ಮಳೆ ನೀರಿನ ಗುಂಡಿಯಲ್ಲಿ 3 ವಿದ್ಯಾರ್ಥಿಗಳ ಮೃತದೇಹ ಪತ್ತೆ
ಶಾಲೆಯಿಂದ ಮನೆಗೆ ಮರಳಿದ 3 ವಿದ್ಯಾರ್ಥಿಗಳ ಮೃತದೇಹ ಮಳೆ ನೀರಿನ ಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ
ಭೋಪಾಲ್: ಶಾಲೆಯಿಂದ ಮನೆಗೆ ಮರಳಿದ 3 ವಿದ್ಯಾರ್ಥಿಗಳ ಮೃತದೇಹ ಮಳೆ ನೀರಿನ ಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ನಡೆದಿದೆ. ನಿನ್ನೆ ಸಂಜೆ ಶಾಲೆಯಲ್ಲಿ ತರಗತಿ ಮುಗಿಸಿದ ವಿದ್ಯಾರ್ಥಿಗಳು ಮನೆಗೆ ಮರಳಿದ್ದರು.
ಶಾಲೆ ಬಿಟ್ಟ ಮೇಲೆ ಮೂರು ವಿದ್ಯಾರ್ಥಿಗಳು ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅಕ್ಕಪಕ್ಕದಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಕೊನೆಗೆ ಹುಡುಕಾಟದ ವೇಳೆ ಗ್ರಾಮದ ಸಮೀಪದ ನೀರಿನ ಗುಂಡಿಯಲ್ಲಿ 3 ಶವಗಳು ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಮೂವರ ಮೃತದೇಹಗಳನ್ನು ವಶಪಡಿಸಿಕೊಂಡು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
3 children go missing after school, found dead in pond
Follow Us on : Google News | Facebook | Twitter | YouTube