ಮಹಿಳೆಯನ್ನು ಕಟ್ಟಡದ ಬಾಲ್ಕನಿ ಮೇಲಿನಿಂದ ತಳ್ಳಿದ ಅತ್ತೆ-ಮಾವ
ಮಹಿಳೆಯೊಬ್ಬರನ್ನು ಅತ್ತೆ-ಮಾವ ಕಟ್ಟಡದ ಬಾಲ್ಕನಿಯಿಂದ ತಳ್ಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ದುಷ್ಕೃತ್ಯ ನಡೆದಿದೆ.
ನವದೆಹಲಿ: ಮಹಿಳೆಯೊಬ್ಬರನ್ನು ಅತ್ತೆ-ಮಾವ ಕಟ್ಟಡದ ಬಾಲ್ಕನಿಯಿಂದ ತಳ್ಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ದುಷ್ಕೃತ್ಯ ನಡೆದಿದೆ. ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ 30 ವರ್ಷದ ಮಹಿಳೆಯೊಬ್ಬರು ಮಯೂರ್ ವಿಹಾರ್ ಪ್ರದೇಶದ ಕಟ್ಟಡದ ಟೆರೇಸ್ನಿಂದ ಕೆಳಗಿನ ರಸ್ತೆಗೆ ಬಿದ್ದಿದ್ದಾರೆ.
ಆಕೆಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಆದರೆ ಆಕೆಯ ಸಹೋದರ ತನ್ನ ಸಹೋದರಿಯನ್ನು ಅತ್ತೆ-ಮಾವ ಕಟ್ಟಡದ ಟೆರೇಸ್ನಿಂದ ಕೆಳಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಿಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಡಿಯೋವನ್ನು ದೆಹಲಿ ಮಹಿಳಾ ಆಯೋಗಕ್ಕೂ ಕಳುಹಿಸಿದ್ದಾರೆ. ಈ ಬಗ್ಗೆ ಅಧಿಕಾರಿ ಸ್ವಾತಿ ಮಲಿವಾಲ್ ಪ್ರತಿಕ್ರಿಯಿಸಿದ್ದಾರೆ. ಈ ದೌರ್ಜನ್ಯದ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.
ಏತನ್ಮಧ್ಯೆ, ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೂರ್ವ ಜಿಲ್ಲಾ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಪ್ರಿಯಾಂಕಾ ಕಶ್ಯಪ್ ಹೇಳಿದ್ದಾರೆ. ಕೊಲೆ ಯತ್ನ ಮತ್ತು ಬೆಂಕಿ ಹಚ್ಚುವಿಕೆಯಂತಹ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
30 Year Old Woman Pushed From Terrace Of Building
Follow Us on : Google News | Facebook | Twitter | YouTube