ನಾನು ರೈತನಾಗಿದ್ದರಿಂದ ಪ್ರತಿದಿನ ಹಳ್ಳಿಯಿಂದ ಹೋಗು ಬರುವುದು ಕಷ್ಟವಾಗುತ್ತಿತ್ತು. ಅದೃಷ್ಟವಶಾತ್ ನನ್ನ ಕೈಯಿಂದ ಈ ಇ-ಬೈಕ್ ತಯಾರಿಸಲು ಸಾಧ್ಯವಾಯಿತು, ಈಗ ಬಹಳ ಅನುಕೂಲವಾಗಿದೆ,” ಎಂದಿದ್ದಾರೆ.
ಇದನ್ನೂ ಓದಿ: ಒಂದು ಲಕ್ಷಕ್ಕೆ ₹7,100 ಬಡ್ಡಿ ಸಿಗೋ ಎಸ್‌ಬಿಐ ಯೋಜನೆ! ಮಾರ್ಚ್ 31 ಕೊನೆ
ಈ ವಿಶೇಷ ಇ-ಬೈಕ್ ರೈತರಿಗೂ, ದಿನನಿತ್ಯ ಪ್ರಯಾಣಿಕರಿಗೂ ದೊಡ್ಡ ಸಹಾಯವಾಗಲಿದ್ದು, ಜನಪ್ರಿಯವಾಗುವ ಸಾಧ್ಯತೆ ಹೆಚ್ಚಾಗಿದೆ!
Young Inventor Creates Electric Bike with 100km Mileage