ಅಂಗಡಿ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ವೃದ್ಧನಿಗೆ ಥಳಿಸಿ ಹತ್ಯೆ; 3 ಮಂದಿ ಬಂಧನ

ರಾಜಸ್ಥಾನದಲ್ಲಿ ಅಂಗಡಿಯೊಂದರ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ವೃದ್ಧನೊಬ್ಬನನ್ನು ಥಳಿಸಿ ಹತ್ಯೆ ಮಾಡಲಾಗಿದೆ.

Bengaluru, Karnataka, India
Edited By: Satish Raj Goravigere

ಜೈಪುರ: ರಾಜಸ್ಥಾನದಲ್ಲಿ ಜುಲೈ 4 ರಂದು 60 ವರ್ಷದ ವ್ಯಕ್ತಿಯನ್ನು ತನ್ನ ಅಂಗಡಿಯ ಹೊರಗೆ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಕುಲದೀಪ್ ಮೀನಾ (19), ರಾಹುಲ್ ಮೀನಾ ಅಲಿಯಾಸ್ ಸಿಂಧು (18) ಮತ್ತು ಪ್ರದೀಪ್ ಮೀನಾ (19) ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ಆತನನ್ನು ಕೊಂದವರು ಯಾರು ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲದಿದ್ದರೂ, ಆರೋಪಿಗಳನ್ನು ಗುರುತಿಸುವುದು ಕಷ್ಟಕರವಾಗಿತ್ತು ಮತ್ತು ತಾಂತ್ರಿಕ ತನಿಖೆಯ ಆಧಾರದ ಮೇಲೆ ವಿಶೇಷ ತಂಡವು ಮೂವರು ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ಅಂತಿಮವಾಗಿ ಮೂವರನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಗಡಿ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ವೃದ್ಧನಿಗೆ ಥಳಿಸಿ ಹತ್ಯೆ; 3 ಮಂದಿ ಬಂಧನ

ವಿಚಾರಣೆ ವೇಳೆ ಆರೋಪಿ ಕುಲದೀಪ್ ಎಂಬಾತ ವೃದ್ಧ ಅಂಗಡಿ ಮುಂದೆ ಮೂತ್ರ ವಿಸರ್ಜನೆಗೆ ಯತ್ನಿಸಿದ್ದು, ವೃದ್ಧ ಮೂತ್ರ ವಿಸರ್ಜನೆ ಮಾಡದಂತೆ ತಡೆದಿದ್ದಾನೆ. ಇದರಿಂದ ಕುಪಿತಗೊಂಡ ಕುಲದೀಪ್ ಕಬ್ಬಿಣದ ರಾಡ್ ನಿಂದ ವೃದ್ಧನ ತಲೆಗೆ ಹಲವು ಬಾರಿ ಹೊಡೆದಿದ್ದಾನೆ. ಉಳಿದ ಇಬ್ಬರು ಕುಲದೀಪ್ ಸಹಚರರು ಎಂದು ತಿಳಿದುಬಂದಿದೆ.

ನಂತರ ಮೂವರು ಆರೋಪಿಗಳ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.